
ವರಮಹಾಲಕ್ಷ್ಮಿ ಪ್ರಯುಕ್ತ ನಾಳೆ ಕೋರ್ಟ್ ಗೆ ರಜೆ: ವಕೀಲರು, ನ್ಯಾಯಾಂಗ ಸಿಬ್ಬಂದಿಗೆ ಸತತ ಮೂರು ದಿನ ವೀಕೆಂಡ್ ಮಜ
Thursday, August 7, 2025
ವರಮಹಾಲಕ್ಷ್ಮಿ ಪ್ರಯುಕ್ತ ನಾಳೆ ಕೋರ್ಟ್
ಗೆ ರಜೆ: ವಕೀಲರು, ನ್ಯಾಯಾಂಗ ಸಿಬ್ಬಂದಿಗೆ ಸತತ ಮೂರು ದಿನ ವೀಕೆಂಡ್ ಮಜ
ವರಮಹಾಲಕ್ಷ್ಮಿ ಪ್ರಯುಕ್ತ ಶುಕ್ರವಾರ
(08-08-2025)ರಂದು ರಾಜ್ಯದ ಹೈಕೋರ್ಟ್, ವಿಭಾಗೀಯ ಪೀಠ, ಹಾಗೂ ಜಿಲ್ಲಾ ನ್ಯಾಯಾಲಯಗಳಿಗೆ ರಜೆ ಘೋಷಿಸಲಾಗಿದೆ.
ಶನಿವಾರ ಎರಡನೇ ಶನಿವಾರ ಪ್ರಯುಕ್ತ ರಜೆ ಇರುವುದರಿಂದ
ವಕೀಲರು, ನ್ಯಾಯಾಂಗ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸತತ ಮೂರು ದಿನಗಳ ಕಾಲ ರಜೆ ಸಿಕ್ಕಂತೆ ಆಗುತ್ತದೆ.
ಪ್ರತಿ ವರ್ಷ “ವರ ಮಹಾಲಕ್ಷ್ಮಿ” ಹಬ್ಬದ ಪ್ರಯುಕ್ತ ಹೈಕೋರ್ಟ್ ರಜೆ ಘೋಷಿಸುತ್ತಿದ್ದು, ಈ ರಜೆಯ ಬದಲಿಗೆ ತಿಂಗಳ ನಾಲ್ಕನೇ ಶನಿವಾರವನ್ನು ಪೂರ್ವಕಾಲಿಕ ಕರ್ತವ್ಯದ ದಿನ ಎಂದು ಘೋಷಿಸಲಾಗುತ್ತದೆ.