-->
ಪಿಟಿಸಿಎಲ್ ಕಾಯ್ದೆ |ಸಕಾರಣವಿಲ್ಲದ ಮರು ಮಂಜೂರು ಅರ್ಜಿ: ತಿರಸ್ಕರಿಸುವ ವಿವೇಚನಾಧಿಕಾರ ಅಧಿಕಾರಿಗಳಿಗಿದೆ- ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು

ಪಿಟಿಸಿಎಲ್ ಕಾಯ್ದೆ |ಸಕಾರಣವಿಲ್ಲದ ಮರು ಮಂಜೂರು ಅರ್ಜಿ: ತಿರಸ್ಕರಿಸುವ ವಿವೇಚನಾಧಿಕಾರ ಅಧಿಕಾರಿಗಳಿಗಿದೆ- ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು

ಪಿಟಿಸಿಎಲ್ ಕಾಯ್ದೆ |ಸಕಾರಣವಿಲ್ಲದ ಮರು ಮಂಜೂರು ಅರ್ಜಿ: ತಿರಸ್ಕರಿಸುವ ವಿವೇಚನಾಧಿಕಾರ ಅಧಿಕಾರಿಗಳಿಗಿದೆ- ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು





ಪಿಟಿಸಿಎಲ್ ಕಾಯ್ದೆಯಡಿ ಮರು ಮಂಜೂರು ಅರ್ಜಿ ಸಲ್ಲಿಸುವಲ್ಲಿ ಅತಿಯಾದ ವಿಳಂಬ ಇದ್ದಾಗ ಅಸಮಂಜಸ ವಿಳಂಬದ ನಂತರ ಸಲ್ಲಿಸಿದ ಅರ್ಜಿಗಳನ್ನು ತಿರಸ್ಕರಿಸುವ ವಿವೇಚನೆ ಅಧಿಕಾರಿಗಳಿಗೆ ಇರುತ್ತದೆ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.


"ಅಮ್ಮಯ್ಯ ವಿರುದ್ಧ ಆರ್. ಮಂಜುನಾಥ್" ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ವಿ. ಕಾಮೇಶ್ವರ ರಾವ್ ಮತ್ತು ನ್ಯಾಯಮೂರ್ತಿ ಟಿ.ಎಂ. ನಡಾಫ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ತೀರ್ಪು ನೀಡಿದೆ.


ಶಾಸನವು ಕಾಲಮಿತಿಯ ಅವಧಿಯನ್ನು ಸ್ಪಷ್ಟವಾಗಿ ಸೂಚಿಸಿಲ್ಲ. ಆದರೂ ಕಾಯ್ದೆಯ ನಿಬಂಧನೆಗಳನ್ನು ಯುಕ್ತ ಸಮಯದೊಳಗೆ ಆಹ್ವಾನಿಸಬೇಕು. ಇದೇ ವೇಳೆ, ವಿಳಂಬದ ಬಗ್ಗೆ ಯಾವುದೇ ಸಮಂಜಸವಾದ ಕಾರಣ ನೀಡದೆ ಅರ್ಜಿಗಳನ್ನು ಸಲ್ಲಿಸಿದಾಗ ಅದನ್ನು ತಿರಸ್ಕರಿಸಬಹುದು ಎಂದು ವಿಭಾಗೀಯ ಪೀಠ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.


"ನೆಕ್ಕಾಂಟಿ ರಾಮ ಲಕ್ಷ್ಮಿ ವಿರುದ್ಧ ಕರ್ನಾಟಕ ರಾಜ್ಯ" ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಉಲ್ಲೇಖಿಸಿದ ನ್ಯಾಯಪೀಠ, ಸೂಕ್ತ


"ಛೇದಿಲಾಲ್ ಯಾದವ್ ವಿರುದ್ಧ ಹರಿಕಿಶೋರ್ ಯಾದವ್" ಮತ್ತು "ನಿಂಗಪ್ಪ ವಿರುದ್ಧ ಡೆಪ್ಯೂಟಿ ಕಮಿಷನರ್ ಮತ್ತಿತರರು" ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಉಲ್ಲೇಖಿಸಿ ಕರ್ನಾಟಕ ಪಿಟಿಸಿಎಲ್ ಕಾಯ್ದೆಯ ಸೆಕ್ಷನ್ 4ರ ಅಡಿಯಲ್ಲಿ ಮಾರಾಟ ಕ್ರಯಪತ್ರವನ್ನು ಪ್ರಶ್ನಿಸಲು ಸೂಕ್ತ ಅರ್ಜಿಯನ್ನು ಸಲ್ಲಿಸಬೇಕು ಎಂದಿದೆ ಎಂಬುದನ್ನು ತೀರ್ಪಿನಲ್ಲಿ ಗಮನಿಸಲಾಗಿದೆ.


ಆದರೆ, ಆ ಅರ್ಜಿಯನ್ನು ಸಲ್ಲಿಸಲು ಯಾವುದೇ ಕಾಲಮಿತಿಯನ್ನು ನಿಗದಿಗೊಳಿಸಿಲ್ಲ. ಆದರೆ, ಸಮಂಜಸವಾದ ಕಾಲಮಿತಿಯೊಳಗೆ ಇಂತಹ ಅರ್ಜಿಯನ್ನು ಸಲ್ಲಿಸಬೇಕು. ಆದರೆ, ಸಮರ್ಪಕವಾದ ಕಾರಣವಿಲ್ಲದೆ ಸುದೀರ್ಘ ವಿಳಂಬವನ್ನು ಮನ್ನಿಸಲು ಅಧಿಕಾರಿಗಳು ವಿವೇಚನಾಧಿಕಾರವನ್ನು ಬಳಸಬಹುದಾಗಿದೆ ಎಂದು ನ್ಯಾಯಪೀಠ ತನ್ನ ತೀರ್ಪಿನಲ್ಲಿ ಹೇಳಿದೆ.


ಈ ಹಿನ್ನೆಲೆಯಲ್ಲಿ ಕರ್ನಾಟಕ ಹೈಕೋರ್ಟ್‌ನ ಏಕಸದಸ್ಯ ನ್ಯಾಯಪೀಠ ನೀಡಿದ ತೀರ್ಪನ್ನು ಎತ್ತಿಹಿಡಿದ ನ್ಯಾಯಪೀಠ ಮೇಲ್ಮನವಿದಾರರು ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಿದೆ.


ಪ್ರಕರಣ: ಶ್ರೀಮತಿ ಅಮ್ಮಯ್ಯ ವಿರುದ್ಧ ಆರ್. ಮಂಜುನಾಥ್

ಕರ್ನಾಟಕ ಹೈಕೋರ್ಟ್ ರಿಟ್ ಅರ್ಜಿ 852/2023 Dated: 18-02-2025


PTCL Act: inordinate delay in filing application for restoration under PTCL Act. even though statute does not prescribe a limitation period, the provisions must be invoked within a reasonable time. Authorities have discretion to reject application filed after unreasonable delay.

Judgement by Karnataka High Court


Ads on article

Advertise in articles 1

advertising articles 2

Advertise under the article