
ಹಿರಿಯ ನ್ಯಾಯವಾದಿ ಪದನಾಮ: ಸುಪ್ರೀಂ ಕೋರ್ಟ್ ನೂತನ ಮಾರ್ಗಸೂಚಿ
Tuesday, May 13, 2025
ಹಿರಿಯ ನ್ಯಾಯವಾದಿ ಪದನಾಮ: ಸುಪ್ರೀಂ ಕೋರ್ಟ್ ನೂತನ ಮಾರ್ಗಸೂಚಿ
ಸುಪ್ರೀಂ ಕೋರ್ಟ್ ಮತ್ತು ದೇಶದ ವಿವಿಧ ಹೈಕೋರ್ಟ್ಗಳು ವಕೀಲರಿಗೆ ನೀಡುವ ಹಿರಿಯ ನ್ಯಾಯವಾದಿ ಪದನಾಮಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೂತನ ಮಾರ್ಗಸೂಚಿ ಹೊರಡಿಸಿದೆ.
ಜಿತೇಂದರ್ ಆಲಿಯಾಸ್ ಕಲ್ಲಾ ವರ್ಸಸ್ ದೆಹಲಿ ಸರ್ಕಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಅಭಯ ಶ್ರೀನಿವಾಸ್ ಓಕಾ, ಉಜ್ಜಲ್ ಭುಯಾನ್ ಮತ್ತು ಎಸ್.ವಿ.ಎಸ್. ಭಟ್ಟಿ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ತೀರ್ಪು ನೀಡಿದೆ.
ಪ್ರಸ್ತುತ ತೀರ್ಪಿನ ಪ್ರಕಾರ ನಾಲ್ಕು ತಿಂಗಳಲ್ಲಿ ಅಸ್ತಿತ್ವದಲ್ಲಿ ಇರುವ ನಿಯಮಗಳನ್ನು ತಿದ್ದುಪಡಿ ಮಾಡುವಂತೆ ಸುಪ್ರೀಂ ಕೋರ್ಟ್ ಎಲ್ಲ ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ನಿರ್ದೇಶನ ಹೊರಡಿಸಿದೆ.