-->
ಭೂ-ಸ್ವಾಧೀನ ಕಾಯ್ದೆ: ವಿಳಂಬದ ಅರ್ಜಿಗೂ ನ್ಯಾಯಸಮ್ಮತ ಪರಿಹಾರ ನಿರಾಕರಿಸುವಂತಿಲ್ಲ- ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ಭೂ-ಸ್ವಾಧೀನ ಕಾಯ್ದೆ: ವಿಳಂಬದ ಅರ್ಜಿಗೂ ನ್ಯಾಯಸಮ್ಮತ ಪರಿಹಾರ ನಿರಾಕರಿಸುವಂತಿಲ್ಲ- ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ಭೂ-ಸ್ವಾಧೀನ ಕಾಯ್ದೆ: ವಿಳಂಬದ ಅರ್ಜಿಗೂ ನ್ಯಾಯಸಮ್ಮತ ಪರಿಹಾರ ನಿರಾಕರಿಸುವಂತಿಲ್ಲ- ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು





ಭೂಮಿ ಕಳೆದುಕೊಂಡವರಿಗೆ ನ್ಯಾಯಸಮ್ಮತ ಪರಿಹಾರವನ್ನು ವಿಳಂಬದ ಕಾರಣಕ್ಕೆ ನಿರಾಕರಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.


ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಸಂಜಯ್ ಕರೋಲ್ ಮತ್ತು ನ್ಯಾಯಮೂರ್ತಿ ಮನಮೋಹನ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ತೀರ್ಪು ನೀಡಿದೆ.


ಭೂಸ್ವಾಧೀನ ಕಾಯ್ದೆಯಡಿ ಮೇಲ್ಮನವಿ ಸಲ್ಲಿಸಲು ವಿಳಂಬವಾಗಿದೆ ಎಂಬ ಕಾರಣಕ್ಕೆ ಭೂಮಿಯನ್ನು ಕಳೆದುಕೊಂಡ ಸಂತ್ರಸ್ತ ವ್ಯಕ್ತಿಗೆ ನ್ಯಾಯಸಮ್ಮತ ಪರಿಹಾರದ ಮೊತ್ತವನ್ನು ನಿರಾಕರಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ನ್ಯಾಯಪೀಠ ಹೇಳಿದೆ.


ಕಾಲಮಿತಿ ಕಳೆದು ವಿಳಂಬವಾಗಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಪುರಸ್ಕರಿಸದ ಪಂಜಾಬ್ ಮತ್ತು ಚಂಡೀಗಢ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್, ಅರ್ಜಿಯನ್ನು ಪುರಸ್ಕರಿಸಿ ತೀರ್ಪು ನೀಡಿತು.


ಇಂತಹ ಅರ್ಜಿಗಳ ವಿಲೇವಾರಿಗೆ ನ್ಯಾಯಾಲಯಗಳು ಉದಾರ ಮನೋಭಾವವನ್ನು ಅನುಸರಿಸಬೇಕು ಎಂದು ಸಲಹೆ ನೀಡಿದ ಸುಪ್ರೀಂ ಕೋರ್ಟ್‌, ಕಲೆಕ್ಟರ್, ಭೂಸ್ವಾಧೀನಾಧಿಕಾರಿ, ಆನಂದ್ ನಾಗ್ Vs ಕಟಿಜಿ ಮತ್ತಿತರರು ಪ್ರಕರಣವನ್ನು ಉಲ್ಲೇಖಿಸಿತು.


ಸಾಮಾನ್ಯವಾಗಿ, ಭೂಸ್ವಾಧೀನಕ್ಕೆ ಪರಿಹಾರ ಕೋರಿ ವಿಳಂಬವಾಗಿ ಅರ್ಜಿ ಸಲ್ಲಿಸಿದರೆ ಅರ್ಜಿದಾರರಿಗೆ ಯಾವುದೇ ಲಾಭ ಇಲ್ಲ. ಪ್ರತಿದಿನದ ವಿಳಂಬವನ್ನೂ ವಿವರಿಸಬೇಕು ಎಂಬ ತತ್ವವನ್ನು ಎಲ್ಲ ಅರ್ಜಿಗೂ ಅನ್ವಯಿಸಲಾಗದು ಎಂದು ಹೇಳಿತು.


ಪ್ರಕರಣ: Suresh Kumar Vs State of Haryana & Ors. ಸುಪ್ರೀಂ ಕೋರ್ಟ್‌, Dated 23-04-2025

land acquisition |Delay in filing appeal no reason to deny land losers fair compensation- Supreme Court


Ads on article

Advertise in articles 1

advertising articles 2

Advertise under the article