-->
ಎನ್‌ಐ ಕಾಯ್ದೆ: ಖುಲಾಸೆ ಆದೇಶದ ವಿರುದ್ಧ ಸೆಷನ್ಸ್‌ ನ್ಯಾಯಾಲಯದಲ್ಲಿ ಮೇಲ್ಮನವಿ- ಕರ್ನಾಟಕ ಹೈಕೋರ್ಟ್‌ ಗ್ರೀನ್ ಸಿಗ್ನಲ್

ಎನ್‌ಐ ಕಾಯ್ದೆ: ಖುಲಾಸೆ ಆದೇಶದ ವಿರುದ್ಧ ಸೆಷನ್ಸ್‌ ನ್ಯಾಯಾಲಯದಲ್ಲಿ ಮೇಲ್ಮನವಿ- ಕರ್ನಾಟಕ ಹೈಕೋರ್ಟ್‌ ಗ್ರೀನ್ ಸಿಗ್ನಲ್

ಎನ್‌ಐ ಕಾಯ್ದೆ: ಖುಲಾಸೆ ಆದೇಶದ ವಿರುದ್ಧ ಸೆಷನ್ಸ್‌ ನ್ಯಾಯಾಲಯದಲ್ಲಿ ಮೇಲ್ಮನವಿ- ಕರ್ನಾಟಕ ಹೈಕೋರ್ಟ್‌ ಗ್ರೀನ್ ಸಿಗ್ನಲ್





ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ಸ್ ಕಾಯ್ದೆಯಡಿ ಪ್ರಕರಣವೊಂದರಲ್ಲಿ ಆರೋಪಿ ಖುಲಾಸೆಗೊಂಡರೆ, ದೂರುದಾರರು ಸೆಷನ್ಸ್ ನ್ಯಾಯಾಲಯದಲ್ಲಿ ಖುಲಾಸೆ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಬಹುದು ಮತ್ತು ಅವರು ಹೈಕೋರ್ಟ್ ಅನ್ನು ಸಂಪರ್ಕಿಸುವ ಅಗತ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.


"ಥಾಮಸ್ ಮಣಿ Vs ಶಂಕರ್" ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಎಸ್. ರಾಚಯ್ಯ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.


ವಿಚಾರಣಾ ನ್ಯಾಯಾಲಯವು ಆರೋಪಿಯನ್ನು ಖುಲಾಸೆಗೊಳಿಸಿದ ಪ್ರಕರಣವೊಂದರಲ್ಲಿ ಫಿರ್ಯಾದುದಾರರಾದ ಮೈಸೂರು ಪಿರಿಯಾಪಟ್ಟಣದ ಥಾಮಸ್ ಮಣಿ ಅವರು ಎಂಟನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಮೇಲ್ಮನವಿಯನ್ನು ಸಲ್ಲಿಸಿದ್ದರು. ಈ ಮೇಲ್ಮನವಿ ನಿರ್ವಹಣೆಗೆ ಯೋಗ್ಯವಲ್ಲ ಎಂಬ ಕಾರಣಕ್ಕೆ ಮೇಲ್ಮನವಿಯನ್ನು ಮಾನ್ಯ ನ್ಯಾಯಾಲಯ ತಿರಸ್ಕರಿಸಿತ್ತು.


ಇದರಿಂದ ಬಾಧಿತರಾದ ಫಿರ್ಯಾದಿಯವರು ಕರ್ನಾಟಕ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಇದನ್ನು ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾಯಪೀಠ ಈ ಆದೇಶ ನೀಡಿದೆ. ಮೈಸೂರಿನ ಎಂಟನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ನೀಡಿದ ಆದೇಶವನ್ನು ಬದಿಗೆ ಸರಿಸಿದ ಹೈಕೋರ್ಟ್‌, ಈ ಪ್ರಕರಣವನ್ನು ಕಾಲಮಿತಿಯಲ್ಲಿ ಮರುವಿಚಾರಣೆ ನಡೆಸಿ ಇತ್ಯರ್ಥ ಮಾಡುವಂತೆ ಸೂಚನೆ ನೀಡಿದೆ.


ಪ್ರಕರಣ: ಥಾಮಸ್ ಮಣಿ Vs ಶಂಕರ್

ಕರ್ನಾಟಕ ಹೈಕೋರ್ಟ್‌, Crl.R.P.: 851/2016 Dated 24-02-2025

Ads on article

Advertise in articles 1

advertising articles 2

Advertise under the article