-->
ವರ್ಷದಿಂದ ಜಾಮೀನು ಅರ್ಜಿ ವಿಚಾರಣೆ: ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂದು ಕಿಡಿ ಕಾರಿದ ಸುಪ್ರೀಂ ಕೋರ್ಟ್‌

ವರ್ಷದಿಂದ ಜಾಮೀನು ಅರ್ಜಿ ವಿಚಾರಣೆ: ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂದು ಕಿಡಿ ಕಾರಿದ ಸುಪ್ರೀಂ ಕೋರ್ಟ್‌

ವರ್ಷದಿಂದ ಜಾಮೀನು ಅರ್ಜಿ ವಿಚಾರಣೆ: ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂದು ಕಿಡಿ ಕಾರಿದ ಸುಪ್ರೀಂ ಕೋರ್ಟ್‌





ಒಂದು ವರ್ಷದಿಂದ ಜಾಮೀನು ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಕೋರ್ಟ್‌ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್‌, ನ್ಯಾಯಾಲಯಗಳ ಈ ಧೋರಣೆಯು ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.


ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿ ಕೆ.ವಿ. ವಿಶ್ವನಾಥನ್ ಅವರಿದ್ದ ನ್ಯಾಯಪೀಠ, ಜಾಮೀನು ಅರ್ಜಿಗಳ ವಿಳಂಬ ಇತ್ಯರ್ಥಕ್ಕೆ ಕಿಡಿ ಕಾರಿದೆ.


ಒಂದು ವರ್ಷದಿಂದ ಅಲಹಾಬಾದ್ ಹೈಕೋರ್ಟ್‌ನಲ್ಲಿ ಜಾಮೀನು ಅರ್ಜಿಗಳ ವಿಚಾರಣೆ ನಡೆಯುತ್ತಿದೆ. ಆಗಸ್ಟ್‌ 2023ರಿಂದ ಬಾಕಿ ಉಳಿದಿರುವ ಜಾಮೀನು ಅರ್ಜಿಗಳನ್ನು ಪದೇ ಪದೇ ಮುಂದೂಡಲಾಗುತ್ತಿದೆ. ಅಲಹಾಬಾದ್ ಹೈಕೋರ್ಟ್‌ ಈ ನಡೆಗೆ ಸುಪ್ರೀಂ ಕೋರ್ಟ್ ನ್ಯಾಯಪೀಠ ಕಠಿಣ ಶಬ್ದಗಳಿಂದ ತಪರಾಕಿ ನೀಡಿದೆ.


ಹೈಕೋರ್ಟ್‌ನ ಧೋರಣೆಗೆ ಮೆಚ್ಚುಗೆ ಸೂಚಿಸಲಾಗದು. ಅಂತಹ ಪ್ರಕರಣಗಳಲ್ಲಿ ಒಂದು ದಿನದ ವಿಳಂಬವೂ ಆರೋಪಿಗಳ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ನ್ಯಾಯಪೀಠ ಆಕ್ರೋಶ ವ್ಯಕ್ತಪಡಿಸಿದೆ.


ಅಲಹಾಬಾದ್ ಹೈಕೋರ್ಟ್‌ನಲ್ಲಿ ಏನು ಸಮಸ್ಯೆ ಇದೆ ಎಂದು ಸ್ವತಃ ನ್ಯಾಯಪೀಠವೇ ಪ್ರಶ್ನೆ ಮಾಡಿತು. ಈ ಬಗ್ಗೆ ನ್ಯಾಯಪೀಠದ ಪ್ರಶ್ನೆಗೆ ಉತ್ತರ ನೀಡಿದ ಹಿರಿಯ ವಕೀಲರ ಸಿದ್ದಾರ್ಥ್ ದವೆ, ಅಲ್ಲಿನ ಹೈಕೋರ್ಟ್ ನ್ಯಾಯಮೂರ್ತಿಗಳ ಮೇಲೆ ಅತಿಯಾದ ಹೊರೆ ಮತ್ತು ಅತಿಯಾದ ಕೆಲಸದ ಒತ್ತಡ ಇದೆ ಎಂದರು.


ಈ ಪ್ರಕರಣ ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬಂದಾಗ, ಅದನ್ನು ತ್ವರಿತವಾಗಿ ಆಲಿಸಿ ವಿಲೇವಾರಿ ಮಾಡುವಂತೆ ಹೈಕೋರ್ಟ್‌ಗೆ ಸೂಚಿಸಿ ನ್ಯಾಯಪೀಠ ಆದೇಶ ಹೊರಡಿಸಿತು.


ಪ್ರಕರಣ: ವಾಜಿದ್ Vs ಉತ್ತರ ಪ್ರದೇಶ ಸರ್ಕಾರ (ಸುಪ್ರೀಂ ಕೋರ್ಟ್‌)

Ads on article

Advertise in articles 1

advertising articles 2

Advertise under the article