-->
ಸಿವಿಲ್ ಪ್ರಕ್ರಿಯಾ ಸಂಹಿತೆ (ಕರ್ನಾಟಕ ತಿದ್ದುಪಡಿ) ಅಧಿನಿಯಮ 2024 ರ ಕುರಿತು ಮಾಹಿತಿ

ಸಿವಿಲ್ ಪ್ರಕ್ರಿಯಾ ಸಂಹಿತೆ (ಕರ್ನಾಟಕ ತಿದ್ದುಪಡಿ) ಅಧಿನಿಯಮ 2024 ರ ಕುರಿತು ಮಾಹಿತಿ

ಸಿವಿಲ್ ಪ್ರಕ್ರಿಯಾ ಸಂಹಿತೆ (ಕರ್ನಾಟಕ ತಿದ್ದುಪಡಿ) ಅಧಿನಿಯಮ 2024 ರ ಕುರಿತು ಮಾಹಿತಿ





ಸಿವಿಲ್ ನ್ಯಾಯಾಲಯಗಳಲ್ಲಿ ದಾಖಲಾಗುವ ಪ್ರಕರಣಗಳ ಶೀಘ್ರ ವಿಲೇವಾರಿಗಾಗಿ ಹಾಗೂ ದಶಕ ಗಟ್ಟಲೆ ಕಾಯುವ ವಿಳಂಬಕ್ಕೆ ಮುಕ್ತಿ ನೀಡಲು ಕರ್ನಾಟಕ ಸರಕಾರವು ದಿಟ್ಟ ಹೆಜ್ಜೆಯನ್ನು ಇಟ್ಟಿದೆ. ಕೇಂದ್ರದ ಕಾನೂನಾದ 1908 ರ ಸಿವಿಲ್ ಪ್ರಕ್ರಿಯ ಸಂಹಿತೆಗೆ ಕರ್ನಾಟಕ ಸರಕಾರವು ಕ್ರಾಂತಿಕಾರಿ ತಿದ್ದುಪಡಿಯನ್ನು ಮಾಡಿದೆ.


ಈ ತಿದ್ದುಪಡಿಗೆ ರಾಷ್ಟ್ರಪತಿಗಳು ದಿನಾಂಕ 19.5.2025 ರಂದು ಸಹಿ ಮಾಡಿದ್ದಾರೆ. ಈ ತಿದ್ದುಪಡಿಯು ದಿನಾಂಕ 5.6.2025 ರಂದು ರಾಜ್ಯ ಪತ್ರದಲ್ಲಿ ಪ್ರಕಟವಾಗಿದ್ದು ಆ ದಿನಾಂಕದಿಂದ ಜಾರಿಗೆ ಬಂದಿದೆ. ಈ ತಿದ್ದುಪಡಿಯು ಕರ್ನಾಟಕ ರಾಜ್ಯಕ್ಕೆ ಸೀಮಿತವಾಗಿದೆ.


ನ್ಯಾಯದಾನ ವ್ಯವಸ್ಥೆಯಲ್ಲಿ ಸಂಪೂರ್ಣ ಸುಧಾರಣೆಗೆ ಈ ಕಾನೂನು ಅವಕಾಶ ಕಲ್ಪಿಸಿದೆ. ಕಕ್ಷಿದಾರರು ವೃಥಾ ನ್ಯಾಯಾಲಯಕ್ಕೆ ಅಲೆದಾಡುವುದನ್ನು ತಪ್ಪಿಸಿ ಆರ್ಥಿಕವಾಗಿ ಕೈಗೆಟುಕುವ ರೀತಿಯಲ್ಲಿ ತ್ವರಿತ ನ್ಯಾಯದಾನ ವ್ಯವಸ್ಥೆಗೆ ಒಂದು ನಿರ್ವಹಣಾ ವ್ಯವಸ್ಥೆಯನ್ನು ಕಲ್ಪಿಸಿ ಅನುಷ್ಠಾನಗೊಳಿಸಲಾಗಿದೆ.


ತಿದ್ದುಪಡಿಯ ಮುಖ್ಯಾಂಶಗಳು


1. ಕಡ್ಡಾಯ ಮಧ್ಯಸ್ಥಿಕೆ: ತುರ್ತು ಪ್ರಕರಣಗಳನ್ನು ಹೊರತುಪಡಿಸಿ ಎಲ್ಲಾ ಮೊಕದ್ದಮೆಗಳನ್ನು 2 ತಿಂಗಳೊಳಗೆ ಮಧ್ಯಸ್ಥಿಕೆಗೆ ಒಳಪಡಿಸಬೇಕು, ಈ ಅವಧಿಯನ್ನು ಮತ್ತೆ 1 ತಿಂಗಳವರೆಗೆ ವಿಸ್ತರಿಸಬಹುದು.


2. ಲಿಖಿತ ಹೇಳಿಕೆಯ ಗಡುವು: 30 ದಿನಗಳ ಒಳಗೆ ಸಲ್ಲಿಸಬೇಕು, ಗರಿಷ್ಠ ವಿಸ್ತರಣೆ 120 ದಿನಗಳವರೆಗೆ, ನಂತರ ಅನುಮತಿಸಲಾಗುವುದಿಲ್ಲ


3 ಸತ್ಯಾಪನ ಹೇಳಿಕೆ (sworn state ment): ಎಲ್ಲಾ ದಾವೆಗಳಿಗೆ ಪ್ರಮಾಣವಚನ ಸ್ವೀಕರಿಸಿದ ಅಫಿಡವಿಟ್ ನ ಅಗತ್ಯವಿದೆ. ಪರಿಶೀಲಿಸದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ


4. ಪ್ರಕರಣ ನಿರ್ವಹಣಾ ವಿಚಾರಣೆಗಳು: ಅರ್ಜಿ ಸಲ್ಲಿಸಿದ ನಂತರ 4 ವಾರದೊಳಗೆ ಮೊದಲ ವಿಚಾರಣೆ, ನ್ಯಾಯಾಲಯಗಳು ಪೂರ್ಣ ವಿಚಾರಣೆಯ ಸಮಯವನ್ನು ನಿಗದಿಪಡಿಸುತ್ತವೆ. ಅಂತಿಮ ತೀರ್ಪಿನ ದಿನಾಂಕವನ್ನು ನಿರ್ಧರಿಸಲಾಗುತ್ತದೆ.


5. ವಿಚಾರಣೆಯ ಗಡುವು: ಸಂಪೂರ್ಣ ವಿಚಾರಣೆಯನ್ನು 24 ತಿಂಗಳೊಳಗೆ ಮುಕ್ತಾಯಗೊಳಿಸಬೇಕು


6. ಮುಂದೂಡಿಕೆ ಸೀಮಿತವಾಗಿದೆ: ದಾವೆಯ ಪ್ರತಿ ಹಂತಕ್ಕೆ ಗರಿಷ್ಠ 3 ಮುಂದೂಡಿಕೆಗಳು. ಒಟ್ಟು 30 ದಿನಗಳನ್ನು ಮೀರಬಾರದು.


7. ಮನವಿ ಮತ್ತು ಸಂಪರ್ಕ ವಿವರಗಳು: ವಾದಪತ್ರ ಮತ್ತು ಲಿಖಿತ ಹೇಳಿಕೆಯಲ್ಲಿ ಪಕ್ಷಕಾರರ ಗುರುತು ಚೀಟಿ (ಐಡಿ), ಫೋನ್ ಸಂಖ್ಯೆ ಮತ್ತು ಇಮೇಲ್ ವಿಳಾಸವನ್ನು ಕಡ್ಡಾಯವಾಗಿ ನಮೂದಿಸಬೇಕು.


8. ದಾವೆಯಲ್ಲಿ ಬಡ್ಡಿ ವಿವರಗಳು: ಬಡ್ಡಿಯ ದರ, ಅವಧಿ ಮತ್ತು ಕಾನೂನು ಆಧಾರ ಇತ್ಯಾದಿ ವಿವರಗಳನ್ನು ವಾದ ಪತ್ರದಲ್ಲಿ ಸ್ಪಷ್ಟವಾಗಿ ಒದಗಿಸಬೇಕು.


9. ಕಟ್ಟುನಿಟ್ಟಾದ ನಿರಾಕರಣೆ ನಿಯಮಗಳು: ವಾದಪತ್ರದ ಒಕ್ಕಣೆಗಳನ್ನು ಸಮರ್ಪಕವಾಗಿ ಸಾಕ್ಷಾಧಾರಗಳೊಂದಿಗೆ ಲಿಖಿತ ಹೇಳಿಕೆಯಲ್ಲಿ ನಿರಾಕರಿಸಬೇಕು. ಅಸ್ಪಷ್ಟ ನಿರಾಕರಣೆಗಳನ್ನು ಸ್ವೀಕರಿಸಲಾಗುವುದಿಲ್ಲ.


10. ಸಾಕ್ಷ್ಯ ನಿಯಂತ್ರಣ: ನ್ಯಾಯಾಲಯಗಳು ಅಪ್ರಸ್ತುತ/ವಾದಾತ್ಮಕ ಅಫಿಡವಿಟ್‌ಗಳನ್ನು ತಿರಸ್ಕರಿಸಬಹುದು. ಸಾಕ್ಷಿ ವಿಚಾರಣೆಗೆ ವಾಯಿದೆಗಳನ್ನು ನೀಡದೆ ದೈನಂದಿನ ಕಲಾಪದಲ್ಲಿ ಸಾಕ್ಷ್ಯವನ್ನು ದಾಖಲಿಸಬೇಕು.


11 ಲಿಖಿತ ವಾದಗಳು: ಮೌಖಿಕ ವಾದಗಳಿಗೆ 7 ದಿನಗಳ ಮೊದಲು, ಸಂಕ್ಷಿಪ್ತ ಮತ್ತು ಸರಿಯಾದ ಸಿದ್ದ ನಿರ್ಣಯಗಳನ್ನು ಉಲ್ಲೇಖಿಸಲಾದ ಲಿಖಿತ ವಾದವನ್ನು ದಾಖಲಿಸಬೇಕು.


12. ತಂತ್ರಜ್ಞಾನ ಏಕೀಕರಣ ಮತ್ತು ಡಿಜಿಟಲೀಕರಣ ಇ ನ್ಯಾಯಾಲಯಗಳು ತಿದ್ದುಪಡಿಗಳು ಆನ್ಲೈನ್ ನಲ್ಲಿ ಪ್ರಕರಣಗಳನ್ನು ಸಲ್ಲಿಸಲು ದಾಖಲೆಗಳ ಇ ಫೈಲಿಂಗ್ ಮತ್ತು ಸಾಕ್ಷಿ ಪರೀಕ್ಷೆಗಾಗಿ ವಿಡಿಯೋ ಕಾನ್ಫರೆನ್ಸ್ ನಂತಹ ತಂತ್ರಜ್ಞಾನದ ಬಳಕೆಯನ್ನು, ಡಿಜಿಟಲ್ ಪರಿಕರಗಳ ಪರಿಚಯವನ್ನು ಉತ್ತೇಜಿಸುತ್ತವೆ.


13. ದುರ್ಬಲ ವಿಭಾಗಗಳಿಗೆ ಆದ್ಯತೆ, ವಿಶೇಷ ನಿಬಂಧನೆ


ಸಣ್ಣ ರೈತರು, ಆರ್ಥಿಕವಾಗಿ ದುರ್ಬಲ ವ್ಯಕ್ತಿಗಳು ಅಂದರೆ ವರ್ಷಕ್ಕೆ ರೂಪಾಯಿ 50 ಸಾವಿರಕ್ಕಿಂತ ಕಡಿಮೆ ಆದಾಯ ಉಳ್ಳ ದುರ್ಬಲ ಗುಂಪುಗಳಿಗೆ ತ್ವರಿತ ನ್ಯಾಯವನ್ನು ಖಚಿತಪಡಿಸಿಕೊಳ್ಳಲು ತಿದ್ದುಪಡಿ ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ


13. ಅತಿಕ್ರಮಣ ಪರಿಣಾಮ: overriding effect ಸಿಪಿಸಿ ಅಥವಾ ಹೈಕೋರ್ಟ್ ನಿಯಮಗಳ ಮೇಲೆ ಕರ್ನಾಟಕ ತಿದ್ದುಪಡಿ ನಿಯಮಗಳು ಮೇಲುಗೈ ಸಾಧಿಸುತ್ತವೆ.


14. ನಿಯಮ ರಚಿಸಲು ರಾಜ್ಯ ಸರ್ಕಾರದ ಅಧಿಕಾರ: ಕಾರ್ಯವಿಧಾನಗಳನ್ನು ತಿಳಿಸಲು ಮತ್ತು ತೊಂದರೆಗಳನ್ನು ತೆಗೆದುಹಾಕಲು ಸರ್ಕಾರಕ್ಕೆ ನಿಯಮಗಳನ್ನು ರಚಿಸುವ ಅಧಿಕಾರ ನೀಡಲಾಗಿದೆ.


ಕರ್ನಾಟಕ ರಾಜ್ಯವು ನ್ಯಾಯಾಲಯಗಳಲ್ಲಿ ಬಾಕಿ ಇರುವ ಸಿವಿಲ್ ಪ್ರಕರಣಗಳನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿರುವ ಕಾನೂನನ್ನು ಜಾರಿಗೆ ತಂದ ಭಾರತದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗುವ ಮೂಲಕ ಇತಿಹಾಸ ಸೃಷ್ಟಿಸಿದೆ. 


ಕರ್ನಾಟಕ ರಾಜ್ಯದಲ್ಲಿ 10 ಲಕ್ಷಕ್ಕೂ ಹೆಚ್ಚು ಸಿವಿಲ್ ಪ್ರಕರಣಗಳು ವಿಚಾರಣೆಯಲ್ಲಿ ಬಾಕಿ ಉಳಿದಿವೆ. ಕೆಲವು ಎರಡು ದಶಕಗಳಿಗಿಂತಲೂ ಹಳೆಯವು. ಈ ಕಾನೂನು ರಾಜ್ಯದ 1230 ನ್ಯಾಯಾಲಯಗಳಲ್ಲಿ ನ್ಯಾಯಾಂಗ ಪ್ರಕ್ರಿಯೆಯನ್ನು ಸುಗಮಗೊಳಿಸುವ ಒಂದು ನಿರ್ಣಾಯಕ ಹೆಜ್ಜೆಯಾಗಿದೆ.


✍️ ಪ್ರಕಾಶ್ ನಾಯಕ್, ಹಿರಿಯ ಶಿರಸ್ತೇದಾರರು, ನ್ಯಾಯಾಂಗ ಇಲಾಖೆ, ದ.ಕ.

Ads on article

Advertise in articles 1

advertising articles 2

Advertise under the article