ಎಲ್ಲ ಜಿಲ್ಲೆಗಳಲ್ಲಿ ಫುಲ್ ಟೈಮ್ ಡಿಫೆನ್ಸ್ ಕೌನ್ಸೆಲ್‌ಗಳ ನೇಮಕ: ಅತ್ಯುತ್ತಮ ವೇತನದ ಹುದ್ದೆಗೆ ವಕೀಲರಿಗೆ ಸುವರ್ಣಾವಕಾಶ
ಎಲ್ಲ ಜಿಲ್ಲೆಗಳಲ್ಲಿ ಫುಲ್ ಟೈಮ್ ಡಿಫೆನ್ಸ್ ಕೌನ್ಸೆಲ್‌ಗಳ ನೇಮಕ: ಅತ್ಯುತ್ತಮ ವೇತನದ ಹುದ್ದೆಗೆ ವಕೀಲರಿಗೆ ಸುವರ್ಣಾವಕಾಶ
ಕರ್ನಾಟಕ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪೂರ್ಣಾವಧಿ (ಫುಲ್ ಟೈಮ್) ಡಿಫೆನ್ಸ್ ಕೌನ್ಸೆಲ್‌ಗಳ ಹುದ್ದೆಗೆ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ.
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಈ ಬಗ್ಗೆ ಅಧಿಸೂಚನೆ ಪ್ರಕಟಿಸಿದ್ದು, ಅತ್ಯುತ್ತಮ ವೇತನದ ಹುದ್ದೆಗೆ ನಿಯುಕ್ತಿಗೊಳ್ಳಲು ವಕೀಲರಿಗೆ ಸುವರ್ಣಾವಕಾಶ ಒದಗಿಬಂದಿದೆ.
ಡಿ ಡಬ್ಲು ಪಿ ಯು ಟಿ ವೈ ಮತ್ತು ಸಹಾಯಕ ಲೀಗಲ್ ಏಯ್ಡ್ ಡಿಫೆನ್ಸ್ ಕೌನ್ಸೆಲ್ ಹುದ್ದೆಗೆ (DWPUTY AND ASSISTANT LEGAL AID DEFNCE COUNSEL) ಅರ್ಜಿ ಆಹ್ವಾನಿಸಲಾಗಿದೆ.
ಈ ಬಗ್ಗೆ ಅಧಿಸೂಚನೆಯನ್ನು ಪ್ರಕಟಿಸಲಾಗಿದ್ದು, ಎಲ್ಲ ಜಿಲ್ಲೆ ಮತ್ತು ತಾಲೂಕುಗಳ ವಕೀಲರ ಸಂಘ ಮತ್ತು ಕಾನೂನು ಸೇವೆಗಳ ಪ್ರಾಧಿಕಾರದ ಕಚೇರಿಯಲ್ಲಿ ಹೆಚ್ಚಿನ ಮಾಹಿತಿಯನ್ನು ಹಾಗೂ ಅರ್ಜಿಯನ್ನು ಪಡೆಯಬಹುದು.
ಈ ಹುದ್ದೆಯ ಜೊತೆಗೆ ಇನ್ನಷ್ಟು ಹುದ್ದೆಗಳ ನಿಯುಕ್ತಿಗಾಗಿ ಈಗಾಗಲೇ ಹಲವಾರು ಜಿಲ್ಲೆಗಳ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಹುದ್ದೆಗೆ ನೇಮಕಗೊಂಡ ಅರ್ಹ ಅಭ್ಯರ್ಥಿಗೆ ಉತ್ತಮ ಸಂಭಾವನೆಯ ಕೂಡ ಇರುತ್ತದೆ. ಇದೊಂದು ಉತ್ತಮ ಅವಕಾಶವಾಗಿದೆ. ಆಸಕ್ತ ವಕೀಲರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ವಿನಂತಿಸಿಕೊಳ್ಳಲಾಗಿದೆ.