-->
ಸರಕು ಸಾಗಣೆ ವಾಹನ ಅಪಘಾತಕ್ಕೀಡಾಗಿ ಪ್ರಯಾಣಿಕ ಗಾಯಗೊಂಡರೆ ವಾಹದನ ಮಾಲೀಕ ಪರಿಹಾರ ಪಾವತಿಸಬೇಕು- ಕರ್ನಾಟಕ ಹೈಕೋರ್ಟ್

ಸರಕು ಸಾಗಣೆ ವಾಹನ ಅಪಘಾತಕ್ಕೀಡಾಗಿ ಪ್ರಯಾಣಿಕ ಗಾಯಗೊಂಡರೆ ವಾಹದನ ಮಾಲೀಕ ಪರಿಹಾರ ಪಾವತಿಸಬೇಕು- ಕರ್ನಾಟಕ ಹೈಕೋರ್ಟ್

ಸರಕು ಸಾಗಣೆ ವಾಹನ ಅಪಘಾತಕ್ಕೀಡಾಗಿ ಪ್ರಯಾಣಿಕ ಗಾಯಗೊಂಡರೆ ವಾಹದನ ಮಾಲೀಕ ಪರಿಹಾರ ಪಾವತಿಸಬೇಕು- ಕರ್ನಾಟಕ ಹೈಕೋರ್ಟ್





ಸರಕು ಸಾಗಣೆ ವಾಹನ ಅಪಘಾತಕ್ಕೀಡಾಗಿ ಅದರಲ್ಲಿದ್ದ ಪ್ರಯಾಣಿಕ ಗಂಭೀರ ಗಾಯಗೊಂಡರೆ ಅಥವಾ ಮೃತಪಟ್ಟ ಸಂದರ್ಭದಲ್ಲಿ, ಅಂತಹ ಸಂದರ್ಭದಲ್ಲಿ ಆ ವಾಹನದ ಮಾಲೀಕರೇ ಸಂತ್ರಸ್ತರಿಗೆ ಪರಿಹಾರ ಪಾವತಿಸಬೇಕು ಎಂದು ಹೈಕೋರ್ಟ್ ಆದೇಶಿಸಿದ್ದು, ಅಪಘಾತಕ್ಕೀಡಾದ ವಾಹನದ ವಿಮೆ ಪಡೆದಿದ್ದ ವಿಮಾ ಕಂಪನಿಯನ್ನು ಹೊಣೆಗಾರನ್ನಾಗಿ ಮಾಡಲಾಗುವುದಿಲ್ಲ ಎಂದೂ ಹೈಕೋರ್ಟ್ ತೀರ್ಪು ಸ್ಪಷ್ಟಪಡಿಸಿದೆ.


ಸರಕು ಸಾಗಣೆ ವಾಹನ ಅಪಘಾತಕ್ಕೀಡಾಗಿ ಗಾಯಗೊಂಡವರಿಗೆ ಪರಿಹಾರ ನೀಡುವಂತೆ ಆದೇಶಿಸಿದ್ದ ಮೋಟಾರು ಅಪಘಾತ ಪರಿಹಾರ ನ್ಯಾಯಾಕರಣ(ಎಂಎಸಿಟಿ) ಆದೇಶ ಪ್ರಶ್ನಿಸಿ ಸರಕು ಸಾಗಣೆ ವಾಹನಕ್ಕೆ ವಿಮೆ ನೀಡಿದ್ದ 'ದಿ ನ್ಯಾಷನಲ್ ಇನ್ಸೂರೆನ್ಸ್ ಕಂಪನಿ' ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್‌ನ ಗೌರವಾನ್ವಿತ ನ್ಯಾಯಮೂರ್ತಿ ಉಮೇಶ್ ಎಂ. ಅಡಿಗ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.


"ಪ್ರಕರಣದಲ್ಲಿ ಪರಿಹಾರಕ್ಕೆ ಅರ್ಹವಾಗಿರುವ ವ್ಯಕ್ತಿ ಚುನಾವಣಾ ಕರ್ತವ್ಯ ಮುಗಿಸಿಕೊಂಡು ಊರಿಗೆ ಸರಕು ಸಾಗಣೆ ವಾಹನದಲ್ಲಿ ಪ್ರಯಾಣಿಸುತ್ತಿದ್ದನು. ಟೆಂಪೋದಲ್ಲಿ ಸಾಗಿಸುತ್ತಿದ್ದ ಸರಕುಗಳಿಗೆ ಗಾಯಗೊಂಡ ವ್ಯಕ್ತಿ ಮಾಲೀಕರಾಗಿರಲಿಲ್ಲ. ಹಾಗಾಗಿ, ಮೋಟಾರು ವಾಹನ ಕಾಯಿದೆ ಸೆಕ್ಷನ್ 147ರಡಿಯಲ್ಲಿ ಸರಕು ಸಾಗಣೆ ವಾಹನದಲ್ಲಿ ಪ್ರಯಾಣಿಸುವ ಅನಪೇಕ್ಷಿತ ಪ್ರಯಾಣಿಕರಿಗೆ ಸಾವು ಇಲ್ಲವೇ ಗಾಯವಾದಲ್ಲಿ ವಿಮಾ ಕಂಪನಿ ಪರಿಹಾರ ಪಾವತಿಸಲು ಹೊಣೆಗಾರರಾಗುವುದಿಲ್ಲ, ಆದರೆ, ಘಟನೆಗೆ ಎರಡೂ ವಾಹನಗಳ ವಿಮಾದಾರರು ಜಂಟಿಯಾಗಿ ಮತ್ತು ಪ್ರತ್ಯೇಕ ವಾಗಿ ಹೊಣೆಗಾರರಾಗಿದ್ದಾರೆಂದು ಎಂಎಸಿಟಿ ತೀರ್ಪು ನೀಡಿರುವುದು ತಪ್ಪಾಗಿದೆ,'' ಎಂದು ಪೀಠ ಹೇಳಿದೆ.


'ಗಾಯಗೊಂಡಿರುವ ವ್ಯಕ್ತಿಯ ವಿರುದ್ಧದ ಎರಡೂ ವಾಹನಗಳ ಚಾಲಕರ ಸಮಾನ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿದೆ. ಎರಡೂ ಚಾಲಕರ ಸಮಾನ ನಿರ್ಲಕ್ಷ್ಯದಿಂದ ಅಪಘಾತ ಉಂಟಾದಲ್ಲಿ ಸಂತ್ರಸ್ತರಿಗೆ ಸಮಾನ ಪರಿಹಾರ ಪಡೆಯಲು ಅರ್ಹನಾಗಿದ್ದಾರೆ. ಆದ್ದರಿಂದ ಮಾರ್ಪಾಡು ನ್ಯಾಯಾಧಿಕರಣದ ಆದೇಶ ಮಾಡುತ್ತಿದ್ದು, ಅಪಘಾತದಲ್ಲಿ ಭಾಗಿಯಾಗಿರುವ ಬಸ್ ಮಾಲೀಕ, ಬಸ್ ವಿಮಾದಾರ ಕಂಪನಿ ಒಟ್ಟಾಗಿ ಶೇ.50ರಷ್ಟು ಮತ್ತು ಸರಕು ಸಾಗಣೆ ಟೆಂಪೋ ಮಾಲೀಕ ಶೇ.50ರಷ್ಟು ಪರಿಹಾರ ಪಾವತಿಸಬೇಕು,'' ಎಂದು ಸ್ಪಷ್ಟಪಡಿಸಿದೆ.


Ads on article

Advertise in articles 1

advertising articles 2

Advertise under the article