-->
ಜಡ್ಜ್ ಮನೆಯಲ್ಲಿ ಭಾರೀ ಹಣ ಪತ್ತೆ: ಎಲ್ಲ ನ್ಯಾಯಾಂಗ ಜವಾಬ್ದಾರಿ ಕರ್ತವ್ಯದಿಂದ ನ್ಯಾ ವರ್ಮಾ ಬಿಡುಗಡೆ

ಜಡ್ಜ್ ಮನೆಯಲ್ಲಿ ಭಾರೀ ಹಣ ಪತ್ತೆ: ಎಲ್ಲ ನ್ಯಾಯಾಂಗ ಜವಾಬ್ದಾರಿ ಕರ್ತವ್ಯದಿಂದ ನ್ಯಾ ವರ್ಮಾ ಬಿಡುಗಡೆ

ಜಡ್ಜ್ ಮನೆಯಲ್ಲಿ ಭಾರೀ ಹಣ ಪತ್ತೆ: ಎಲ್ಲ ನ್ಯಾಯಾಂಗ ಜವಾಬ್ದಾರಿ ಕರ್ತವ್ಯದಿಂದ ನ್ಯಾ ವರ್ಮಾ ಬಿಡುಗಡೆ





ನ್ಯಾಯಮೂರ್ತಿ ಯಶವಂತ ವರ್ಮಾ ಅವರ ಅಧಿಕೃತ ನಿವಾಸದಲ್ಲಿ ಅಪಾರ ಪ್ರಮಾಣದ ಹಣ ಪತ್ತೆಯಾದ ಆರೋಪದಲ್ಲಿ ಅವರನ್ನು ತಕ್ಷಣದಿಂದ ಎಲ್ಲ ನ್ಯಾಯಾಂಗ ಜವಾಬ್ದಾರಿ ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದೆ. ಅವರ ವಿರುದ್ಧ ತನಿಖೆ ಆರಂಭಿಸಲಾಗಿದೆ.


ನ್ಯಾ. ವರ್ಮಾ ನಿವಾಸದಲ್ಲಿ ಸುಟ್ಟು ಹೋದ ಬಂಡ್‌ ಇದ್ದ ಚೀಲಗಳು ನನ್ನದಲ್ಲ ಎಂದು ವರ್ಮಾ ಹೇಳಿದ್ದರು. ನನ್ನ ವಿರುದ್ಧ ಪಿತೂರಿ ನಡೆಸಲಾಗಿದೆ, ಹಣ ನನ್ನದಲ್ಲ ಎಂದು ತಮ್ಮ ವಿರುದ್ಧದ ಆರೋಪಗಳನ್ನು ಅಲ್ಲಗಳೆದಿದ್ದರು. ಇದರ ಬೆನ್ನಲ್ಲೇ ಅವರನ್ನು ನ್ಯಾಯಾಂಗ ಕರ್ತವ್ಯಗಳಿಂದ ಬಿಡುಗಡೆಗೊಳಿಸುವ ಆದೇಶ ಹೊರಬಿದ್ದಿದೆ.


ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳ ಆದೇಶದ ನಂತರ ನೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ಕೆ. ಉಪಾಧ್ಯಾಯ ಈ ನಿರ್ಧಾರ ಪ್ರಕಟಿಸಿದ್ದಾರೆ. ಇದಕ್ಕೂ ಮುನ್ನ, ಬೆಂಕಿ ಅವಘಡದಲ್ಲಿ ನಗದು ಪತ್ತೆಯಾದ ಘಟನೆ ವೈರಲ್ ಆದ ಕೂಡಲೇ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನ ಘಟನೆ ಬಗ್ಗೆ ಆಂತರಿಕ ತನಿಖೆಗೆ ಆದೇಶ ನೀಡಿದ್ದರು.


ಅದರಂತೆ ನೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ಕೆ. ಉಪಾಧ್ಯಾಯ ವಿಚಾರಣಾ ವರದಿ ನೀಡಿದರು. ಈ ವರದಿ ಹಾಗೂ ಬೆಂಕಿ ಆಕಸ್ಮಿಕದ ಫೋಟೋ ಮತ್ತು ವೀಡಿಯೋಗಳನ್ನು ಸುಪ್ರೀಂ ಕೋರ್ಟ್ ತನ್ನ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ.


ಭಾರತೀಯ ಕರೆನ್ಸಿ ನೋಟುಗಳ ನಾಲ್ಕರಿಂದ ಐದು ಸುಟ್ಟ ಚೀಲಗಳು ಕಂಡುವಂದಿದೆ ಎಂದು ಹೇಳುವ ಮಾತುಕತೆಗಳು ಈ ವೀಡಿಯೋದಲ್ಲಿ ಇದೆ. ಈ ಆರೋಪಗಳನ್ನು ತಳ್ಳಿ ಹಾಕಿರುವ ವರ್ಮಾ, ಇದು ನನ್ನನ್ನು ಮತ್ತು ನನ್ನ ಕುಟುಂಬವನ್ನು ಸಿಲುಕಿಸಲು ನಡೆಸಲಾಗಿರುವ ಉದ್ದೇಶಪೂರ್ವಕ ಪಿತೂರಿ ಎಂದು ಹೇಳಿದ್ದಾರೆ.


ನ್ಯಾ. ವರ್ಮಾ ಅವರನ್ನು ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾವಣೆ ಮಾಡಲಾಗಿರುವ ನಿರ್ಧಾರವನ್ನು ಅಲಹಾಬಾದ್ ಹೈಕೋರ್ಟ್ ವಕೀಲರು ವಿರೋಧಿಸಿದ್ದಾರೆ. ಅವರನ್ನು ಅಲಹಾಬಾದ್ ಮಾತ್ರವಲ್ಲ ದೇಶದ ಯಾವುದೇ ಹೈಕೋಟ್‌ಗೂ ವರ್ಗಾವಣೆ ಮಾಡಬಾರದು. ಅವರು ನೀಡಿದ ಎಲ್ಲ ತೀರ್ಪುಗಳನ್ನು ಪುನರ್ ಪರಿಶೀಲಿಸಬೇಕು ಎಂದು ವಕೀಲರು ಆಗ್ರಹಿಸಿದ್ದಾರೆ.


Ads on article

Advertise in articles 1

advertising articles 2

Advertise under the article