-->
ನ್ಯಾಯಾಧೀಶರಾಗಲು ವಕೀಲಿಕೆ ಕಡ್ಡಾಯ: ಕೋರ್ಟ್ ತೀರ್ಪನ್ನು ಮರುಪರಿಶೀಲಿಸಲು ಸುಪ್ರೀಂಗೆ ಅರ್ಜಿ

ನ್ಯಾಯಾಧೀಶರಾಗಲು ವಕೀಲಿಕೆ ಕಡ್ಡಾಯ: ಕೋರ್ಟ್ ತೀರ್ಪನ್ನು ಮರುಪರಿಶೀಲಿಸಲು ಸುಪ್ರೀಂಗೆ ಅರ್ಜಿ

ನ್ಯಾಯಾಧೀಶರಾಗಲು ವಕೀಲಿಕೆ ಕಡ್ಡಾಯ: ಕೋರ್ಟ್ ತೀರ್ಪನ್ನು ಮರುಪರಿಶೀಲಿಸಲು ಸುಪ್ರೀಂಗೆ ಅರ್ಜಿ





ಸಿವಿಲ್ ಕೋರ್ಟ್ ನ್ಯಾಯಾಧೀಶರು ಜೂನಿಯರ್ ಡಿವಿಜನ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮೂರು ವರ್ಷಗಳ ವಕೀಲಿಕೆಯ ವೃತ್ತಿ ಅನುಭವ ಕಡ್ಡಾಯ ಎಂಬ ಸುಪ್ರೀಂ ಕೋರ್ಟ್ ಮೇ 20ರ ತೀರ್ಪನ್ನು ಮರುಪರಿಶೀಲಿಸಬೇಕು ಎಂದು ವಕೀಲರೊಬ್ಬರು ಅರ್ಜಿ ಸಲ್ಲಿಸಿದ್ದಾರೆ.


ಸುಪ್ರೀಂಕೋರ್ಟ್ 2025ರ ಮೇ 20ರಂದು ಈ ಆದೇಶ ನೀಡಿತ್ತು. ಈ ಆದೇಶದಲ್ಲಿ ಸಿವಿಲ್ ಕೋರ್ಟ್ ನ್ಯಾಯಾಧೀಶರ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗೆ ಕನಿಷ್ಠ 3 ವರ್ಷಗಳ ವಕೀಲ ವೃತ್ತಿಯ ಅನುಭವ ಕಡ್ಡಾಯವಾಗಿ ಹೊಂದಿರಬೇಕು ಎಂದು ಹೇಳಿತ್ತು.


ಈ ನಿರ್ದೇಶನವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸುಪ್ರೀಂ ಕೋರ್ಟ್ ನ್ಯಾಯಪೀಠ ಎಲ್ಲಾ ಹೈಕೋರ್ಟ್ ಮತ್ತು ರಾಜ್ಯ ಸರಕಾರಗಳಿಗೆ ಸೂಚಿಸಿತ್ತು.


ಮೂರು ವರ್ಷಗಳ ಅಖಿಲ ವೃತ್ತಿ ಕಡ್ಡಾಯ ಎಂಬ ಆದೇಶದ ಮೂಲಕ ಸಂವಿಧಾನದ 14 ಮತ್ತು 16ನೇ ವಿಧಿ ಅಡಿ ನೀಡಿರುವ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಲಾಗಿದೆ. ಸಾರ್ವಜನಿಕ ಸೇವೆಯಲ್ಲಿ ಸಮಾನ ಮತ್ತು ನ್ಯಾಯಯುತ ಅವಕಾಶ ನೀಡಬೇಕು ಎಂಬ ತತ್ವದ ಮೇಲೂ ಈ ಆದೇಶ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ವಕೀಲರು ತಮ್ಮ ವಾದಪತ್ರದಲ್ಲಿ ಹೇಳಿದ್ದಾರೆ.


ಈ ಎಲ್ಲ ಅಂಶಗಳನ್ನು ಪರಿಶೀಲಿಸಿ ಸುಪ್ರೀಂ ಕೋರ್ಟ್ ಮೇ 20ರಂದು ನೀಡಿದ್ದ ಆದೇಶವನ್ನು ಪುನರ್ ಪರಿಶೀಲಿಸಬೇಕು ಎಂದು ವಕೀಲರಾದ ಚಂದ್ರಸೇನ್ ಯಾದವ್ ಮನವಿ ಮಾಡಿದ್ದಾರೆ.


Ads on article

Advertise in articles 1

advertising articles 2

Advertise under the article

  

  

  

Join our WhatsApp Channel Powered By : Online Pudu