-->
ರಾಜ್ಯದಲ್ಲಿ ಇನ್ನು ಆಸ್ತಿ ನೋಂದಣಿಗೆ ಜಿಪಿಎ ಕಡ್ಡಾಯ ನೋಂದಣಿ ಅಗತ್ಯ: ಮಸೂದೆಗೆ ಬಿತ್ತು ರಾಷ್ಟ್ರಪತಿ ಅಂಕಿತ

ರಾಜ್ಯದಲ್ಲಿ ಇನ್ನು ಆಸ್ತಿ ನೋಂದಣಿಗೆ ಜಿಪಿಎ ಕಡ್ಡಾಯ ನೋಂದಣಿ ಅಗತ್ಯ: ಮಸೂದೆಗೆ ಬಿತ್ತು ರಾಷ್ಟ್ರಪತಿ ಅಂಕಿತ

ರಾಜ್ಯದಲ್ಲಿ ಇನ್ನು ಆಸ್ತಿ ನೋಂದಣಿಗೆ ಜಿಪಿಎ ಕಡ್ಡಾಯ ನೋಂದಣಿ ಅಗತ್ಯ: ಮಸೂದೆಗೆ ಬಿತ್ತು ರಾಷ್ಟ್ರಪತಿ ಅಂಕಿತ





ನೋಂದಣಿ (ಕರ್ನಾಟಕ ತಿದ್ದುಪಡಿ) ಮಸೂದೆ 2025ಕ್ಕೆ ಮಾನ್ಯ ರಾಷ್ಟ್ರಪತಿಯವರು 28-07-2025ರಂದು ಅಂಕಿತ ಹಾಕಿದ್ದು, ಇನ್ನು ಮುಂದೆ ಆಸ್ತಿ ನೋಂದಣಿಗೆ ಜಿಪಿಎ ಬಳಸುವುದಿದ್ದರೆ ಆ ಜಿಪಿಎ ಕಡ್ಡಾಯ ನೋಂದಣಿ ಆಗಿರಬೇಕು.


ಈ ಬಗ್ಗೆ ಕರ್ನಾಟಕ ಸರ್ಕಾರ ಸೋಮವಾರವೇ ರಾಜ್ಯ ಪತ್ರ ಹೊರಡಿಸಿದ್ದು, ರಾಜ್ಯಪತ್ರ ಹೊರಡಿಸಿದ ದಿನದಿಂದಲೇ ಈ ಮಸೂದೆ ಜಾರಿಗೆ ಬಂದಿದೆ.


ನೋಂದಣಿ ಅಧಿನಿಯಮ 1908ನ್ನು ಮತ್ತಷ್ಟು ತಿದ್ದುಪಡಿ ಮಾಡಿ ಕೆಲವು ಬದಲಾವಣೆಯನ್ನು ಒಳಗೊಂಡ ಮಸೂದೆ ಇದಾಗಿದೆ. ಆಸ್ತಿ ನೋಂದಣಿಯನ್ನು ಸಂಪೂರ್ಣ ಡಿಜಿಟಲೀಕರಿಸುವ, ಪಾರದರ್ಶಕತೆ ಹೆಚ್ಚಿಸುವ ನಿಟ್ಟಿನಲ್ಲಿ ಈ ತಿದ್ದುಪಡಿ ಜಾರಿಗೆ ತರಲಾಗಿದೆ.


ಈ ಹಿಂದೆ, ಆಸ್ತಿ ನೋಂದಣಿಗೆ ನೋಟರಿ ವಕೀಲರ ಮುಂದೆ ಸಹಿ ಹಾಕಲಾದ ಜಿಪಿಎಯನ್ನು ಪರಿಗಣಿಸಲಾಗುತ್ತಿತ್ತು. ಆದರೆ, ಈಗ ಆಸ್ತಿ ವರ್ಗಾವಣೆಗೆ ಮೊದಲು ನಡೆಸುವ ಜಿಪಿಎ ಕಡ್ಡಾಯ ನೋಂದಣಿ ಮಾಡಬೇಕು. 


ಆಸ್ತಿ ವರ್ಗಾವಣೆ ಸಮಯದಲ್ಲಿ ಪವರ್ ಆಫ್ ಅಟಾರ್ನಿ ಬರೆದುಕೊಡುವವರು ಬದುಕಿದ್ದಾರೆ ಎಂಬುದನ್ನು ಖಚಿತಪಡಿಸಲು ಸೂಕ್ತ ಪುರಾವೆಯನ್ನುಹಾಜರುಪಡಿಸಬೇಕು.


ಇಂತಹ ಕ್ರಮಗಳು ಅಕ್ರಮ ಆಸ್ತಿ ವರ್ಗಾವಣೆ, ನೋಂದಣಿ, ಭೂ ಕಬಳಿಕೆಗೆ ಮತ್ತು ಒತ್ತುವರಿ ಪ್ರಕರಣಗಳನ್ನು ತಪ್ಪಿಸಲಿದೆ.


Ads on article

Advertise in articles 1

advertising articles 2

Advertise under the article