-->
ಬುಲ್‌ಡೋಜರ್ ಪ್ರಯೋಗ ಸಂವಿಧಾನಕ್ಕೆ ಮಾಡಿದ ಅಪಚಾರ; ಅಧಿಕಾರಿಗಳು ನ್ಯಾಯಾಧೀಶರಲ್ಲ; ಸುಪ್ರೀಂ ಕೋರ್ಟ್ ಗರಂ

ಬುಲ್‌ಡೋಜರ್ ಪ್ರಯೋಗ ಸಂವಿಧಾನಕ್ಕೆ ಮಾಡಿದ ಅಪಚಾರ; ಅಧಿಕಾರಿಗಳು ನ್ಯಾಯಾಧೀಶರಲ್ಲ; ಸುಪ್ರೀಂ ಕೋರ್ಟ್ ಗರಂ

ಬುಲ್‌ಡೋಜರ್ ಪ್ರಯೋಗ ಸಂವಿಧಾನಕ್ಕೆ ಮಾಡಿದ ಅಪಚಾರ; ಅಧಿಕಾರಿಗಳು ನ್ಯಾಯಾಧೀಶರಲ್ಲ; ಸುಪ್ರೀಂ ಕೋರ್ಟ್ ಗರಂ





ಅಪರಾಧ ಕೃತ್ಯಗಳ ಆರೋಪಿಗಳ ಆಸ್ತಿಗಳನ್ನು ವಿವಿಧ ರಾಜ್ಯಗಳಲ್ಲಿ ಅಕ್ರಮವಾಗಿ ಬುಲ್‌ಡೋಜರ್ ಬಳಸಿ ಧ್ವಂಸಗೊಳಿಸುತ್ತಿರುವ ಘಟನೆಗೆ ಸುಪ್ರೀಂ ಕೋರ್ಟ್ ಕಿಡಿ ಕಾರಿದೆ.


ಸುಪ್ರೀಂ ಕೋರ್ಟ್ ಅನುಮತಿ ಇಲ್ಲದೆ ದೇಶದ ಯಾವುದೇ ಭಾಗದಲ್ಲೂ ಒಂದೇ ಒಂದು ಕಟ್ಟಡ ನೆಲಸಮ ಕಾರ್ಯಾಚರಣೆಯನ್ನು ನಡೆಸಬಾರದು ಎಂದು ಸುಪ್ರೀಂ ಕೋರ್ಟ್ ತಾಕೀತು ಮಾಡಿದೆ.


ಸುಪ್ರೀಂ ಕೋರ್ಟ್‌ನ ನ್ಯಾ. ಬಿ.ಆರ್. ಗವಾಯಿ ಮತ್ತು ನ್ಯಾ. ಕೆ.ವಿ. ವಿಶ್ವನಾಥನ್ ಅವರಿದ್ದ ನ್ಯಾಯಪೀಠ ಈ ತೀರ್ಪು ನೀಡಿದ್ದು, ಬುಲ್‌ಡೋಜರ್ ಬಳಸಿ ಸಾರ್ವಜನಿಕರ ಆಸ್ತಿಪಾಸ್ತಿಗೆ ನಷ್ಟ ಉಂಟು ಮಾಡಿದ ಘಟನೆಗಳನ್ನು ತರಾಟೆಗೆ ತೆಗೆದುಕೊಂಡಿದೆ.


ನಿಯಮಬಾಹಿರವಾಗಿ ಕಟ್ಟಡಗಳನ್ನು ನೆಲಸಮ ಮಾಡುವುದು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ. ಅಧಿಕಾರಿಗಳು ನ್ಯಾಯಾಧೀಶರಲ್ಲ. ಅವರು ಬೇಕಾಬಿಟ್ಟಿ ವರ್ತಿಸುವಂತಿಲ್ಲ. ಸೂಕ್ತ ಕಾನೂನು ವಿಚಾರಣೆ ಬಳಿಕ, ಕೋರ್ಟ್ ನೀಡುವ ಆದೇಶವೇ ದೇಶವ್ಯಾಪಿ ಅನ್ವಯವಾಗುತ್ತದೆ. 


ಪಬ್ಲಿಕ್ ಡೊಮೇನ್‌ನಲ್ಲಿ ನಡೆಯುವ ಹೊರಗಿನ ಅಬ್ಬರ, ಪ್ರಚಾರ, ಮೀಡಿಯಾ ಟ್ರಯಲ್‌ಗಳು ನ್ಯಾಯಪೀಠದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂಬುದನ್ನು ನ್ಯಾಯಪೀಠ ಸ್ಪಷ್ಟಪಡಿಸಿದೆ.


ಕಾನೂನು ಬಾಹಿರವಾಗಿ ಒಂದೇ ಒಂದು ಕಟ್ಟಡವನ್ನು ನೆಲ ಮಾಡಿದರೂ ಅದು ಸಂವಿಧಾನಾತ್ಮಕ ತತ್ವಗಳಿಗೆ ಅಪಚಾರವಾಗುತ್ತದೆ ಎಂದು ಸುಪ್ರೀಂ ಕೋರ್ಟ್‌ ವಿಶ್ಲೇಷಿಸಿದೆ.

ಬುಲ್‌ಡೋಜರ್ ಕಾರ್ಯಾಚರಣೆಯ ಕುರಿತಂತೆ ಸೆಪ್ಟಂಬರ್ 2ರ ವಿಚಾರಣೆಯ ಬಳಿಕ ವ್ಯಕ್ತವಾಗಿರುವ ಹೇಳಿಕೆಗಳನ್ನು ಉಲ್ಲೇಖಿಸಿದ ಸುಪ್ರೀಂ ಕೋರ್ಟ್, ನೆಲಸಮ ಕಾರ್ಯಾಚರಣೆಯ ಕುರಿತು ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಲು ಬಯಸಿರುವುದಾಗಿ ನ್ಯಾಯಪೀಠ ತಿಳಿಸಿತು.


Ads on article

Advertise in articles 1

advertising articles 2

Advertise under the article