-->
ಪಾಕ್ ಜೊತೆ ಗುಪ್ತ ಮಾಹಿತಿ ಹಂಚಿಕೊಂಡ ಮೀಸಲು ಪಡೆ ಸಿಬ್ಬಂದಿ ಬಂಧನ: 2023ರಿಂದ ಪಾಕ್ ಜೊತೆಗೆ ಸಂಪರ್ಕದಲ್ಲಿ ಯೋಧ

ಪಾಕ್ ಜೊತೆ ಗುಪ್ತ ಮಾಹಿತಿ ಹಂಚಿಕೊಂಡ ಮೀಸಲು ಪಡೆ ಸಿಬ್ಬಂದಿ ಬಂಧನ: 2023ರಿಂದ ಪಾಕ್ ಜೊತೆಗೆ ಸಂಪರ್ಕದಲ್ಲಿ ಯೋಧ

ಪಾಕ್ ಜೊತೆ ಗುಪ್ತ ಮಾಹಿತಿ ಹಂಚಿಕೊಂಡ ಮೀಸಲು ಪಡೆ ಸಿಬ್ಬಂದಿ ಬಂಧನ: 2023ರಿಂದ ಪಾಕ್ ಜೊತೆಗೆ ಸಂಪರ್ಕದಲ್ಲಿ ಯೋಧ

ಪಾಕಿಸ್ತಾನದ ಗುಪ್ತಚರ ಸಂಸ್ಥೆಯೊಂದಿಗೆ ರಹಸ್ಯ ಮಾಹಿತಿಗಳನ್ನು ಹಂಚಿಕೊಂಡ ಆರೋಪದಲ್ಲಿ ಸಿಆರ್‌ಪಿಎಫ್ ಸಿಬ್ಬಂದಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ದೆಹಲಿಯಲ್ಲಿ ಬಂಧಿಸಿದೆ.

ಬಂಧಿತ ಆರೋಪಿಯನ್ನು ಸಿಆರ್‌ಪಿಎಫ್‌ ಸಿಬ್ಬಂದಿ ಮೋತಿ ರಾಮ್ ಜಾಟ್ ಎಂದು ಗುರುತಿಸಲಾಗಿದೆ.

ಆರೋಪಿ ಮೋತಿ ರಾಮ್ ಬೇಹುಗಾರಿಕಾ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. 2023 ರಿಂದ ಪಾಕಿಸ್ತಾನದ ಗುಪ್ತಚರ ಅಧಿಕಾರಿಗಳ ಜೊತೆ ಅವರು ಸಂಪರ್ಕದಲ್ಲಿ ಇದ್ದರು ಎನ್ನಲಾಗಿದೆ.

ಈ ಸಂದರ್ಭದಲ್ಲಿ ಅವರು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ರಹಸ್ಯ ಮಾಹಿತಿಗಳನ್ನು ಪಾಕ್ ಅಧಿಕಾರಿಗಳ ಜೊತೆಗೆ ಹಂಚಿಕೊಂಡಿದ್ದಾರೆ ಎಂದು ಎನ್ಐಎ ಅಧಿಕಾರಿಗಳು ಆರೋಪಿಸಿದ್ದಾರೆ.

ಬಂಧಿತ ಆರೋಪಿಯನ್ನು ಪಟಿಯಾಲ ಹೌಸ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿ ಮೋತಿ ರಾಮ್‌ ಅವರಿಗೆ ಜೂನ್ 6 ರವರೆಗೆ ನ್ಯಾಯಾಂಗ ಬಂಧನವನ್ನು ವಿಧಿಸಿದೆ.

Ads on article

Advertise in articles 1

advertising articles 2

Advertise under the article

Join our WhatsApp Channel Powered By : Online Pudu