
ಬೀದಿ ನಾಯಿಗಳಿಗೆ ಸಾರ್ವಜನಿಕವಾಗಿ ಆಹಾರ ನೀಡುವಂತಿಲ್ಲ: ಲಸಿಕೆ ಪಡೆದ ಶ್ವಾನಗಳ ಬಿಡುಗಡೆಗೆ ಸುಪ್ರೀಂ ಕೋರ್ಟ್ ಅವಕಾಶ
ಬೀದಿ ನಾಯಿಗಳಿಗೆ ಸಾರ್ವಜನಿಕವಾಗಿ ಆಹಾರ ನೀಡುವಂತಿಲ್ಲ: ಲಸಿಕೆ ಪಡೆದ ಶ್ವಾನಗಳ ಬಿಡುಗಡೆಗೆ ಸುಪ್ರೀಂ ಕೋರ್ಟ್ ಅವಕಾಶ
ಬೀದಿನಾಯಿಗಳಿಗೆ ಸಂಬಂಧಿಸಿದಂತೆ ಪ್ರಾಣಿ ಪ್ರಿಯರ ತಾಂಡವ ನೃತ್ಯಕ್ಕೆ ಸುಪ್ರೀಂಕೋರ್ಟ್ ತೆರೆ ಎಳೆದಿದೆ. ನಾಯಿಗಳಿಗೆ ಸಾರ್ವಜನಿಕವಾಗಿ ಆಹಾರ ನೀಡುವುದನ್ನು ನಿರ್ಬಂಧಿಸಲಾಗಿದ್ದು, ಲಸಿಕೆ ಹಾಕಿದ ನಾಯಿಗಳಿಗೆ ಮಾತ್ರ ಬಿಡುಗಡೆಯ ಭಾಗ್ಯ ದೊರೆತಿದೆ.
ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಶ್ರೀ ವಿಕ್ರಮ್ ನಾಥ್, ಶ್ರೀ ಸಂದೀಪ್ ಮೆಹ್ತಾ ಮತ್ತು ಶ್ರೀ ಎನ್.ವಿ. ಅಂಜಾರಿಯಾ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಮಹತ್ವದ ತೀರ್ಪು ನೀಡಿದೆ.
ದೆಹಲಿಯಲ್ಲಿ ವಿಪರೀತವಾದ ಶ್ವಾನ ಕಾಟದ ಹಿನ್ನೆಲೆಯಲ್ಲಿ ದೇಶದ ರಾಜಧಾನಿಯನ್ನು ಬೀದಿನಾಯಿಗಳಿಂದ ಮುಕ್ತ ಮಾಡುವಂತೆ ಈ ಹಿಂದೆ ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ಕೊಂಚ ಮಾರ್ಪಾಡು ಮಾಡಿದೆ.
ಪ್ರಾಣಿ ಪ್ರಿಯರು ಮತ್ತು ಸರ್ಕಾರೇತರ ಸಂಸ್ಥೆಗಳಿಗೆ ಬಿಸಿ ಮುಟ್ಟಿಸಿರುವ ಈ ಆದೇಶ, ಅರ್ಜಿಯ ವಿಚಾರಣೆಗಾಗಿ ಠೇವಣಿ ಇಡುವಂತೆ ಸೂಚಿಸಿದೆ. ಶ್ವಾನ ಪ್ರಿಯರಿಗೆ ವೈಯಕ್ತಿಕವಾಗಿ 25000/- ಸರ್ಕಾರೇತರ ಸಂಸ್ಥೆಗಳಿಗೆ 2 ಲಕ್ಷ ರೂ.ಗಳ ಠೇವಣಿ ಇಡುವಂತೆ ಸೂಚಿಸಿದೆ. ಠೇವಣಿ ಇಡದಿದ್ದರೆ ಅಂಥವರು ವಿಚಾರಣೆಯಲ್ಲಿ ಭಾಗಿಯಾಗುವಂತಿಲ್ಲ.
ಆಕ್ರಮಣಕಾರಿ ನಡವಳಿಕೆ ಅಥವಾ ರೇಬಿಸ್ ಸೋಂಕಿಗೆ ತುತ್ತಾದ ನಾಯಿಗಳನ್ನು ಶ್ವಾನಾಶ್ರಯ ಕೇಂದ್ರಗಳಿಂದ ಮುಕ್ತಗೊಳಿಸದಂತೆ ತ್ರಿಸದಸ್ಯ ನ್ಯಾಯಪೀಠ ಆದೇಶಿಸಿದೆ. ನಾಯಿಗಳಿಗೆ ಇನ್ನು ಮುಂದೆ ಸಾರ್ವಜನಿಕವಾಗಿ ಆಹಾರ ನೀಡುವಂತಿಲ್ಲ. ಇದಕ್ಕಾಗಿ ಪ್ರತ್ಯೇಕ ಸ್ಥಳವನ್ನು ನಿಗದಿಪಡಿಸಬೇಕು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.