ಸಿವಿಲ್ ಜಡ್ಜ್ ನೇರ ನೇಮಕಾತಿ: ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ, ಪರೀಕ್ಷೆ ದಿನ ನಿಗದಿ- ಕರ್ನಾಟಕ ಹೈಕೋರ್ಟ್ ಅಧಿಸೂಚನೆ ಪ್ರಕಟ
ಸಿವಿಲ್ ಜಡ್ಜ್ ನೇರ ನೇಮಕಾತಿ: ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ, ಪರೀಕ್ಷೆ ದಿನ ನಿಗದಿ- ಕರ್ನಾಟಕ ಹೈಕೋರ್ಟ್ ಅಧಿಸೂಚನೆ ಪ್ರಕಟ
ಸಿವಿಲ್ ನ್ಯಾಯಾಧೀಶರ ಹುದ್ದೆಗೆ ನೇರ ನೇಮಕಾತಿ ಮೂಲಕ ಆನ್‌ಲೈನ್ ಅರ್ಜಿಯನ್ನು ಸಲ್ಲಿಸುವ ದಿನಾಂಕ ವಿಸ್ತರಣೆ ಮತ್ತು ಪೂರ್ವಭಾವಿ ಪರೀಕ್ಷೆಯ ದಿನಾಂಕ ಪ್ರಕಟಿಸಿ ಕರ್ನಾಟಕ ಹೈಕೋರ್ಟ್ ಅಧಿಸೂಚನೆ ಹೊರಡಿಸಿದೆ.
ಕರ್ನಾಟಕ ಹೈಕೋರ್ಟ್‌ನ ಮಹಾವಿಲೇಖನಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರುಗಳ ನೇಮಕಾತಿ ಸಮಿತಿ ಕಾರ್ಯದರ್ಶಿ ಶ್ರೀ ಕೆ.ಎಸ್. ಭರತ್ ಕುಮಾರ್ ಅವರು ಈ ಅಧಿಸೂಚನೆಯನ್ನು ಪ್ರಕಟಿಸಿದ್ದಾರೆ.
ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ : 01.09.2025
ಅರ್ಜಿ ಶುಲ್ಕವನ್ನು ಸಂದಾಯ ಮಾಡುವ ಕೊನೆಯ ದಿನಾಂಕ : 02.09.2025
ಕರ್ನಾಟಕ ಉಚ್ಚ ನ್ಯಾಯಾಲಯವು 24 ಉಳಿಕೆ (ಬ್ಯಾಕ್‌ಲಾಗ್) ಹುದ್ದೆಗಳೂ ಸೇರಿದಂತೆ ಸಿವಿಲ್ ನ್ಯಾಯಾಧೀಶರ 158 ಹುದ್ದೆಗಳಿಗೆ ನೇಮಕಾತಿಗಾಗಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ಕಳೆದ ಫೆಬ್ರವರಿ 10, 2025ರಂದು ಅಧಿಸೂಚನೆ ಮೂಲಕ ಪ್ರಕಟಿಸಲಾಗಿತ್ತು. (ಅಧಿಸೂಚನೆ ಸಂಖ್ಯೆ: ಹೆಚ್‌ಸಿಆರ್‌ಬಿ/ ಸಿಜಿಆರ್-1/ 2024 ದಿನಾಂಕ 10.02.2025)
ಈ ಅಧಿಸೂಚನೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿತ್ತು. ಇದೀಗ, ಇದನ್ನು ಈ ಮೂಲಕ ಮುಂದುವರಿಸಲು ಅಧಿಸೂಚಿಸಲಾಗಿದೆ.
ಸಿವಿಲ್ ನ್ಯಾಯಾಧೀಶರ ಹುದ್ದೆಗೆ ಆನ್‌ಲೈನ್ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ 01.09.2025 ಮತ್ತು ಶುಲ್ಕ ಪಾವತಿಸಲು ಕೊನೆಯ ದಿನಾಂಕ 02.09.2025, 11:59 p.m., ರವರೆಗೆ ವಿಸ್ತರಿಸಲಾಗಿದೆ:
ಸಿವಿಲ್ ನ್ಯಾಯಾಧೀಶರ ನೇಮಕಾತಿ ವಿಧಾನ, ಮೀಸಲಾತಿ ಕನಿಷ್ಠ ವಿದ್ಯಾರ್ಹತೆ, ವಯೋಮಿತಿ. ವಕೀಲರಾಗಿ ನೋಂದಣಿ ಮತ್ತು ಇನ್ನಿತರೆ ನಿಯಮಗಳು ಹಾಗೂ ಷರತ್ತುಗಳು ಮೇಲ್ಕಂಡ ಅಧಿಸೂಚನೆ ಸಂಖ್ಯೆ ಹೆಚ್‌ಸಿಆರ್‌ಬಿ/ ಸಿಜಿಆರ್-1/2024 ದಿನಾಂಕ 10.02.2025 ಕ್ಕೆ ಒಳಪಟ್ಟಿರುತ್ತದೆ.
ಪೂರ್ವಭಾವಿ ಪರೀಕ್ಷೆಯನ್ನು ದಿನಾಂಕ 11-10-2025ರಂದು ಮಧ್ಯಾಹ್ನ 3-00 ಗಂಟೆಯಿಂದ 5-00 ಗಂಟೆಯ ವರೆಗೆ ನಡೆಸಲು ನಿಗದಿಪಡಿಸಲಾಗಿದೆ ಎಂದು ಅಧಿಸೂಚನೆ ಮಾಹಿತಿ ನೀಡಿದೆ.
1. ಅಧಿಸೂಚನೆ ಸಂಖ್ಯೆ ಹೆಚ್‌ಸಿಆರ್‌ಬಿ/ಸಿಜೆಆರ್-1/2024, ದಿನಾಂಕ: 10.02.2025 ರ ಅನ್ವಯ ಸಿವಿಲ್ ನ್ಯಾಯಾಧೀಶರ 158 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
2 ದಿನಾಂಕ: ಪೂರಕ ಅಧಿಸೂಚನೆ ಸಂಖ್ಯೆ ಹೆಚ್‌ಸಿಆರ್‌ಬಿ/ಸಿಜಿಆರ್-1/2024, 12.03.2025ರಲ್ಲಿ ಪ್ರಕಟಿಸಲಾಗಿದ್ದು, ಮೇಲೆ (1) ರಲ್ಲಿ ಓದಲಾದ ಅಧಿಸೂಚನೆ ಮೇಲಿನ ಮುಂದಿನ ಕ್ರಮಗಳನ್ನು ಭಾರತದ ಸರ್ವೋಚ್ಚ ನ್ಯಾಯಾಲಯದ W.P. (Civil) ಸಂಖ್ಯೆ: 1022/1989 0໖ LA , 72900/2021, 73015/2021, 40695/2021, 50269/2022, 201893/2022, 93974/2019 (ಅಖಿಲ ಭಾರತ ನ್ಯಾಯಾಧೀಶರ ಸಂಘ ಮತ್ತು ಇತರರು Vs ಭಾರತ ಸರ್ಕಾರ ಮತ್ತು ಇತರರು) ನಲ್ಲಿ ತೀರ್ಪು ನೀಡುವವರೆಗೆ ತಡೆಹಿಡಿಯಲಾಗಿದೆ ಎಂದು ಅಧಿಸೂಚಿಸಲಾಗಿತ್ತು.
1 W.P. (Civil) ಸಂಖ್ಯೆ 1022/1989 ರಲ್ಲಿ LA ಸಂಖ್ಯೆ: 93974/2019 ಮತ್ತು ಸಂಯುಕ್ತ LA ಗಳ ಕುರಿತು ಭಾರತದ ಸರ್ವೋಚ್ಚ ನ್ಯಾಯಾಲಯವು ದಿನಾಂಕ: 20.05.2015 ರಂದು ನೀಡಿದ ತೀರ್ಪಿನ ಘೋಷಣೆ.