
ದಿನಗೂಲಿ ನೌಕರರ ಖಾಯಂ ಪ್ರಕ್ರಿಯೆ: ಅವಕಾಶ ನಿರಾಕರಣೆಗೆ ಆರ್ಥಿಕ ಮಿತಿ ಸಲ್ಲದು- ಸುಪ್ರೀಂ ಕೋರ್ಟ್
ದಿನಗೂಲಿ ನೌಕರರ ಖಾಯಂ ಪ್ರಕ್ರಿಯೆ: ಅವಕಾಶ ನಿರಾಕರಣೆಗೆ ಆರ್ಥಿಕ ಮಿತಿ ಸಲ್ಲದು- ಸುಪ್ರೀಂ ಕೋರ್ಟ್
ಸರಕಾರಿ ಇಲಾಖೆಗಳಲ್ಲಿ ದಶಕಗಳಿಂದ ಕಾರ್ಯನಿರ್ವಹಿಸುತ್ತಾ ಬಂದಿರುವ ದಿನಗೂಲಿ ನೌಕರರ ಸೇವೆ ಖಾಯಂಗೊಳಿಸುವುದಕ್ಕೆ ಆರ್ಥಿಕ ಮಿತಿ ಹೇರುವುದು ಸರಿಯಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ವಿಕ್ರಮನಾಥ್ ಅವರಿದ್ದ ನ್ಯಾಯಪೀಠ ಈ ತೀರ್ಪು ನೀಡಿದೆ.
ಉತ್ತರ ಪ್ರದೇಶದ ಉನ್ನತ ಶಿಕ್ಷಣ ಇಲಾಖೆಯಲ್ಲಿ ದೀರ್ಘ ಕಾಲದಿಂದ ದಿನಗೂಲಿ ನೌಕರರಾಗಿ ಸೇವೆ ಸಲ್ಲಿಸುತ್ತಿರುವ ನೌಕರರ ಅರ್ಜಿ ವಿಚಾರಣೆ ನಡೆಸಿದ ಪೀಠ ಈ ಆದೇಶ ಹೊರಡಿಸಿದೆ.
ದಶಕಗಳಿಂದ ಸರಕಾರಿ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಾ ಬಂದಿರುವ ದಿನಗೂಲಿ ನೌಕರರ ಸೇವೆಯನ್ನು ಖಾಯಂ ನೌಕರಿಗೆ ಪರಿಗಣಿಸಲು ಆರ್ಥಿಕ ಮಿತಿಯನ್ನು 'ತಾಯತ ರಕ್ಷಾ ಕವಚ'ದಂತೆ ಬಳಸುತ್ತಿರುವುದು ಸರಿಯಲ್ಲ ಎಂದು ನ್ಯಾಯಪೀಠ ಹೇಳಿದೆ.
"ಕೇಂದ್ರ ಹಾಗೂ ರಾಜ್ಯ ಸರಕಾರಗಳೂ ಒಳಗೊಂಡಂತೆ ವಿವಿಧ ಸರಕಾರಗಳು ಸಾಂವಿಧಾನಿಕ ಉದ್ಯೋಗದಾತರಿದ್ದಂತೆ. ದಿನಗೂಲಿ ನೌಕರರಿಗೆ ತಕ್ಕ ವೇತನ ನಿರಾಕರಿಸುವ ಪ್ರಯತ್ನ ಮಾಡಬಾರದು. ಈ ಮೂಲಕ ಬಜೆಟ್‌ನಲ್ಲಿ ಸಮತೋಲನ ಕಾಪಾಡಿಕೊಳ್ಳುವ ಪ್ರಯತ್ನ ಮಾಡಬಾರದು. ಹೀಗೆ ಮಾಡಿದಲ್ಲಿ ನೌಕರರ ವಿಶ್ವಾಸ ಕುಗ್ಗಿಸಿದಂತಾಗುತ್ತದೆ'' ಎಂದು ಹಿತವಚನ ನುಡಿಯಿತು.