-->
ಪೌರ ಕಾರ್ಮಿಕರಿಗೆ ಅಗೌರವ ತೋರುವುದು ಶಿಕ್ಷಾರ್ಹ ಅಪರಾಧ: ಪೌರಾಡಳಿತ ನಿರ್ದೇಶನಾಲಯ

ಪೌರ ಕಾರ್ಮಿಕರಿಗೆ ಅಗೌರವ ತೋರುವುದು ಶಿಕ್ಷಾರ್ಹ ಅಪರಾಧ: ಪೌರಾಡಳಿತ ನಿರ್ದೇಶನಾಲಯ

ಪೌರ ಕಾರ್ಮಿಕರಿಗೆ ಅಗೌರವ ತೋರುವುದು ಶಿಕ್ಷಾರ್ಹ ಅಪರಾಧ: ಪೌರಾಡಳಿತ ನಿರ್ದೇಶನಾಲಯ





ರಾಜ್ಯದಲ್ಲಿ ಸ್ವಚ್ಚತಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಪೌರ ಕಾರ್ಮಿಕರ ಜೊತೆಗೆ ಸೌಹಾರ್ದದಿಂದ ವರ್ತಿಸಬೇಕು. ಅವರಿಗೆ ಅಗೌರವ ತೋರುವುದು ಶಿಕ್ಷಾರ್ಹ ಅಪರಾಧ ಎಂದು ಪೌರಾಡಳಿತ ನಿರ್ದೇಶನಾಲಯ ಹೇಳಿದೆ.


ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಪತ್ರವನ್ನು ಉಲ್ಲೇಖಿಸಿ ಪೌರಾಡಳಿತ ನಿರ್ದೇಶನಾಲಯ ಈ ನಿರ್ದೇಶನ ಹೊರಡಿಸಿದೆ.


ರಾಜ್ಯದಲ್ಲಿ ಅಸ್ಪೃಶ್ಯತೆಯನ್ನು ನಿಷೇಧಿಸಲಾಗಿದೆ. ಯಾವುದೇ ರೂಪದಲ್ಲಿ ಅದರ ಆಚರಣೆಯು ಅಪರಾಧವಾಗುತ್ತದೆ. ಪೌರ ಕಾರ್ಮಿಕರ ಮೇಲೆ ಹಲ್ಲೆ ನಡೆಸುವುದು, ಜಾತಿ ಹೆಸರಲ್ಲಿ ನಿಂದಿಸಿವುದು ಶಿಕ್ಷಾರ್ಹ ಅಪರಾಧ ಎಂದು ನಿರ್ದೇಶನದಲ್ಲಿ ತಿಳಿಸಲಾಗಿದೆ.


ಸ್ವಚ್ಚತಾ ಕಾರ್ಮಿಕರನ್ನು ಗೌರವಿಸುವುದು ನೈತಿಕ ಬಾಧ್ಯತೆ ಅಷ್ಟೇ ಅಲ್ಲ, ಸಮಾಜದ ಕರ್ತವ್ಯವೂ ಆಗಿದೆ. ಹೀಗಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸದಸ್ಯರನ್ನು ಜಾತಿ ಹೆಸರಿನಲ್ಲಿ ನಿಂದಿಸುವುದು ಮತ್ತು ಅಪಮಾನ ಮಾಡುವುದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ (ದೌರ್ಜನ್ಯ ತಡೆ) ಕಾಯ್ದೆಯ ಪ್ರಕಾರ ಶಿಕ್ಷಾರ್ಹ ಅಪರಾಧವಾಗುತ್ತದೆ ಎಂದು ಅಧಿಸೂಚನೆಯನ್ನು ಸ್ಪಷ್ಟಪಡಿಸಲಾಗಿದೆ.



Ads on article

Advertise in articles 1

advertising articles 2

Advertise under the article