-->
ಕಲಬುರ್ಗಿ:  ನ್ಯಾಯಾಧೀಶರಿಗೆ ಹೃದಯಾಘಾತ: ಜಡ್ಜ್ ಚೇಂಬರ್ ನಲ್ಲೇ ಸಾವು

ಕಲಬುರ್ಗಿ: ನ್ಯಾಯಾಧೀಶರಿಗೆ ಹೃದಯಾಘಾತ: ಜಡ್ಜ್ ಚೇಂಬರ್ ನಲ್ಲೇ ಸಾವು

ಕಲಬುರ್ಗಿ ಜಿಲ್ಲಾ ನ್ಯಾಯಾಧೀಶರಿಗೆ ಹೃದಯಾಘಾತ: ಜಡ್ಜ್ ಚೇಂಬರ್ ನಲ್ಲೇ ಸಾವು

 


ಕಲಬುರಗಿ ಜಿಲ್ಲಾ ನ್ಯಾಯಾಲಯದಲ್ಲಿ ಮೂರನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿದ್ದ ಜಡ್ಜ್ ವಿಶ್ವನಾಥ್ ಮುಗುಟಿ ಹೃದಯಾಘಾತದಿಂದ ಮೃತರಾಗಿದ್ದಾರೆ.

44 ವರ್ಷದ ಶ್ರೀ ವಿಶ್ವನಾಥ್ ಮುಗುಟಿ 15 ದಿನಗಳ ಹಿಂದಷ್ಟೇ ಕಲಬುರ್ಗಿ ನ್ಯಾಯಾಲಯಕ್ಕೆ ವರ್ಗಾವಣೆಗೊಂಡು ನ್ಯಾಯಾಧೀಶರಾಗಿ ಅಧಿಕಾರ ವಹಿಸಿಕೊಂಡಿದ್ದರು.

ಜಿಲ್ಲಾ ಕೋರ್ಟ್ ಚೇಂಬರ್ ನಲ್ಲಿ ಇದ್ದ ಸಂದರ್ಭದಲ್ಲಿ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿತು. ತಕ್ಷಣ ಅವರನ್ನು ಜಯದೇವ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅಷ್ಟರಲ್ಲಿ ಅವರು ಕೊನೆಯುಸಿರು ಎಳೆದರು ಎಂದು ವೈದ್ಯಾಧಿಕಾರಿಗಳು ದೃಢಪಡಿಸಿದ್ದಾರೆ.

ನ್ಯಾಯಾಧೀಶರಾದ ವಿಶ್ವನಾಥ್ ಅವರ ಅಗಲುವಿಕೆಗೆ ಜಿಲ್ಲಾ ವಕೀಲರ ಸಂಘ ತೀವ್ರ ಆಘಾತ ಮತ್ತು ಸಂತಾಪವನ್ನು ವ್ಯಕ್ತಪಡಿಸಿದೆ.


Ads on article

Advertise in articles 1

advertising articles 2

Advertise under the article

  

  

  

Join our WhatsApp Channel Powered By : Online Pudu