.jpg)
ಅಂತಿಮ ಅಧಿಸೂಚನೆ ಬಳಿಕ ಭೂ ಸ್ವಾಧೀನದ ನಡವಳಿ ಪ್ರಶ್ನಿಸಲು ಕಾನೂನಿನಡಿ ಅವಕಾಶವಿಲ್ಲ; ಪರಿಹಾರಕ್ಕೆ ಹಕ್ಕೊತ್ತಾಯ ಮಾತ್ರ ಉಳಿದ ಮಾರ್ಗ- ಕರ್ನಾಟಕ ಹೈಕೋರ್ಟ್
ಅಂತಿಮ ಅಧಿಸೂಚನೆ ಬಳಿಕ ಭೂ ಸ್ವಾಧೀನದ ನಡವಳಿ ಪ್ರಶ್ನಿಸಲು ಕಾನೂನಿನಡಿ ಅವಕಾಶವಿಲ್ಲ; ಪರಿಹಾರಕ್ಕೆ ಹಕ್ಕೊತ್ತಾಯ ಮಾತ್ರ ಉಳಿದ ಮಾರ್ಗ- ಕರ್ನಾಟಕ ಹೈಕೋರ್ಟ್
ಭೂ ಸ್ವಾಧೀನದ ಪ್ರಾರಂಭಿಕ ಮತ್ತು ಅಂತಿಮ ಅಧಿಸೂಚನೆ ಹೊರಡಿಸಿದ ಬಳಿಕ ಭೂ ಸ್ವಾಧೀನದ ನಡವಳಿ ಪ್ರಶ್ನಿಸಲು ಕಾನೂನಿನಡಿ ಅವಕಾಶವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ.
ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ.
ಸೂಕ್ತ ಕಾನೂನು ಪ್ರಕ್ರಿಯೆ ಅನುಸರಿಸಿ ಭೂ ಸ್ವಾಧೀನಕ್ಕೆ ಸಂಬಂಧಿಸಿದ ಅಂತಿಮ ಅಧಿಸೂಚನೆ ಹೊರಬಿದ್ದ ಬಳಿಕ ಭೂ ಸ್ವಾಧೀನದ ನಡವಳಿಯನ್ನು ಪ್ರಶ್ನಿಸಲು ಕಾನೂನು ಅಡಿ ಯಾವುದೇ ಅವಕಾಶವಿಲ್ಲ. ಆದರೆ, ಖರೀದಿದಾರರು ಯಾ ಪ್ರಸ್ತಾಪಿತ ಭೂಮಾಲೀಕರು ತಮ್ಮ ಭೂ ಒಡೆತನದ ಆಧಾರದಲ್ಲಿ ಪರಿಹಾರಕ್ಕೆ ಹಕ್ಕೊತ್ತಾಯ ಸಲ್ಲಿಸಬಹುದು. ಭೂ ಒಡೆಯನಿಗೆ ಅದೊಂದು ಮಾತ್ರ ಉಳಿದ ಮಾರ್ಗವಾಗಿದೆ ಎಂದು ನ್ಯಾಯಪೀಠ ಹೇಳಿದೆ.
a subsequent land purchaser, after preliminary and final acquisition notification, has no legal standing to challenge the acquisition proceedings, since the purchase is void against the acquiring authority. His sole recourse is to claim compensation based on their vendor's title.
-Justice M. Nagaprasanna, Karnataka High Court