-->
ಪೊಲೀಸ್ ಇಲಾಖೆಗೆ ಹೊಸ ಜೀವಕಳೆ: ಘಟನಾ ಸ್ಥಳದ ತನಿಖೆಗೆ ಠಾಣೆಗೊಬ್ಬ ಅಧಿಕಾರಿ!

ಪೊಲೀಸ್ ಇಲಾಖೆಗೆ ಹೊಸ ಜೀವಕಳೆ: ಘಟನಾ ಸ್ಥಳದ ತನಿಖೆಗೆ ಠಾಣೆಗೊಬ್ಬ ಅಧಿಕಾರಿ!

ಪೊಲೀಸ್ ಇಲಾಖೆಗೆ ಹೊಸ ಜೀವಕಳೆ: ಘಟನಾ ಸ್ಥಳದ ತನಿಖೆಗೆ ಠಾಣೆಗೊಬ್ಬ ಅಧಿಕಾರಿ!





ದೇಶದಲ್ಲೇ ಮೊದಲ ಬಾರಿಗೆ ಅಪರಾಧ ಪ್ರಕರಣಗಳ ತನಿಖೆಯ ಸುಧಾರಣೆಗೆ ಸ್ಥಳಾಧಿಕಾರಿ (ಕ್ರೈಂ ಸೀನ್ ಆಫೀಸರ್)ಯ ನೇಮಕಕ್ಕೆ ರಾಜ್ಯ ಸರ್ಕಾರ ಮುಂದಾಗಿದ್ದು, ಪೊಲೀಸ್ ಇಲಾಖೆಗೆ ಹೊಸ ಜೀವಕಳೆ ಬರಲಿದೆ.


ಠಾಣೆಗೊಬ್ಬ ಸೀನ್ ಆಫ್ ಕ್ರೈಂ ಅಧಿಕಾರಿಯನ್ನು ನೇಮಕ ಮಾಡುವ ಪ್ರಸ್ತಾಪ ಇದ್ದು, ಈ ಬಗ್ಗೆ ರಾಜ್ಯ ವಿಧಿ ವಿಜ್ಞಾನ ಪ್ರಯೋಗಾಲಯ (ಫಾರೆನ್ಸಿಕ್ ಲ್ಯಾಬ್) ಅಧಿಕಾರಿಗಳು ಈ ಪ್ರಸ್ತಾವನೆ ಸಲ್ಲಿಸಿದ್ದಾರೆ.


ಇದೇ ವೇಳೆ, ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಈಗ ಇರುವ ಬೆರಳಚ್ಚು ಘಟಕವನ್ನು ಈ ಹೊಸ ನೇಮಕಾತಿಯೊಂದಿಗೆ ವಿಲೀನಗೊಳಿಸುವ ಕುರಿತೂ ಸರ್ಕಾರ ಮತ್ತು ಪೊಲೀಸ್ ಇಲಾಖೆ ಚಿಂತನೆ ನಡೆಸಿದೆ.


ಬೆರಳಚ್ಚು ಘಟಕದಲ್ಲಿ ಪಿಎಸ್‌ಐ ಸೇರಿದಂತೆ ಒಟ್ಟು 210 ಮಂಜೂರಾದ ಹುದ್ದೆಗಳಿವೆ. ಈ ಪೈಕಿ 116 ಅಧಿಕಾರಿ ಮತ್ತು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಒಟ್ಟು ವಿಭಾಗವನ್ನು ನೂತನ ಘಟಕಕ್ಕೆ ವಿಲೀನಗೊಳಿಸಿದರೆ ಕ್ರೈಂ ಸೀನ್ ಆಫೀಸರ್ ತಂಡ ಮತ್ತಷ್ಟು ಬಲವರ್ಧನೆಯಾಗಲಿದೆ ಎನ್ನಲಾಗಿದೆ.

Ads on article

Advertise in articles 1

advertising articles 2

Advertise under the article