-->
ಬಾಲ್ಯ ವಿವಾಹ: ಪತಿ, ಅತ್ತೆ ಮಾವನಿಗೂ ಒಂದು ವರ್ಷದ ಜೈಲು, ಬಾಲಕಿಯ ಹೆತ್ತವರಿಗೂ ಕಾರಾಗೃಹದ ಶಿಕ್ಷೆ - ಮಂಗಳೂರು ವಿಶೇಷ ನ್ಯಾಯಾಲಯದ ತೀರ್ಪು

ಬಾಲ್ಯ ವಿವಾಹ: ಪತಿ, ಅತ್ತೆ ಮಾವನಿಗೂ ಒಂದು ವರ್ಷದ ಜೈಲು, ಬಾಲಕಿಯ ಹೆತ್ತವರಿಗೂ ಕಾರಾಗೃಹದ ಶಿಕ್ಷೆ - ಮಂಗಳೂರು ವಿಶೇಷ ನ್ಯಾಯಾಲಯದ ತೀರ್ಪು

ಬಾಲ್ಯ ವಿವಾಹ: ಪತಿ, ಅತ್ತೆ ಮಾವನಿಗೂ ಒಂದು ವರ್ಷದ ಜೈಲು, ಬಾಲಕಿಯ ಹೆತ್ತವರಿಗೂ ಕಾರಾಗೃಹದ ಶಿಕ್ಷೆ - ಮಂಗಳೂರು ವಿಶೇಷ ನ್ಯಾಯಾಲಯದ ತೀರ್ಪು






ಮಂಗಳೂರಿನಲ್ಲಿ ನಡೆದಿದ್ದ ಬಾಲ್ಯ ವಿವಾಹಕ್ಕೆ ಸಂಬಂಧಿಸಿದಂತೆ ಬಾಲಕಿಯನ್ನು ಮದುವೆಯಾದ ಆಕೆಯ ಪತಿ ಮತ್ತು ಅತ್ತೆ ಹಾಗೂ ಮಾವನಿಗೆ ಒಂದು ವರ್ಷದ ಜೈಲು ಶಿಕ್ಷೆ ವಿಧಿಸಿದ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ತ್ವರಿತ ಗತಿ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ಅದೇ ರೀತಿ, ಬಾಲಕಿಯ ಹೆತ್ತವರಿಗೂ ಒಂದು ವರ್ಷದ ಕಾರಾಗೃಹದ ಶಿಕ್ಷೆ ನೀಡಿದೆ.


ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ತ್ವರಿತ ಗತಿ ವಿಶೇಷ ನ್ಯಾಯಾಲಯ (ಪೋಕ್ಸೊ-೨) ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಮಾನು ಕೆ ಎಸ್ ಈ ತೀರ್ಪು ನೀಡಿದ್ದಾರೆ.


ಬಾಲಕಿಯನ್ನು ಮದುವೆಯಾದ ವ್ಯಕ್ತಿ, ಆತನ ತಂದೆ ಮತ್ತು ತಾಯಿ, ಅದೇ ರೀತಿ, ಸಂತ್ರಸ್ತ ಬಾಲಕಿಯ ತಂದೆ ಮತ್ತು ತಾಯಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ತ್ವರಿತ ಗತಿ ವಿಶೇಷ ನ್ಯಾಯಾಲಯ ಒಂದು ವರ್ಷಗಳ ಕಠಿಣ ಜೈಲುವಾಸದ ಶಿಕ್ಷೆಯನ್ನು ವಿಧಿಸಿದೆ.


ಬಾಲಕಿಯನ್ನು ವಿವಾಹವಾದ ಉಳ್ಳಾಲ ತಾಲೂಕು ಮಂಜನಾಡಿ ಗ್ರಾಮದ ಮೋಟೆ ಪದವು ನಿವಾಸಿ ಮಹಮ್ಮದ್ ಇಂತಿಯಾಜ್ ಮತ್ತು ಆತನ ತಂದೆ ಕೆ ಐ ಮೊಹಮ್ಮದ್, ತಾಯಿ ಮೈಮುನಾ, ಸಂತ್ರಸ್ತ ಬಾಲಕಿಯ ತಂದೆ ಬಂಟ್ವಾಳ ತಾಲೂಕು ಫರಂಗಿಪೇಟೆ ರಾಮಲ್ಕಟ್ಟೆಯ ಅಬ್ದುಲ್ ಖಾದರ್ ಹಾಗೂ ಬಾಲಕಿಯ ತಾಯಿ ರಮ್ಲತ್ ಶಿಕ್ಷೆಗೆ ಒಳಗಾದವರು.


ಮಹಮ್ಮದ್ ಇಮ್ತಿಯಾಜ್ 2023ರ ಮೇ 31ರಂದು ಅಪ್ರಾಪ್ತ ವಯಸ್ಸಿನ ಹುಡುಗಿಯನ್ನು ಮದುವೆಯಾಗಿದ್ದ. ಆತನ ತಂದೆ ತಾಯಿ ಹಾಗೂ ಸಂತ್ರಸ್ತ ಬಾಲಕಿಯ ತಂದೆ ತಾಯಿ ಸೇರಿ ಈ ಮದುವೆ ಮಾಡಿಸಿದ್ದರು. 2023ರ ಜೂನ್ ಒಂದರಂದು ಉಳ್ಳಾಲ ತಾಲೂಕು ಕೈರಂಗಳ ಗ್ರಾಮದ ನಂದರ ಪದವಿನಲ್ಲಿ ಔತಣಕೂಟ ಏರ್ಪಡಿಸಲಾಗಿತ್ತು.


ಬಾಲಕಿಯನ್ನು ಮದುವೆಯಾದ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ನೀಡಿದ ದೂರಿನ ಆಧಾರದಲ್ಲಿ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಥಮ ಮಾಹಿತಿ ವರದಿ ದಾಖಲಾಗಿತ್ತು. ಮಹಿಳಾ ಠಾಣೆಯ ಇನ್ಸ್ಪೆಕ್ಟರ್ ರಾಜೇಂದ್ರ ಅವರು ಆರೋಪಿಗಳ ವಿರುದ್ಧ ಪೋಕ್ಸೊ ಹಾಘೂ ಬಾಲ್ಯ ವಿವಾಹ ನಿಷೇಧ ಕಾಯ್ದೆಯ ಸೆಕ್ಷನ್ 9 ಸೆಕ್ಷನ್ 10 ಹಾಗೂ ಸೆಕ್ಷನ್ 11ರ ಪ್ರಕಾರ ಪ್ರಕರಣವನ್ನು ದಾಖಲಿಸಿದ್ದರು.


ಸೆಕ್ಷನ್ 9 (ವಯಸ್ಕ ಪುರುಷ ಅಪ್ರಾಪ್ತ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ವಿವಾಹವಾಗುವುದು) ಸೆಕ್ಷನ್ 10 (ವಯಸ್ಕ ಪುರುಷನಿಗೆ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಮದುವೆ ಮಾಡಿ ಕೊಡುವುದು) ಹಾಗೂ ಸೆಕ್ಷನ್ 11 (ಬಾಲಕಿಯ ಪೋಷಕರು ವಿವಾಹಕ್ಕೆ ಸಮ್ಮತಿಸುವುದು ಹಾಗೂ ವಿಧಿಗಳನ್ನು ನಿರ್ವಹಿಸುವುದು).





ಈ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನು ಸಲ್ಲಿಸಲಾಗಿತ್ತು


ಬಾಲಕಿಯನ್ನು ಮದುವೆ ಮಾಡಿಕೊಟ್ಟದ್ದಕ್ಕೆ ಆಕೆಯ ತಂದೆ ತಾಯಿಗೆ ಬಾಲ್ಯ ವಿವಾಹ ಕಾಯ್ದೆಯ ಸೆಕ್ಷನ್ 10 ಮತ್ತು ಸಚ್ಚನ್ 11ರ ಅಡಿ ಹೆಚ್ಚುವರಿ ಜಿಲ್ಲಾಮಟ್ಟಗತಿಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಮಾನು ಕೆ ಎಸ್ ತಲಾ ಒಂದು ವರ್ಷದ ಕಠಿಣ ಜೈಲು ಶಿಕ್ಷೆ ಹಾಗೂ ಐದು ಸಾವಿರ ರೂಪಾಯಿ ದಂಡವನ್ನು ವಿಧಿಸಿ ಆದೇಶ ಹೊರಡಿಸಿದ್ದಾರೆ.


ವರನ ತಂದೆ ತಾಯಿಗೆ ಈ ಕಾಯ್ದೆಯ ಸೆಕ್ಷನ್ 10ರಡಿ ತಲಾ ಒಂದು ವರ್ಷದ ಕಠಿಣ ಶಿಕ್ಷೆ ಹಾಗೂ ಐದು ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ಬಾಲಕಿಯನ್ನು ಮದುವೆಯಾದ ಮೊಹಮ್ಮದ್ ಇಂತಿಯಾಜ್‌ಗೆ ಕಾಯ್ದೆಯ ಸೆಕ್ಷನ್ 9ರ ಅಡಿ ಒಂದು ವರ್ಷ ಕಠಿಣ ಶಿಕ್ಷೆ ಮತ್ತು 5000 ದಂಡ ವಿಧಿಸಿ ಆದೇಶ ಹೊರಡಿಸಲಾಗಿದೆ.


ಸರಕಾರದ ಪರವಾಗಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ನಾಯರಿ ವಾದ ಮಂಡಿಸಿದ್ದರು.




Ads on article

Advertise in articles 1

advertising articles 2

Advertise under the article

  

  

  

Join our WhatsApp Channel Powered By : Online Pudu