-->
ಮತಪಟ್ಟಿಯಲ್ಲಿ ಕೈಬಿಟ್ಟ 65 ಲಕ್ಷ ಮತದಾರರ ಹೆಸರನ್ನು ಕಾರಣ ಸಹಿತ ಪ್ರಕಟಿಸಿ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ

ಮತಪಟ್ಟಿಯಲ್ಲಿ ಕೈಬಿಟ್ಟ 65 ಲಕ್ಷ ಮತದಾರರ ಹೆಸರನ್ನು ಕಾರಣ ಸಹಿತ ಪ್ರಕಟಿಸಿ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ

ಮತಪಟ್ಟಿಯಲ್ಲಿ ಕೈಬಿಟ್ಟ 65 ಲಕ್ಷ ಮತದಾರರ ಹೆಸರನ್ನು ಕಾರಣ ಸಹಿತ ಪ್ರಕಟಿಸಿ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ





ಭಾರತೀಯ ಚುನಾವಣಾ ಆಯೋಗ (ECI) ಈಗ ಸುದ್ದಿಯ ಕೇಂದ್ರಬಿಂದು. ತನ್ನ ವಿಶೇಷ ತೀವ್ರ ಪರಿಷ್ಕರಣೆ (SIR) ಅಭಿಯಾನದ ಪ್ರಕಾರ, ಅದು ಬಿಹಾರದ ಮತಪಟ್ಟಿಯಲ್ಲಿ 65 ಲಕ್ಷ ಮತದಾರರನ್ನು ಕೈಬಿಟ್ಟಿದೆ. ಈ ಹೆಸರನ್ನು ಕಾರಣ ಸಹಿತ ಪ್ರಕಟಿಸುವಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.


ಸುಪ್ರೀಂ ಕೋರ್ಟ್‌ನ ಗೌರವಾನ್ವಿಯ ನ್ಯಾಯಮೂರ್ತಿಗಳಾದ ಶ್ರೀ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜಯಮಾಲಾ ಬಾಗ್ಚಿ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಖಡಕ್ ಆದೇಶ ಮಾಡಿದೆ.


ಮತಪಟ್ಟಿಯಿಂದ ಹೊರಗುಳಿದ ಎಲ್ಲಾ 65 ಲಕ್ಷ ಮತದಾರರ ಹೆಸರುಗಳನ್ನು ಪ್ರಕಟಿಸಬೇಕು. ಅದನ್ನು ಜಿಲ್ಲಾವಾರು ಪ್ರಕಾರ ಹೆಸರುಗಳು ಪ್ರಕಟಿಸಬೇಕು. ಚುನಾವಣಾ ಪಟ್ಟಿಯಿಂದ ಕೈಬಿಡಲು ಉದ್ಭವಾದ ಕಾರಣಗಳೇನು ಎಂಬುದನ್ನೂ ವಿವರಿಸಬೇಕು. ಉದಾಹರಣೆಗೆ ಮತದಾರನ ಸಾವು, ವಲಸೆ, ಪುನಾವರ್ತನೆ (ರಿಪೀಟೇಷನ್) ಅಥವಾ ಇತರ ಕಾರಣಗಳನ್ನು ಆನ್‌ಲೈನ್‌ನಲ್ಲಿ ಪ್ರಕಟಿಸಬೇಕು ಎಂದು ಆದೇಶದಲ್ಲಿ ಸ್ಪಷ್ಟವಾದ ನಿರ್ದೇಶನವನ್ನು ನೀಡಿದೆ.


ಮತಪಟ್ಟಿಯಿಂದ ಹೊರಗುಳಿದ ಎಲ್ಲಾ 65 ಲಕ್ಷ ಮತದಾರರ ಹೆಸರುಗಳಲ್ಲಿ ಚುನಾವಣಾ ಆಯೋಗ ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದು, ಇವರಲ್ಲಿ ಬಹುತೇಕರು ಜೀವಂತವಾಗಿದ್ದಾರೆ ಎಂದು ಬಿಜೆಪಿಯೇತರ ವಿವಿಧ ರಾಜಕೀಯ ಪಕ್ಷಗಳು ಆಕ್ಷೇಪ ಎತ್ತಿವೆ.


ಈ ಕೆಳಗಿನ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ.

1) ಬಿಹಾರದ ಜಿಲ್ಲಾ ಚುನಾವಣಾ ಅಧಿಕಾರಿಗಳ (DEOs) ವೆಬ್‌ಸೈಟ್‌ಗಳು.

2) ಬಿಹಾರದ ಮುಖ್ಯ ಚುನಾವಣಾ ಅಧಿಕಾರಿ (CEO) ಅವರ ವೆಬ್‌ಸೈಟ್.


ಮತಪಟ್ಟಿಯಲ್ಲಿ ಮತದಾರರು ತಮ್ಮ ಹೆಸರಿನ ಸ್ಟೇಟಸ್ ನ್ನು ಸುಲಭವಾಗಿ ಪರಿಶೀಲಿಸಲು ಸಾಧ್ಯವಾಗುವಂತೆ ಈ ಪಟ್ಟಿಗಳು EPIC ಆಧಾರಿತ ಹುಡುಕಾಟಕ್ಕೆ ಒಳಪಡಬೇಕು ಎಂದು ಸುಪ್ರೀಂ ಕೋರ್ಟ್ ನ್ಯಾಯಪೀಠ ನಿರ್ದೇಶನದಲ್ಲಿ ಒತ್ತಿ ಹೇಳಿದೆ.


ಪಾರದರ್ಶಕತೆಯೇ ಮತದಾರರ ವಿಶ್ವಾಸದ ಪ್ರತೀಕವಾಗಿರುವ ಮಹತ್ವದ ಸಾಧನ. ಈ ಹೆಸರುಗಳು ಮತ್ತು ಕಾರಣಗಳನ್ನು ಸಾರ್ವಜನಿಕ ವೇದಿಕೆಗೆ ತೆರೆದು ಇಡುವುದರಿಂದ ಚುನಾವಣಾ ಆಯೋಗದ ಮೇಲಿನ ಮತದಾರರ ವಿಶ್ವಾಸ ಮತ್ತು ನಂಬಿಕೆ ಹೆಚ್ಚಾಗುತ್ತದೆ ಎಂದು ನ್ಯಾಯಮೂರ್ತಿ ಸೂರ್ಯಕಾಂತ್ ಅಭಿಪ್ರಾಯಪಟ್ಟರು.


ರಾಜಕೀಯ ಪಕ್ಷಗಳಿಗೆ ಈಗಾಗಲೇ ಬೂತ್ ಮಟ್ಟದ ಪಟ್ಟಿಗಳನ್ನು ನೀಡಲಾಗಿದೆ. ಆದರೆ, ಮತದಾರರು ಯಾವುದೇ ರಾಜಕೀಯ ಪಕ್ಷದ ಏಜೆಂಟರನ್ನು ಏಕೆ ಅವಲಂಬಿಸಬೇಕು. ಮತಪಟ್ಟಿಯನ್ನು ಜನರ ಮುಂದಿಡುವ ಕೆಲಸವನ್ನು ಆಯೋಗವೇ ಮಾಡಬೇಕು ಎಂದು ಪೀಠ ಸ್ಪಷ್ಟನುಡಿಗಳಲ್ಲಿ ನಿರ್ದೇಶನ ನೀಡಿತು.


ಈಗ ಆಯೋಗದ ಮೇಲೆ "ಮತ ಕಳವು" ಆರೋಪ ಬಂದಿದೆ. ಕಣ್ಮರೆಯಾಗಿರುವ ಹೆಸರುಗಳ ಪಟ್ಟಿಯಲ್ಲಿ ನೀವು ಸಾರ್ವಜನಿಕ ವೇದಿಕೆಗೆ ತೆರೆದಿಟ್ಟರೆ, ಚುನಾವಣಾ ಆಯೋಗದ ವಿರುದ್ಧದ ಟೀಕೆಗಳು ಕಣ್ಮರೆಯಾಗುತ್ತದೆ ಎಂದು ಸುಪ್ರೀಂ ನ್ಯಾಯಪೀಠ ಹೇಳಿತು.


"ಉದಾಹರಣೆಗೆ, ಪೂನಂ ದೇವಿ ಎಂಬ ಹೆಸರನ್ನು ಕೈಬಿಟ್ಟಿದ್ದರೆ, ಪೂನಂ ದೇವಿ ಜೀವಂತವಾಗಿದ್ದರೆ, ಅವರಿಗೆ ತಮ್ಮ ಹೆಸರನ್ನು ಅಳಿಸಲಾಗಿದೆ ಎಂಬ ಮಾಹಿತಿಯನ್ನು ಏಕೆ ಅಳಿಸಲಾಗಿದೆ ಎಂಬ ಕಾರಣದೊಂದಿಗೆ ತಿಳಿದಿರಬೇಕು"


ಇದೇ ವೇಳೆ, ಮತದಾರರ ಪಟ್ಟಿಗೆ ಹೆಸರುಗಳನ್ನು ಮರುಸ್ಥಾಪಿಸಲು ಹಕ್ಕು ಸಲ್ಲಿಸಲು ಸ್ವೀಕಾರಾರ್ಹ ದಾಖಲೆಗಳ ಪಟ್ಟಿಯಲ್ಲಿ ಆಧಾರ್ ಕಾರ್ಡ್‌ಗಳನ್ನು ಸ್ಪಷ್ಟವಾಗಿ ಸೇರಿಸಬೇಕೆಂದು ನ್ಯಾಯಾಲಯ ಆಯೋಗಕ್ಕೆ ನಿರ್ದೇಶನ ನೀಡಿದೆ.


ಆಗಸ್ಟ್ 19ರೊಳಗೆ ಆಯೋಗ ಜಾರಿಗೆ ತರಬೇಕಾದ ಮಧ್ಯಂತರ ಕ್ರಮಗಳ ಬಗ್ಗೆ ನ್ಯಾಯಪೀಠ ಪಟ್ಟಿ ಮಾಡಿದೆ. ಅವುಗಳೆಂದರೆ,


1. ಕರಡು ಪಟ್ಟಿಯಿಂದ ಕೈಬಿಟ್ಟಿರುವ ಸುಮಾರು 65 ಲಕ್ಷ ಮತದಾರರ ಪಟ್ಟಿಯನ್ನು ಜಿಲ್ಲಾವಾರು ಪ್ರಕಟಿಸುವುದು, ಬೂತ್ ಮಟ್ಟದ ವಿವರಗಳು ಮತ್ತು ಅಳಿಸುವಿಕೆಗೆ ಕಾರಣಗಳನ್ನು EPIC ಸಂಖ್ಯೆಗಳ ಮೂಲಕ ಪ್ರವೇಶಿಸಬಹುದು.


2. DEOS ನ ಸ್ಥಳೀಯ ಪತ್ರಿಕೆಗಳು, ಟಿವಿ, ರೇಡಿಯೋ ಮತ್ತು ಅಧಿಕೃತ ಸಾಮಾಜಿಕ ಮಾಧ್ಯಮ ಚಾನೆಲ್‌ಗಳಲ್ಲಿ ವ್ಯಾಪಕ ಪ್ರಚಾರ.


3. ಬ್ಲಾಕ್ ಅಭಿವೃದ್ಧಿ ಮತ್ತು ಪಂಚಾಯತ್ ಕಚೇರಿಗಳಲ್ಲಿನ ಸೂಚನಾ ಫಲಕಗಳಲ್ಲಿ, ಕಾರಣಗಳೊಂದಿಗೆ, ಬೂತ್‌ವಾರು ಪಟ್ಟಿಗಳ ಭೌತಿಕ ಪ್ರದರ್ಶನ.


4. ಬಾಧಿತ ವ್ಯಕ್ತಿಗಳು ತಮ್ಮ ಆಧಾರ್ ಕಾರ್ಡ್‌ನ ಪ್ರತಿಯೊಂದಿಗೆ ಹಕ್ಕು ಸಲ್ಲಿಸಬಹುದು ಎಂದು ಸಾರ್ವಜನಿಕ ಪ್ರಕಟಣೆಗಳಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.


5. ಬಿಹಾರದ ಸಿಇಒ ತನ್ನ ವೆಬ್‌ಸೈಟ್‌ನಲ್ಲಿ ಕ್ರೋಢೀಕೃತ ಜಿಲ್ಲಾವಾರು ಪಟ್ಟಿಯನ್ನು ಅಪ್‌ಲೋಡ್ ಮಾಡಬೇಕು.


6. ಎಲ್ಲಾ ಆನ್‌ಲೈನ್ ಪಟ್ಟಿಗಳು EPIC ಆಧಾರಿತ ಹುಡುಕಾಟಕ್ಕೆ ಒಳಪಟ್ಟಿರಬೇಕು.


ಪ್ರಕರಣ: ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ & ಡಾ.ಎಸ್. ವಿರುದ್ಧ ಚುನಾವಣಾ ಆಯೋಗ

ಸುಪ್ರೀಂ ಕೋರ್ಟ್‌ W.P.(C) ಸಂಖ್ಯೆ 640/2025

Ads on article

Advertise in articles 1

advertising articles 2

Advertise under the article