
ಗ್ರಾಹಕರಿಗೆ ಬಿಸಿ ಮುಟ್ಟಿಸಿದ ಐಸಿಐಸಿಐ ಬ್ಯಾಂಕ್: ಖಾತೆಯ ಕನಿಷ್ಟ ಠೇವಣಿ ಪರಿಷ್ಕರಣೆ- ಇನ್ಮುಂದೆ ಖಾತೆಯಲ್ಲಿರಬೇಕು ಕನಿಷ್ಠ ರೂ. 50 ಸಾವಿರ!
ಗ್ರಾಹಕರಿಗೆ ಬಿಸಿ ಮುಟ್ಟಿಸಿದ ಐಸಿಐಸಿಐ ಬ್ಯಾಂಕ್: ಖಾತೆಯ ಕನಿಷ್ಟ ಠೇವಣಿ ಪರಿಷ್ಕರಣೆ- ಇನ್ಮುಂದೆ ಖಾತೆಯಲ್ಲಿರಬೇಕು ಕನಿಷ್ಠ ರೂ. 50 ಸಾವಿರ!
ಐಸಿಐಸಿಐ ಬ್ಯಾಂಕ್ ತನ್ನ ಗ್ರಾಹಕರಿಗೆ ಬಿಸಿ ಮುಟ್ಟಿಸಿದೆ. ಒಂದು ಉಳಿತಾಯ ಖಾತೆಯನ್ನು ಹೊಂದಬೇಕಿದ್ದರೆ ಆ ಖಾತೆಯಲ್ಲಿ ಇರಬೇಕಾದ ಕನಿಷ್ಟ ಠೇವಣಿ ಮೊತ್ತವನ್ನು ಪರಿಷ್ಕರಿಸಿದ್ದು, ಗ್ರಾಹಕರಿಗೆ ಬರೆ ಎಳೆದಿದೆ.
ಇನ್ನು ಮುಂದೆ ಐಸಿಐಸಿಐ ಬ್ಯಾಂಕ್ ಗ್ರಾಹಕರ ಖಾತೆಯಲ್ಲಿ ಕನಿಷ್ಠ ರೂ. 50 ಸಾವಿರ ಇರಬೇಕು ಎಂಬುದಾಗಿ ನಿಯಮ ರೂಪಿಸಲಾಗಿದೆ.
ತನ್ನ ಉಳಿತಾಯ ಬ್ಯಾಂಕ್ ಖಾತೆಯಲ್ಲಿ ಇರಿಸಬೇಕಿರುವ ಕನಿಷ್ಠ ಮೊತ್ತವನ್ನು ಐಸಿಐಸಿಐ ಬ್ಯಾಂಕ್ ಏರಿಕೆ ಮಾಡಿದೆ. ಹೊಸ ನಿಯಮದ ಪ್ರಕಾರ ಐಸಿಐಸಿಐ ಬ್ಯಾಂಕ್‌ನ ಮಹಾನಗರ ಮತ್ತು ನಗರ ಪ್ರದೇಶಗಳ ಗ್ರಾಹಕರು ತಮ್ಮ ಖಾತೆಯಲ್ಲಿ ಇರಿಸಬೇಕಿರುವ ಕನಿಷ್ಠ ಮಾಸಿಕ ಸರಾಸರಿ ಮೊತ್ತ (ಎಂಎಂಎಬಿ) ₹50 ಸಾವಿರ ಆಗಿದೆ.
ಈ ನಿಯಮವು 2025ರ ಆಗಸ್ಟ್ 1ರಂದು ಜಾರಿಗೆ ಬಂದಿದೆ. ಈ ದಿನಾಂಕದ ನಂತರ ತೆರೆದ ಖಾತೆಗಳಿಗೆ ಅನ್ವಯ ಆಗುತ್ತದೆ. ಮಹಾನಗರ ಹಾಗೂ ನಗರ ಪ್ರದೇಶಗಳ ಗ್ರಾಹಕರು ಇದುವರೆಗೆ ತಮ್ಮ ಖಾತೆಗಳಲ್ಲಿ ಮಾಸಿಕ ಸರಾಸರಿ ಮೊತ್ತವಾಗಿ ರೂ. 10 ಸಾವಿರ ಇರಿಸಿದ್ದರೆ ಸಾಕಿತ್ತು. ಆಗಸ್ಟ್ 1ಕ್ಕೆ ಮೊದಲು ಖಾತೆ ತೆರೆದಿರುವ ಗ್ರಾಹಕರಿಗೆ ಹಳೆಯ ನಿಯಮವೇ ಅನ್ವಯ ಆಗುತ್ತದೆ.
ಅರೆ ನಗರ ಪ್ರದೇಶಗಳ ಗ್ರಾಹಕರು ಇರಿಸಬೇಕಿರುವ ಮಾಸಿಕ ಕನಿಷ್ಠ ಸರಾಸರಿ ಮೊತ್ತವನ್ನು ರೂ. 25 ಸಾವಿರಕ್ಕೆ, ಗ್ರಾಮೀಣ ಪ್ರದೇಶಗಳ ಗ್ರಾಹಕರಿಗೆ ಈ ಮೊತ್ತವನ್ನು ರೂ. 10 ಸಾವಿರಕ್ಕೆ ಹೆಚ್ಚು