
ಅಚ್ಚರಿಯ ಹೆಜ್ಜೆ ಇಟ್ಟ ಸುಪ್ರೀಂ ಕೋರ್ಟ್: ನೇಮಕಾತಿಯ ಸಂಪೂರ್ಣ ವಿವರ ಬಹಿರಂಗ !
ಅಚ್ಚರಿಯ ಹೆಜ್ಜೆ ಇಟ್ಟ ಸುಪ್ರೀಂ ಕೋರ್ಟ್:
ನೇಮಕಾತಿಯ ಸಂಪೂರ್ಣ ವಿವರ ಬಹಿರಂಗ !
ಮಹತ್ವದ ಹಾಗೂ
ಐತಿಹಾಸಿಕ ನಿರ್ಧಾರವೊಂದರಲ್ಲಿ ಇದೇ ಮೊದಲ ಬಾರಿಗೆ ಸುಪ್ರೀಂ ಕೋರ್ಟ್
ದೇಶದ
ಎಲ್ಲ
ಹೈಕೋರ್ಟ್
ಮತ್ತು
ಸುಪ್ರೀಂ
ಕೋರ್ಟ್
ನ್ಯಾಯಮೂರ್ತಿಗಳ
ನೇಮಕಾತಿಯ
ಸಂಪೂರ್ಣ
ಪ್ರಕ್ರಿಯೆಯ
ವಿವರವನ್ನು
ತನ್ನ
ಸಾಮಾಜಿಕ
ಜಾಲತಾಣದಲ್ಲಿ
ಪ್ರಕಟಿಸಿದೆ.
ಹೈಕೋರ್ಟ್ ಕೊಲೀಜಿಯಂನ
ಪಾತ್ರ,
ಕೇಂದ್ರ
ಮತ್ತು
ರಾಜ್ಯ
ಸರಕಾರಗಳು
ಪಡೆಯುವ
ಮಾಹಿತಿ
ಹಾಗೂ
ಸುಪ್ರೀಂಕೋರ್ಟ್
ಹುಲಿ
ಜಿಎಂ
ಪರಿಗಣನೆಯ
ಕುರಿತಾದ
ವಿವರಗಳನ್ನು
ಸರ್ವೋಚ್ಚ
ನ್ಯಾಯಾಲಯ
ತನ್ನ
ಜಾಲತಾಣದಲ್ಲಿ
ಬಹಿರಂಗಪಡಿಸಿದೆ.
ಸಾರ್ವಜನಿಕರಲ್ಲಿ ಅರಿವು
ಮತ್ತು
ಜಾಗೃತಿ
ಮೂಡಲೆಂದು
ಈ
ನಿರ್ಧಾರ
ಕೈಗೊಂಡಿರುವುದಾಗಿ
ಸುಪ್ರೀಂ ಕೋರ್ಟ್ ತಿಳಿಸಿದೆ.
ಈಗ ನೀಡಲಾಗಿರುವ ಮಾಹಿತಿಗಳ ಪೈಕಿ, 2022ರ
ನವಂಬರ್
9 ರಿಂದ
2025ರ
ಮೇ
ಐದರ
ಅವಧಿಯಲ್ಲಿ
ಹೈಕೋರ್ಟ್
ನ್ಯಾಯಮೂರ್ತಿಗಳನ್ನಾಗಿ
ನೇಮಕ
ಮಾಡಲು
ಸುಪ್ರೀಂ
ಕೋರ್ಟ್
ಕೊಲೀಜಿಯಂ
ಅನುಮೋದಿಸಿದ
ಪ್ರಸ್ತಾವನೆಗಳಲ್ಲಿರುವ
ಹೆಸರುಗಳು,
ಹೈಕೋರ್ಟ್
ಮೂಲಸೇವೆಯಿಂದ
ಅಥವಾ
ವಕೀಲ
ವೃತ್ತಿಯಿಂದ ಬಂದವರೇ ಎಂಬ
ವಿವರಗಳನ್ನು
ನೀಡಲಾಗಿದೆ.
ಸುಪ್ರೀಂ ಕೋರ್ಟ್ ಕೊಲೀಜಿಯಂ
ಶಿಫಾರಸು
ಮಾಡಿದ
ದಿನಾಂಕ,
ನೇಮಕಾತಿಯ
ದಿನಾಂಕ,
ವಿಶೇಷ
ವರ್ಗಗಳು
(ಎಸ್.ಸಿ,
ಎಸ್.ಟಿ., ಹಿಂದುಳಿದ, ಇತರೆ ಇತ್ಯಾದಿ) ಎಂಬ ವಿವರಗಳ ಜೊತೆಗೆ
ಅಭ್ಯರ್ಥಿ
ಯಾವುದೇ
ಹಾಲಿ
ಅಥವಾ
ನಿವೃತ್ತ
ಹೈಕೋರ್ಟ್
ಸುಪ್ರೀಂ
ಕೋರ್ಟ್
ನ್ಯಾಯಮೂರ್ತಿಗಳ
ಸಂಬಂಧಿಯೇ
ಎಂಬುದನ್ನು
ಸುಪ್ರೀಂಕೋರ್ಟ್
ಜಾಲತಾಣದಲ್ಲಿ
ವಿವರಣೆ
ನೀಡಿರುವುದಾಗಿ
ಸುಪ್ರೀಂಕೋರ್ಟ್
ತಿಳಿಸಿದೆ.
ಇದೇ ವೇಳೆ ಸುಪ್ರೀಂ
ಕೋರ್ಟ್
ನ್ಯಾಯಮೂರ್ತಿಗಳ
ಆಸ್ತಿ
ವಿವರಗಳನ್ನು
ಕೂಡ
ಸರ್ವೋಚ್ಛ
ನ್ಯಾಯಾಲಯ
ಪ್ರಕಟಿಸಿದೆ.
ಈ ಹಿಂದೆ, ಆಸ್ತಿ ಘೋಷಣೆ
ಮಾಡಿದ
ನ್ಯಾಯಮೂರ್ತಿಗಳ
ಹೆಸರುಗಳನ್ನಷ್ಟೇ
ಸುಪ್ರೀಂ ಕೋರ್ಟ್ ತನ್ನ ಜಾಲತಾಣದಲ್ಲಿ ಪ್ರಕಟಿಸಿತ್ತು
ಆದರೆ
ಆಸ್ತಿ
ವಿವರಗಳನ್ನು
ಪ್ರಕಟಿಸಿರಲಿಲ್ಲ.
ಇದೀಗ ಒಂದು ಹೆಜ್ಜೆ ಮುಂದಿಟ್ಟಿರುವ ಸುಪ್ರೀಂ ಕೋರ್ಟ್, ಎಲ್ಲ ನ್ಯಾಯಮೂರ್ತಿಗಳ ವಿವರಗಳನ್ನು ಬಹಿರಂಗ
ಪಡಿಸಿದೆ.