
ವಕೀಲರ ಪ್ರ್ಯಾಕ್ಟೀಸ್ ಪ್ರಮಾಣಪತ್ರ: ಅರ್ಜಿ ಸಲ್ಲಿಕೆಯ ಗಡುವು ವಿಸ್ತರಿಸಿದ ಕೆಎಸ್‌ಬಿಸಿ
ವಕೀಲರ ಪ್ರ್ಯಾಕ್ಟೀಸ್ ಪ್ರಮಾಣಪತ್ರ: ಅರ್ಜಿ ಸಲ್ಲಿಕೆಯ ಗಡುವು ವಿಸ್ತರಿಸಿದ ಕೆಎಸ್‌ಬಿಸಿ
ವಕೀಲರಾಗಿ ನೋಂದಣಿ ಮಾಡಿಕೊಂಡ ನ್ಯಾಯವಾದಿಗಳು ತಮ್ಮ ಸರ್ಟಿಫಿಕೇಟ್ ಆಫ್ ಪ್ರ್ಯಾಕ್ಟೀಸಿಂಗ್ (ಸಿಓಪಿ)ಗಾಗಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕದ ಗಡುವನ್ನು ಜೂನ್ 30, 2025ರ ವರೆಗೆ ವಿಸ್ತರಿಸಲಾಗಿದೆ.
ಭಾರತೀಯ ವಕೀಲರ ಪರಿಷತ್ ಆದೇಶದಂತೆ ಅಖಿಲ ಭಾರತ ವಕೀಲರ ಪರೀಕ್ಷೆಯಲ್ಲಿ ಅರ್ಹರಾದ ವಕೀಲರು ಮಾತ್ರ ದೇಶದ ನ್ಯಾಯಾಲಯಗಳಲ್ಲಿ ಪ್ರ್ಯಾಕ್ಟೀಸ್ ನಡೆಸಲು ಸಿಓಪಿ ಪಡೆಯಬೇಕಾಗಿದೆ.
ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನಲ್ಲಿ ಇದುವರೆಗೆ ಒಟ್ಟು 1,19,179 ವಕೀಲರು ನೋಂದಾವಣೆ ಮಾಡಿಕೊಂಡಿದ್ದಾರೆ. ಅದರಲ್ಲಿ 66,747 ಅರ್ಜಿಗಳು ಮಾತ್ರ ಸ್ವೀಕೃತವಾಗಿದೆ. 2016, 2019 ಮತ್ತು 2023ರಲ್ಲಿ ವಕೀಲರಿಂದ ಸಿಓಪಿಗಾಗಿ ಅರ್ಜಿಯನ್ನು ಸ್ವೀಕರಿಸಲಾಗಿದೆ.
ತಮ್ಮ ವಕೀಲರ ಸಂಘದ ಎಲ್ಲ ವಕೀಲರಿಗೆ ಸಿಓಪಿ ಅರ್ಜಿಯನ್ನು ಸಲ್ಲಿಸುವಾಗ ಹಾಲಿ ಇರುವ ಅಂದರೆ, ಯಾವ ವಕೀಲರ ಸಂಘದಲ್ಲಿ ಅವರು ನೋಂದಾವಣೆ ಮಾಡಿಕೊಂಡಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕು ಮತ್ತು ತಮ್ಮ ವಾಸಸ್ಥಳದ ವಿಳಾಸವನ್ನು ನಮೂದಿಸತಕ್ಕದ್ದು.
ಅರ್ಜಿ ಸಲ್ಲಿಸದ ಮತ್ತು ಸಿಓಪಿ ಪಡೆಯದ ವಕೀಲರಿಗೆ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಚುನಾವಣೆಯಲ್ಲಿ ಮತದಾನದ ಹಕ್ಕು ಇರುವುದಿಲ್ಲ. ಅದೇ ರೀತಿ, ವಕೀಲರ ಕಲ್ಯಾಣ ನಿಧಿಯಿಂದ ಯಾವುದೇ ರೀತಿಯ ಸೌಲಭ್ಯಗಳು ದೊರಕುವುದಿಲ್ಲ ಎಂದು ಪರಿಷತ್ತಿನ ಹಾಲಿ ಅಧ್ಯಕ್ಷರಾದ ಎಸ್.ಎಸ್. ಮಿಟ್ಟಲಕೋಡ ಅವರು ತಿಳಿಸಿದ್ದಾರೆ.