-->
ಪತ್ನಿಗೆ ಪತಿಯಷ್ಟೇ ವೇತನವಿದ್ದರೆ ವಿಚ್ಚೇದನ ಬಳಿಕ ಜೀವನಾಂಶ ಪಡೆಯುವ ಹಕ್ಕಿಲ್ಲ: ಸುಪ್ರೀಂ ಕೋರ್ಟ್‌

ಪತ್ನಿಗೆ ಪತಿಯಷ್ಟೇ ವೇತನವಿದ್ದರೆ ವಿಚ್ಚೇದನ ಬಳಿಕ ಜೀವನಾಂಶ ಪಡೆಯುವ ಹಕ್ಕಿಲ್ಲ: ಸುಪ್ರೀಂ ಕೋರ್ಟ್‌

ಪತ್ನಿಗೆ ಪತಿಯಷ್ಟೇ ವೇತನವಿದ್ದರೆ ವಿಚ್ಚೇದನ ಬಳಿಕ ಜೀವನಾಂಶ ಪಡೆಯುವ ಹಕ್ಕಿಲ್ಲ: ಸುಪ್ರೀಂ ಕೋರ್ಟ್‌





ಗಂಡನಷ್ಟೇ ವೇತನವಿದ್ದರೆ ವಿಚ್ಚೇದನ ಬಳಿಕ ಪತ್ನಿಗೆ ಜೀವನಾಂಶ ಪಡೆಯುವ ಹಕ್ಕಿಲ್ಲ ಎಂದು ಸುಪ್ರೀಂ ಕೋರ್ಟ್‌ ಮಹತ್ವದ ಆದೇಶ ನೀಡಿದೆ.


ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಅಭಯ ಶ್ರೀನಿವಾಸ ಓಕಾ ಮತ್ತು ನ್ಯಾಯಮೂರ್ತಿ ಉಜ್ವಲ್ ಭುಯಾನ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿದೆ.


ಮಧ್ಯಪ್ರದೇಶದ ಮೂಲದ ಸಹಾಯಕ ಪ್ರಾಧ್ಯಾಪಕಿಯಾಗಿ ಕೆಲಸ ಮಾಡುತ್ತಿರುವ ಮಹಿಳೆ ವಿಚ್ಚೇದನ ನೀಡಿದ ಬಳಿಕ ಪತಿಯಿಂದ ತನಗೆ ಜೀವನಾಂಶ ಕೊಡಿಸಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ತಿರಸ್ಕರಿಸಿತ್ತು.


ಆ ಬಳಿಕ ಮಧ್ಯಪ್ರದೇಶ ಹೈಕೋರ್ಟ್ ಕೂಡ ಅರ್ಜಿಯನ್ನು ತಿರಸ್ಕರಿಸಿದ ಹಿನ್ನೆಲೆಯಲ್ಲಿ ಹೈಕೋರ್ಟ್‌ ತೀರ್ಪನ್ನು ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.


ಅವರು ಸಲ್ಲಿಸಿದ್ದ ಮೇಲ್ಮನವಿಯ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಪೀಠ ಈ ತೀರ್ಪು ನೀಡಿದೆ.


ಸ್ವತಂತ್ರವಾಗಿ ತನ್ನನ್ನು ಆರೈಕೆ ಮಾಡುವ ಸಾಮರ್ಥ್ಯವಿರುವ ಮಹಿಳೆಯು ಗಂಡನಿಂದ ಜೀವನಾಂಶ ಪಡೆಯುವ ಹಕ್ಕಿಲ್ಲ. ಪತ್ನಿ ಸ್ವತಃ ದುಡಿಯುವವಳಾಗಿದ್ದು, ಪತಿ ಮಾಡುವ ಹುದ್ದೆಗೆ ಸಮಾನವಾದ ಹುದ್ದೆಯಲ್ಲಿ ಇದ್ದರೆ ಜೀವಾಂಶ ಹಕ್ಕು ಇರುವುದಿಲ್ಲ ಎಂದು ನ್ಯಾಯಪೀಠ ತನ್ನ ತೀರ್ಪಿನಲ್ಲಿ ಹೇಳಿದೆ.


ಪತ್ನಿಯು ತಿಂಗಳಿಗೆ 60,000/- ರೂ. ಸಂಬಳ ಪಡೆಯುತ್ತಿದ್ದಾರೆ. ಉನ್ನತ ಹುದ್ದೆಯಲ್ಲಿ ಉದ್ಯೋಗದಲ್ಲಿ ಇದ್ದಾರೆ ಎಂದು ಪತಿ ವಾದಿಸಿದ್ದರು. ಆದರೆ, ತನ್ನ ಗಂಡ ತಿಂಗಳಿಗೆ ಒಂದು ಲಕ್ಷ ರೂ. ಆದಾಯ ಹೊಂದಿದ್ದಾರೆ ಎಂದು ಪತ್ನಿ ಹೇಳಿಕೆ ನೀಡಿದ್ದರು.


ಆದಾಯದ ಗೊಂದಲದ ಕಾರಣಕ್ಕೆ ಒಂದು ವರ್ಷದ ವೇತನದ ವಿವರ ನೀಡುವಂತೆ ಇಬ್ಬರಿಗೂ ನ್ಯಾಯಪೀಠ ನಿರ್ದೇಶನ ನೀಡಿತ್ತು. ಆದರೆ, ಪತಿ ಮತ್ತು ಪತ್ನಿ ಇಬ್ಬರೂ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಜೀವನಾಂಶ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.



Ads on article

Advertise in articles 1

advertising articles 2

Advertise under the article