ಮತಾಂತರವಿಲ್ಲದೆ ನಡೆಯುವ ಅಂತರ್ ಧರ್ಮೀಯ ವಿವಾಹ ಕಾನೂನುಬಾಹಿರ: ಹೈಕೋರ್ಟ್
ಮತಾಂತರವಿಲ್ಲದೆ ನಡೆಯುವ ಅಂತರ್ ಧರ್ಮೀಯ ವಿವಾಹ ಕಾನೂನುಬಾಹಿರ: ಹೈಕೋರ್ಟ್
ಬೇರೆ ಬೇರೆ ಧರ್ಮಗಳನ್ನು ಅನುಸರಿಸುತ್ತಿರುವ ವ್ಯಕ್ತಿಗಳು ಮತಾಂತರಕ್ಕೆ ಒಳಗಾಗದೇ ಮದುವೆಯಾದರೆ ಅದನ್ನು ಕಾನೂನುಬದ್ಧ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ.
ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿ ಪ್ರಶಾಂತ್ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.
ಮತಾಂತರವಿಲ್ಲದೆ ನಡೆಯುವ ಅಂತರ್ ಧರ್ಮೀಯ ವಿವಾಹಗಳು ಅಸಿಂಧು ಆಗಿದ್ದು, ಈ ಅಂತರ್‌ಧರ್ಮೀಯ ಜೋಡಿಗೆ ಮದುವೆ ಪ್ರಮಾಣ ಪತ್ರ ನೀಡುವ ಆರ್ಯ ಸಮಾಜ ಸಂಸ್ಥೆಯ ವಿರುದ್ಧ ತನಿಖೆ ನಡೆಸುವಂತೆ ಆದೇಶ ಹೊರಡಿಸಿದೆ.
ಆರ್ಯ ಸಮಾಜ ಮತ್ತು ಅಂತಹ ಸಂಸ್ಥೆಗಳ ವಿರುದ್ಧ ಡಿಸಿಪಿ ಮಟ್ಟದ ಐಪಿಎಸ್ ಅಧಿಕಾರಿಯಿಂದ ತನಿಖೆ ನಡೆಸುವಂತೆ ರಾಜ್ಯ ಗೃಹ ಕಾರ್ಯದರ್ಶಿಯವರಿಗೆ ನ್ಯಾಯಪೀಠ ನಿರ್ದೇಶನ ನೀಡಿದೆ.
ಕ್ರಿಮಿನಲ್ ಪ್ರಕರಣ ರದ್ದು ಮಾಡಬೇಕು ಎಂದು ಕೋರಿ ಆರೋಪಿ ಸೋನು ಆಲಿಯಾಸ್ ಸಹನೂರ್ ಎಂಬವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಪೀಠ ತಿರಸ್ಕರಿಸಿದೆ.
ಆರ್ಯಸಮಾಜದಲ್ಲಿ ಅಪ್ರಾಪ್ತೆಯ ವಿವಾಹ ಕಾನೂನನ್ನು ಸ್ಪಷ್ಟವಾಗಿ ಉಲ್ಲಂಘಿಸಲಾಗಿದೆ. ಆರ್ಯ ಸಮಾಜ ಎಂಬ ಸಂಸ್ಥೆಯು ಧಾರ್ಮಿಕ ಸೋಗಿನಲ್ಲಿ ಯಾವುದೇ ನಿಯಮ ಪಾಲಿಸದೆ ನಿರ್ದಿಷ್ಟ ಶುಲ್ಕಕ್ಕಾಗಿ ಮನಬಂದಂತೆ ಮದುವೆ ಸರ್ಟಿಫಿಕೇಟ್‌ಗಳನ್ನು ನೀಡುತ್ತಿವೆ. ಇಂತಹ ವಿವಾಹಗಳು ಕಾನೂನುಬಾಹಿರ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.