
ಪತಿ ವಿರುದ್ಧ ನಿರಂತರ ಸುಳ್ಳು ಕೇಸ್: 16 ವರ್ಷಗಳ ಕಾಲ ಸತಾಯಿಸಿದ ಪತ್ನಿಗೆ 1.8 ಕೋಟಿ ದಂಡ ವಿಧಿಸಿದ ನ್ಯಾಯಾಲಯ!
ಪತಿ ವಿರುದ್ಧ ನಿರಂತರ ಸುಳ್ಳು ಕೇಸ್: 16 ವರ್ಷಗಳ ಕಾಲ ಸತಾಯಿಸಿದ ಪತ್ನಿಗೆ 1.8 ಕೋಟಿ ದಂಡ ವಿಧಿಸಿದ ನ್ಯಾಯಾಲಯ!
ತನ್ನ ಪತಿಯ ವಿರುದ್ಧ ಇಲ್ಲಸಲ್ಲದ ಆಪಾದನೆ ಹೊರಿಸಿ ನಿರಂತರ ಸುಳ್ಳು ಕೇಸ್ ಹಾಕಿದ್ದ ಪತ್ನಿಯ ಗ್ರಹಚಾರವನ್ನು ನ್ಯಾಯಾಲಯ ಬಿಡಿಸಿದೆ. 16 ವರ್ಷಗಳ ಕಾಲ ಪತಿಯನ್ನು ಕೋರ್ಟ್-ಕಚೇರಿ ಸುತ್ತುವಂತೆ ಮಾಡಿ ಸತಾಯಿಸಿದ ಪತ್ನಿಗೆ 1.8 ಕೋಟಿ ದಂಡ ವಿಧಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.
ಉತ್ತರ ಪ್ರದೇಶದ ಗುರುಗ್ರಾಮದ ನ್ಯಾಯಾಧೀಶರಾದ ಮನೀಶ್ ಕುಮಾರ್ ಅವರು ಈ ಮಹತ್ವದ ಆದೇಶ ಹೊರಡಿಸಿದ್ದಾರೆ. ಪತಿಯ ವಿರುದ್ಧ ದಾಖಲಿಸಿ ಅನೇಕ ಪ್ರಕರಣಗಳಲ್ಲಿ ಸುಳ್ಳು ಆರೋಪ ಮಾಡಿ ಕೇಸು ದಾಖಲು ಮಾಡಿರುವುದು ಮತ್ತು ಮಹಿಳಾ ಪರ ಕಾನೂನುಗಳ ದುರ್ಬಳಕೆ ಮಾಡಿರುವ ಬಗ್ಗೆ ಮಾನ್ಯ ಕೋರ್ಟ್ ಕಳವಳ ವ್ಯಕ್ತಪಡಿಸಿದೆ.
ತನ್ನ ಮಾಜಿ ಪತ್ನಿ ಇಂಗ್ಲೆಂಡ್ ಪ್ರಜೆಯೊಬ್ಬರು ತನ್ನ ವಿರುದ್ಧ ಸುಳ್ಳು ವರದಕ್ಷಿಣೆ ಪ್ರಕರಣದಲ್ಲಿ ಪರಿಹಾರಕ್ಕೆ ಕೋರಿ ಅರ್ಜಿ ಸಲ್ಲಿಸಿದದಾರೆ. ಕಾರಣವಿಲ್ಲದೆ ತನ್ನನ್ನು ಕೇಸ್‌ನಲ್ಲಿ ಪತ್ನಿ ಸಿಲುಕಿಸಿರುವ ಬಗ್ಗೆ ನ್ಯಾಯಾಲಯಕ್ಕೆ ಅವರು ಸಾಕ್ಷಿ ಸಹಿತ ದಾಖಲೆ ಒದಗಿಸಿದ್ದರು. ಈ ರೀತಿ ಮಾನಸಿಕವಾಗಿ ಹಿಂಸೆ ನೀಡಿದಾಕೆ ತನಗೆ 1.80 ಕೋಟಿ ಪರಿಹಾರ ನೀಡಬೇಕು ಎಂದು ಅವರು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು.
ಮನವಿಯ ವಿಚಾರಣೆಯನ್ನು ನಡೆಸಿದ ನ್ಯಾಯಾಧೀಶ ಮನೀಶ್ ಕುಮಾರ್ ಪತಿಯ ಅರ್ಜಿಯನ್ನು ಮಾನ್ಯ ಮಾಡಿದ್ದಾರೆ. ಹಾಗೂ ಪತ್ನಿಗೆ 1.8 ಕೋಟಿ ದಂಡ ವಿಧಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 498A (ಕೌರ್ಯ), 405 (ಕ್ರಿಮಿನಲ್ ನಂಬಿಕೆ ಉಲ್ಲಂಘನೆ) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪತ್ನಿ ನೀಡಿದ್ದ ದೂರಿನ ಆಧಾರದಲ್ಲಿ ಪತಿಯನ್ನು ಬಂಧಿಸಲಾಗಿತ್ತು. ತನ್ನ ವಿರುದ್ಧ ಸುಳ್ಳು ಆರೋಪ ಹೊರಿಸಲಾಗಿದೆ ಎಂದು ಪತಿ ವಾದಿಸಿದ್ದರು. 2016 ರಲ್ಲಿ ಕೆಳ ನ್ಯಾಯಾಲಯ ಪತಿಯನ್ನು ಆರೋಪಮುಕ್ತಗೊಳಿಸಿತ್ತು.
ಇದರಿಂದ ತೃಪ್ತರಾಗದ ದುಷ್ಟ ಪತ್ನಿ 2018 ರಲ್ಲಿ ಸೆಷನ್ಸ್ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಳು. ಸೆಷನ್ಸ್ ನ್ಯಾಯಾಲಯವೂ ಮೇಲ್ಮನವಿಯನ್ನು ತಿರಸ್ಕರಿಸಿ ಆರೋಪಿ ಪರ ಆದೇಶವನ್ನು ಎತ್ತಿಹಿಡಿಯಿತು.
ಸುದೀರ್ಘ ಅವಧಿಯ ವರೆಗೆ ತಮಗೆ ಕಿರುಕುಳ ನೀಡಿದ ಮಾಜಿ ಪತ್ನಿಯನ್ನು ಸುಮ್ಮನೆ ಬಿಡಬಾರದು ಎಂದು ಪತಿ ಕೋರ್ಟ್‌ಗೆ ಮನವಿ ಸಲ್ಲಿಸಿದರು. 16 ವರ್ಷಗಳ ಕಾನೂನು ಹೋರಾಟದಲ್ಲಿ ಆಗಿರುವ ಆರ್ಥಿಕ ನಷ್ಟ ಮತ್ತು ವೈಯಕ್ತಿಕ ನೋವನ್ನು ಉಲ್ಲೇಖಿಸಿ. ದುರುದ್ದೇಶಪೂರಿತ ಕೇಸ್ ದಾಖಲಿಸಿದ್ದ ಮಾಜಿ ಪತ್ನಿಯ ವಿರುದ್ಧ ಸಿವಿಲ್ ನ್ಯಾಯಾಲಯದಲ್ಲಿ ಪರಿಹಾರ ಕೋರಿದರು. ಈ ಮೊಕದ್ದಮೆಯನ್ನು ವುರಸ್ಕರಿಸಿದ ಕೋರ್ಟ್ ಪರಿಗಣಿಸಿ. ಪತ್ನಿಗೆ ದಂಡ ವಿಧಿಸಿದೆ.