-->
ಮೇಲಾಧಿಕಾರಿಗಳ ಜೊತೆ ವಿಧೇಯತೆಯಿಂದಿರಿ: ಜಡ್ಜ್‌ಗೆ ಬುದ್ಧಿವಾದ ಹೇಳಿದ ಹೈಕೋರ್ಟ್‌ !

ಮೇಲಾಧಿಕಾರಿಗಳ ಜೊತೆ ವಿಧೇಯತೆಯಿಂದಿರಿ: ಜಡ್ಜ್‌ಗೆ ಬುದ್ಧಿವಾದ ಹೇಳಿದ ಹೈಕೋರ್ಟ್‌ !

ಮೇಲಾಧಿಕಾರಿಗಳ ಜೊತೆ ವಿಧೇಯತೆಯಿಂದಿರಿ: ಜಡ್ಜ್‌ಗೆ ಬುದ್ಧಿವಾದ ಹೇಳಿದ ಹೈಕೋರ್ಟ್‌ !




ಮೇಲಾಧಿಕಾರಿಗಳ ಜೊತೆಗೆ ವಿಧೇಯತೆಯಿಂದ ಇರಬೇಕು ಎಂದು ಜೆಎಂಎಫ್‌ಸಿ ನ್ಯಾಯಾಧೀಶರಿಗೆ ಬಾಂಬೆ ಹೈಕೋರ್ಟ್‌ ಕಠಿಣ ಶಬ್ಧಗಳ ಮೂಲಕ ಬುದ್ಧಿವಾದ ಹೇಳಿದೆ.


ಹೈಕೋರ್ಟ್‌ ಮತ್ತು ಹೈಕೋರ್ಟ್ ರಿಜಿಸ್ಟ್ರಿ ಜೊತೆಗೆ ಹೇಗೆ ಸಂವಹನವನ್ನು ಮಾಡಬೇಕು ಎಂಬುದು ಮ್ಯಾಜಿಸ್ಟ್ರೇಟ್‌ ಅವರ ವಿವೇಚನಾಧಿಕಾರವಲ್ಲ. ವಿಧೇಯತೆಯಿಂದ ಸಂವಹನ ಮಾಡುವುದು ಮತ್ತು ಪದಗಳ ಬಳಕೆ ಬಗ್ಗೆ ಮ್ಯಾಜಿಸ್ಟ್ರೇಟರು ಕಲಿಯಬೇಕು ಎಂದು ಕಠಿಣ ಶಬ್ದಗಳಿಂದ ಕೂಡಿದ ಬುದ್ದಿವಾದವನ್ನು ನ್ಯಾಯಪೀಠ ತನ್ನ ಆದೇಶದಲ್ಲಿ ದಾಖಲಿಸಿತು.


"ಸುನೀತಾ ಮತ್ತು ಮಹಾರಾಷ್ಟ್ರ ಸರ್ಕಾರ ಇನ್ನಿತರರ ನಡುವಣ ಪ್ರಕರಣ"ದಲ್ಲಿ ಬಾಂಬೆ ಹೈಕೋರ್ಟ್‌ನ ಔರಂಗಾಬಾದ್‌ನ ವಿಭಾ ಕಂಕಣವಾಡಿ ಮತ್ತು ಸಂಜಯ್ ದೇಶ್‌ಮುಖ್ ಅವರಿದ್ದ ನ್ಯಾಯಪೀಠ ಈ ನಿರ್ದೇಶನ ನೀಡಿದೆ.


ಇಮೇಲ್‌ (Email) ಕಳಿಸುವ ಬದಲಿಗೆ ಹೈಕೋರ್ಟ್‌ ರಿಜಿಸ್ಟ್ರಿಯು ತಮಗೆ ಪೋಸ್ಟ್‌ (ಅಂಚೆ) ಮೂಲಕ ಪತ್ರ ಬರೆದಿದ್ದರಿಂದ ತಮಗೆ ತಲುಪಬೇಕಾದ ಸಂವಹನವು ವಿಳಂಬವಾಯಿತು ಎಂದು ಜೆಎಂಎಫ್‌ಸಿ ನ್ಯಾಯಾಧೀಶರು ಸಮಜಾಯಿಷಿ ನೀಡಿದ್ದರು. ದಪ್ಪ ಅಕ್ಷರಗಳಲ್ಲಿ ವಿಶೇಷವಾಗಿ ಪ್ರತಿಕ್ರಿಯೆ ನೀಡಿದ ಮ್ಯಾಜಿಸ್ಟ್ರೇಟರ್ ಪ್ರತ್ಯುತ್ತರಕ್ಕೆ ನ್ಯಾಯಪೀಠ ತೀವ್ರ ಆಕ್ಷೇಪ ವ್ಯಕ್ತಪಡಿಸಿತು.


ಕ್ರಿಮಿನಲ್ ಪ್ರಕರಣದ ತನಿಖೆಗೆ ಸಂಬಂಧಿಸಿದ ರಿಟ್ ಅರ್ಜಿ ವಿಚಾರಣೆ ನಡೆಸುವಾಗ ಹೈಕೋರ್ಟ್‌, ಜೆಎಂಎಫ್‌ಸಿ ನ್ಯಾಯಾಲಯದಿಂದ ವಾಸ್ತವಿಕ ವರದಿ ಕೇಳಿತ್ತು. ಈ ಸಂವಹನವನ್ನು ವಿವರವಾದ ಪತ್ರದ ಮೂಲಕ ಕ್ಷಿಪ್ರಗತಿಯಲ್ಲಿ ಹೈಕೋರ್ಟ್ ರಿಜಿಸ್ಟ್ರಿ ಕಳಿಸಿಕೊಟ್ಟಿಲ್ಲ ಎಂದು ನ್ಯಾಯಾಧೀಶರು ಹೈಕೋರ್ಟ್‌ಗೆ ಪ್ರತ್ಯುತ್ತರ ನೀಡಿದ್ದರು.


ಮೇಲಧಿಕಾರಿಗಳ ಜೊತೆಗೆ ಸಂವಹನ ನಡೆಸುವಾಗ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರು ಸರಿಯಾದ ಪದಗಳನ್ನು ಬಳಸಬೇಕು ಮತ್ತು ವಿಧೇಯರಾಗಿರಬೇಕು ಎಂದು ನ್ಯಾಯಪೀಠ ಎಚ್ಚರಿಕೆ ನೀಡಿತು.



Ads on article

Advertise in articles 1

advertising articles 2

Advertise under the article

  

  

  

Join our WhatsApp Channel Powered By : Online Pudu