-->
ವಿಮೆ ಹಣ ಪಾವತಿಸಲು ನೈಋತ್ಯ ರೈಲ್ವೆಗೆ ಆದೇಶ: ಗ್ರಾಹಕರ ನ್ಯಾಯಾಲಯದ ಮಹತ್ವದ ತೀರ್ಪು

ವಿಮೆ ಹಣ ಪಾವತಿಸಲು ನೈಋತ್ಯ ರೈಲ್ವೆಗೆ ಆದೇಶ: ಗ್ರಾಹಕರ ನ್ಯಾಯಾಲಯದ ಮಹತ್ವದ ತೀರ್ಪು

ವಿಮೆ ಹಣ ಪಾವತಿಸಲು ನೈಋತ್ಯ ರೈಲ್ವೆಗೆ ಆದೇಶ: ಗ್ರಾಹಕರ ನ್ಯಾಯಾಲಯದ ಮಹತ್ವದ ತೀರ್ಪು





ಚಲಿಸುತ್ತಿದ್ದ ರೈಲಿನಿಂದ ಬಿದ್ದು ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ನೀಡುವಂತೆ ಧಾರವಾಡ ಜಿಲ್ಲಾ ಗ್ರಾಹಕರ ಪರಿಹಾರ ಆಯೋಗ ನೈಋತ್ಯ ರೈಲ್ವೆ (ಹುಬ್ಬಳ್ಳಿ) ಗೆ ಆದೇಶಿಸಿದೆ.


ಹುಬ್ಬಳ್ಳಿಯ ಕೇಶವ ನಗರ ನಿವಾಸಿ ಕೀರ್ತಿವತಿ ಎಂಬುವರು ಪತಿ ಸುಧೀಂದ್ರ ಕುಲಕರ್ಣಿ ಅವರೊಂದಿಗೆ 2023ರ ಫೆ. 4ರಂದು ಬೆಂಗಳೂರಿನ ಯಶವಂತಪುರ ರೈಲ್ವೆ ನಿಲ್ದಾಣದಿಂದ ಶಿವಮೊಗ್ಗಕ್ಕೆ ಪ್ರಯಾಣ ಬೆಳೆಸಿದ್ದರು. ರಾತ್ರಿ ಸುಧೀಂದ್ರ ಅವರು ರೈಲಿನಲ್ಲಿದ್ದ ಶೌಚಗೃಹಕ್ಕೆ ಹೋದಾಗ ಬೋಗಿಯ ಬಾಗಿಲು ತೆರೆದಿದ್ದ ಕಾರಣ ಆಯ ತಪ್ಪಿ ಬಿದ್ದು ಮೃತಪಟ್ಟಿದ್ದರು.


ರಿಸರ್ವ್ ಕ್ಲಾಸ್‌ಗೆ ಹಣ ಪಡೆದು ಬೋಗಿಯಲ್ಲಿ ಟಿಟಿಇ/ ಗಾರ್ಡ್ ಇರದೆ, ಬಾಗಿಲನ್ನು ಮುಚ್ಚದಿರುವ ಕಾರಣ ಅವಘಡ ನಡೆದಿದೆ ಎಂದು ದೂರುದಾರರು ಪ್ರಕರಣ ದಾಖಲಿಸಿದ್ದರು.


ಆದರೆ, ದುರ್ಘಟನೆಯಿಂದ ಮೃತಪಟ್ಟರೆ ಇಲಾಖೆಯಿಂದ 8 ಲಕ್ಷ ರೂ. ಪಡೆಯಲು ರೈಲ್ವೆ ನ್ಯಾಯಮಂಡಳಿಯಲ್ಲಿ ದಾವೆ ಹೂಡಬೇಕು. ಗ್ರಾಹಕರ ಆಯೋಗದಲ್ಲಿ ವಿಮೆ ಕೇಳಲು ಅರ್ಹರಲ್ಲ ಎಂದು ಇಲಾಖೆ ನಿರಾಕರಿಸಿತ್ತು.


ಇದರಿಂದ ನೊಂದ ಕೀರ್ತಿವತಿ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ನೀಡಿದ್ದರು. ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯೆ ವಿಶಾಲಾಕ್ಷಿ ಬೋಳಶೆಟ್ಟಿ ವಿಚಾರಣೆ ನಡೆಸಿ ಈ ಮಹತ್ವದ ತೀರ್ಪು ಪ್ರಕಟಿಸಿದೆ.


ಪರಿಹಾರವಾಗಿ ನೀಡಬೇಕಾದ ವಿಮಾ ಹಣವನ್ನು ರೈಲ್ವೆ ನ್ಯಾಯಮಂಡಳಿಯಲ್ಲಿ ಪಡೆಯಬೇಕು. ಈ ಪ್ರಕರಣ ಆಯೋಗದ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದು ಕ್ಲೇಮು ನಿರಾಕರಿಸಿರುವುದು ಸರಿಯಲ್ಲ ಎಂದು ಗ್ರಾಹಕರ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.


ಇಂತಹ ಪ್ರಕರಣಗಳೂ ಗ್ರಾಹಕರ ಪರಿಹಾರ ಆಯೋಗದ ವ್ಯಾಪ್ತಿಗೆ ಬರುತ್ತದೆ ಎಂದು ತೀರ್ಪು ನೀಡಿದ ಗ್ರಾಹಕರ ನ್ಯಾಯಾಲಯವು, ದೂರುದಾರರಿಗೆ ತೀರ್ಪಿನಲ್ಲಿ ಪ್ರಕಟಿಸಲಾದ 8 ಲಕ್ಷ ರೂ. ಪರಿಹಾರವನ್ನು 1 ತಿಂಗಳೊಳಗೆ ಪಾವತಿಸಬೇಕು. ಜತೆಗೆ ಪ್ರಕರಣದ ವೆಚ್ಚವಾಗಿ ರೂ. 10,000 ಕೊಡಬೇಕು ಎಂದು ನೈಋತ್ಯ ರೈಲ್ವೆಗೆ ನಿರ್ದೇಶಿಸಿ ತೀರ್ಪು ನೀಡಿದೆ.



Ads on article

Advertise in articles 1

advertising articles 2

Advertise under the article