-->
ತಾಲೂಕು, ಜಿಲ್ಲಾ ವಕೀಲರ ಸಂಘಗಳಿಗೆ ಅನುದಾನ ಕೊಡಿ: ರಾಜ್ಯ ಸರ್ಕಾರಕ್ಕೆ ವಕೀಲರ ಪರಿಷತ್ತು ಆಗ್ರಹ

ತಾಲೂಕು, ಜಿಲ್ಲಾ ವಕೀಲರ ಸಂಘಗಳಿಗೆ ಅನುದಾನ ಕೊಡಿ: ರಾಜ್ಯ ಸರ್ಕಾರಕ್ಕೆ ವಕೀಲರ ಪರಿಷತ್ತು ಆಗ್ರಹ

ತಾಲೂಕು, ಜಿಲ್ಲಾ ವಕೀಲರ ಸಂಘಗಳಿಗೆ ಅನುದಾನ ಕೊಡಿ: ರಾಜ್ಯ ಸರ್ಕಾರಕ್ಕೆ ವಕೀಲರ ಪರಿಷತ್ತು ಆಗ್ರಹ





ರಾಜ್ಯದ ವಿವಿಧ ತಾಲೂಕು ಮತ್ತು ಜಿಲ್ಲಾ ವಕೀಲರ ಸಂಘಗಳಿಗೆ ರಾಜ್ಯ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡುವಂತೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಆಗ್ರಹಿಸಿದೆ.


ಪರಿಷತ್ತಿನ ಅಧ್ಯಕ್ಷ ಎಸ್.ಎಸ್. ಮಿಟ್ಟಲಕೋಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾನೂನು ಸಚಿವ ಎಚ್.ಕೆ. ಪಾಟೀಲ್ ಅವರಿಗೆ ಲಿಖಿತ ಪತ್ರ ಬರೆದು ಈ ಆಗ್ರಹ ಮಾಡಿದ್ದು, ಕೋವಿಡ್ ಮಹಾಮಾರಿ ಬಂದ ಸಮಯದಿಂದ ರಾಜ್ಯ ಸರ್ಕಾರ ಯಾವುದೇ ಅನುದಾನ ಬಿಡುಗಡೆ ಮಾಡಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.


ರಾಜ್ಯದಲ್ಲಿ 196 ವಕೀಲರ ಸಂಘಗಳಿವೆ. ವಕೀಲರ ಸಂಘದ ನಿರ್ವಹಣೆಗಾಗಿ ರಾಜ್ಯ ಸರ್ಕಾರ ಈ ಹಿಂದೆ ವಾರ್ಷಿಕ ಅನುದಾನ ಬಿಡುಗಡೆ ಮಾಡುತ್ತಲೇ ಬಂದಿತ್ತು. ಜಿಲ್ಲಾ ಸಂಘಗಳಿಗೆ ವಾರ್ಷಿಕವಾಗಿ 70 ಸಾವಿರ ರೂ. ಹಾಗೂ ತಾಲೂಕು ವಕೀಲರ ಸಂಘಗಳಿಗೆ ವಾರ್ಷಿಕವಾಗಿ 40 ಸಾವಿರ ರೂ. ಮಂಜೂರು ಮಾಡುತ್ತಾ ಬಂದಿದೆ ಎಂಬುದನ್ನು ಮಿಟ್ಟಲಕೋಡ ತಮ್ಮ ಪತ್ರದಲ್ಲಿ ನೆನಪಿಸಿದ್ದಾರೆ.


2019-20ನೇ ಸಾಲಿನಿಂದ, ಅಂದರೆ ಕೋವಿಡ್ ಲಾಕ್‌ಡೌನ್ ಸಮಯದಿಂದ ಈಚೆಗೆ ಸರ್ಕಾರ ವಕೀಲರ ಸಂಘದ ತಮ್ಮ ಅಗತ್ಯದ ನಿರ್ವಹಣೆಗಾಗಿ ವಾರ್ಷಿಕ ಅನುದಾನವನ್ನು ಬಿಡುಗಡೆ ಮಾಡಿಲ್ಲ. ಸಿದ್ದರಾಮಯ್ಯ ಅವರು ಸ್ವತಃ ವಕೀಲರಾದವರು. ವಕೀಲರ ಬೇನೆ-ಬೇಸರ, ದುಃಖ-ದುಮ್ಮಾನಗಳು ಅವರಿಗೂ ಅರ್ಥವಾಗುತ್ತದೆ ಎಂದು ಮಿಟ್ಟಲಕೋಡ ಅವರು ಆಶಯ ವ್ಯಕ್ತಪಡಿಸಿದ್ದಾರೆ.


Ads on article

Advertise in articles 1

advertising articles 2

Advertise under the article