
ಮದರಸಾ ಶಿಕ್ಷಕನಿಗೆ 187 ವರ್ಷ ಜೈಲು ಶಿಕ್ಷೆ: ಪೋಕ್ಸೋ ನ್ಯಾಯಾಲಯದ ತೀರ್ಪು
ಮದರಸಾ ಶಿಕ್ಷಕನಿಗೆ 187 ವರ್ಷ ಜೈಲು ಶಿಕ್ಷೆ: ಪೋಕ್ಸೋ ನ್ಯಾಯಾಲಯದ ತೀರ್ಪು
ಅಪ್ರಾಪ್ತ ಬಾಲಕಿಯ ಮೇಲೆ ನಿರಂತರ ಎರಡು ವರ್ಷಗಳ ವರೆಗೆ ಲೈಂಗಿಕ ದೌರ್ಜನ್ಯ ಎಸಗಿದ 41 ವರ್ಷದ ಮದರಸಾ ಶಿಕ್ಷಕನಿಗೆ ಪೋಕ್ಸೋ ನ್ಯಾಯಾಲಯದ 187 ವರ್ಷ ಜೈಲು ಶಿಕ್ಷೆ ವಿಧಿಸಿದ ತೀರ್ಪು ನೀಡಿದೆ.
ಕೇರಳದ ಕಣ್ಣೂರು ಜಿಲ್ಲೆಯ ತಲಿಪರಂಬ ಪೋಕ್ಸೋ ವಿಶೇಷ ನ್ಯಾಯಾಲಯ ಈ ತೀರ್ಪು ನೀಡಿದ್ದು, 41 ವರ್ಷದ ಮಹಮ್ಮದ್ ರಫಿ ಎಂಬಾತ ಶಿಕ್ಷೆಗೊಳಗಾದ ಅಪರಾಧಿಯಾಗಿದ್ಧಾನೆ.
ಈತ ಆಲಕೋಡ್ ಪಂಚಾಯತ್ ವ್ಯಾಪ್ತಿಯಲ್ಲಿ ಇದ್ದ ಮದರಸಾದಲ್ಲಿ ಶಿಕ್ಷಕನಾಗಿದ್ದ. ಕೋವಿಡ್ 19ರ ಲಾಕ್‌ಡೌನ್ ಸಂದರ್ಭದಲ್ಲಿ 16 ವರ್ಷದ ಬಾಲಕಿಯ ಮೇಲೆ ನಿರಂತರವಾಗಿ ಎರಡು ವರ್ಷಗಳ ವರೆಗೆ ಲೈಂಗಿಕ ದೌರ್ಜನ್ಯದ ಕೃತ್ಯ ಎಸಗಿದ್ದ.
ಪೋಕ್ಸೋ ಕಾಯ್ದೆಯ ಸೆಕ್ಷನ್ 5(ಟಿ) ಅಡಿಯಲ್ಲಿ ಅಪರಾಧಿ ರಫಿಗೆ 50 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ. ಉಳಿದಂತೆ ಐಪಿಸಿ ಸೆಕ್ಷನ್ 176(1) ಅಡಿಯಲ್ಲಿ 25 ವರ್ಷಗಳು, ಹಾಗೂ ಪೋಕ್ಸೊ ಸೆಕ್ಷನ್ 5(1) ಮತ್ತು 5(f) ಅಡಿಯಲ್ಲಿ ತಲಾ 35 ವರ್ಷಗಳ ಕಾರಾಗೃಹ ಶಿಕ್ಷೆಯನ್ನು ವಿಧಿಸಲಾಗಿದೆ.