ಕೋರ್ಟ್ ಲೈವ್ ವೀಡಿಯೋ ಪ್ರಸಾರ ಮಾಡುವಂತಿಲ್ಲ: ಹೈಕೋರ್ಟ್‌ಗೆ ವೀಡಿಯೋ ಮೇಲೆ ವಿಶೇಷ ಹಕ್ಕುಸ್ವಾಮ್ಯವಿದೆ- ಕರ್ನಾಟಕ ಹೈಕೋರ್ಟ್
ಕೋರ್ಟ್ ಲೈವ್ ವೀಡಿಯೋ ಪ್ರಸಾರ ಮಾಡುವಂತಿಲ್ಲ: ಹೈಕೋರ್ಟ್‌ಗೆ ವೀಡಿಯೋ ಮೇಲೆ ವಿಶೇಷ ಹಕ್ಕುಸ್ವಾಮ್ಯವಿದೆ- ಕರ್ನಾಟಕ ಹೈಕೋರ್ಟ್
ಹೈಕೋರ್ಟ್ ಕಲಾಪದ ಕೆಲವು ವೀಡಿಯೋ ವೈರಲ್ ಆದ ಬೆನ್ನಲ್ಲೇ ನ್ಯಾಯಾಧೀಶರೊಬ್ಬರ ಮೇಲೆ ಸುಪ್ರೀಂ ಕೋರ್ಟ್ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡ ನಂತರ ಮುಜುಗರದಿಂದ ತಪ್ಪಿಸಿಕೊಳ್ಳಲು ಲೈವ್ ಸ್ಟ್ರೀಮಿಗ್ ಪ್ರಸಾರ ಯಾ ಮರುಪ್ರಸಾರ ಅಥವಾ ರೆಕಾರ್ಡಿಂಗ್ ಪ್ರಸಾರಕ್ಕೆ ಕರ್ನಾಟಕ ಹೈಕೋರ್ಟ್ ನಿರ್ಬಂಧ ವಿಧಿಸಿದೆ.
ಕರ್ನಾಟಕ ಹೈಕೋರ್ಟ್ ಕೋರ್ಟ್ ರೂಂಗಳಲ್ಲಿ ನಡೆಯುವ ಕಲಾಪದ ನೇರ ಪ್ರಸಾರದ ಮೇಲೆ ಹೈಕೋರ್ಟ್‌ಗೆ ವಿಶೇಷ ಹಕ್ಕುಸ್ವಾಮ್ಯವಿದೆ. ಅದನ್ನು ಉಲ್ಲಂಘಿಸಿ ಯಾವುದೇ ವ್ಯಕ್ತಿ ಯಾ ಸಂಸ್ಥೆ ಕಲಾಪದ ಲೈವ್ ಸ್ಟ್ರೀಮಿಂಗ್ ಮಾಡಬಾರದು. ಹೈಕೋರ್ಟ್ ಯೂಟ್ಯೂಬ್ ಚಾನೆಲ್‌ನಲ್ಲಿನ ವೀಡಿಯೋಗಳನ್ನು ರೆಕಾರ್ಡ್ ಮಾಡುವುದಾಗಲೀ, ಪ್ರಸರಣ ಮಾಡುವುದಾಗಿ ಮಾಡುವಂತಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಅನುಮತಿ ಪಡೆದಿರುವ ವ್ಯಕ್ತಿ ಯಾ ಸಂಸ್ಥೆಗೆ ಮಾತ್ರ ಈ ನಿರ್ಬಂಧ ಇರುವುದಿಲ್ಲ. ಅದನ್ನು ಹೊರತುಪಡಿಸಿ ನ್ಯಾಯಾಲಯದ ನಿಯಮ ಉಲ್ಲಂಘಿಸಿದ ವ್ಯಕ್ತಿ ಯಾ ಸಂಸ್ಥೆ ವಿರುದ್ಧ ಕಾನೂನಿನಡಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಬೆಂಗಳೂರಿನ ಗೋರಿಪಾಳ್ಯವನ್ನು ಪಾಕಿಸ್ತಾನಕ್ಕೆ ಹೋಲಿಕೆ ಮಾಡಿದ ನ್ಯಾ. ಶ್ರೀಶಾನಂದ ಅವರ ಕಲಾಪದ ವೀಡಿಯೋ ವೈರಲ್ ಆಗಿರುವುದು ಮತ್ತು ಮಹಿಳಾ ವಕೀಲರೊಬ್ಬರ ಜೊತೆ ಲಘುವಾಗಿ ವರ್ತಿಸಿದ ವೀಡಿಯೋ ಕ್ಲಿಪ್ ದೇಶಾದ್ಯಂತ ಚರ್ಚೆಗೀಡಾಗಿದೆ. ಇದರ ಬೆನ್ನಲ್ಲೇ ಹೈಕೋರ್ಟ್ ನೋಟೀಸ್ ಮೂಲಕ ಎಚ್ಚರಿಕೆ ನೀಡಿದೆ.