
ಸುಳ್ಳು ಮಾಹಿತಿ ಪ್ರಚಾರ ಮಾಡಿದ ಆರೋಪ: ವಕೀಲರ ವಿರುದ್ಧ ಪ್ರಕರಣ ದಾಖಲು
ಸುಳ್ಳು ಮಾಹಿತಿ ಪ್ರಚಾರ ಮಾಡಿದ ಆರೋಪ: ವಕೀಲರ ವಿರುದ್ಧ ಪ್ರಕರಣ ದಾಖಲು
ಧರ್ಮಸ್ಥಳ ಗ್ರಾಮದ ಶವಗಳ ಹೂತು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ನಡೆಸುತ್ತಿರುವ ಕಾರ್ಯಾಚರಣೆ ಬಗ್ಗೆ ಸುಳ್ಳು ಮಾಹಿತಿ ಪ್ರಸಾರ ಮಾಡಿದ್ದ ಆರೋಪದ ಮೇರೆಗೆ ವಕೀಲ ಮಂಜುನಾಥ್ ಎನ್. ವಿರುದ್ಧ ಪ್ರಕರಣ ದಾಖಲಾಗಿದೆ.
ವಕೀಲರಾದ ಮಂಜುನಾಥ ಅವರು 'ಸಾರ್ವಜನಿಕರ ನೆಮ್ಮದಿಗೆ ಧಕ್ಕೆ' ತರುವಂತೆ ಅನಧಿಕೃತ ವಿವರಗಳಿದ್ದ ಸುಳ್ಳು ಪತ್ರಿಕಾ ಪ್ರಕಟಣೆಯನ್ನು ಪ್ರಸಾರ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಧರ್ಮಸ್ಥಳದ ರಘುರಾಮ ಶೆಟ್ಟಿ ಎಂಬವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ. ಈ ದೂರಿನ ಆಧಾರದಲ್ಲಿ ವಕೀಲರಾದ ಮಂಜುನಾಥ ಎನ್. ವಿರುದ್ಧ ಬೆಳ್ತಂಗಡಿ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 220, 353(1)(ಎ), 353(2) ಅಡಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
'ಮೃತದೇಹಗಳ ಅವಶೇಷ ಪತ್ತೆಗೆ ಅಗೆಯುವ ಪ್ರಕ್ರಿಯೆ ಕುರಿತು ಜುಲೈ 30ರಂದು ಈ ಪ್ರಕಟಣೆ ಮಾಡಿದ್ದರು ಎನ್ನಲಾಗಿದೆ.