.jpg)
ಜಾರಿ ನಿರ್ದೇಶನಾಲಯದ ವರ್ಚಸ್ಸಿಗೆ ಆತಂಕ; ಇಡಿ ವಂಚಕನಂತೆ ವರ್ತಿಸಬಾರದು - ಅಧಿಕಾರ ದುರುಪಯೋಗದ ಬಗ್ಗೆ ಅಧಿಕಾರಿಗಳನ್ನು ಗದರಿಸಿದ ಸುಪ್ರೀಂ ಕೋರ್ಟ್
ಜಾರಿ ನಿರ್ದೇಶನಾಲಯದ ವರ್ಚಸ್ಸಿಗೆ ಆತಂಕ; ಇಡಿ ವಂಚಕನಂತೆ ವರ್ತಿಸಬಾರದು - ಅಧಿಕಾರ ದುರುಪಯೋಗದ ಬಗ್ಗೆ ಅಧಿಕಾರಿಗಳನ್ನು ಗದರಿಸಿದ ಸುಪ್ರೀಂ ಕೋರ್ಟ್
ಆರೋಪಿಗಳು ತಪ್ಪಿತಸ್ಥರೆಂದು ಸಾಬೀತಾಗದೇ ಇದ್ದರೂ ಜಾರಿ ನಿರ್ದೇಶನಾಲಯವು ವರ್ಷಗಟ್ಟಲೆ ವಿಚಾರಣೆ ಇಲ್ಲದೆ ಅವರಿಗೆ ಶಿಕ್ಷೆ ವಿಧಿಸುವಲ್ಲಿ ಯಶಸ್ವಿಯಾಗುತ್ತಿದೆ ಎಂದು ಸುಪ್ರೀಂ ಕೋರ್ಟ್ ಇಡಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಇಡಿಯ ವರ್ಚಸ್ಸಿಗೆ ಆತಂಕ ಎದುರಾಗಿದ್ದು, ಈ ಸಂವಿಧಾನಿಕ ಸಂಸ್ಥೆ ಒಬ್ಬ ವಂಚಕನಂತೆ ವರ್ತಿಸಬಾರದು ಎಂದು ಸಂಸ್ಥೆಯ ಅಧಿಕಾರ ದುರುಪಯೋಗದ ಬಗ್ಗೆ ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ ಅಧಿಕಾರಿಗಳನ್ನು ಗದರಿಸಿತು.
ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ, ನ್ಯಾಯಮೂರ್ತಿಗಳಾದ ಸತೀಶ್ ಚಂದ್ರ ಶರ್ಮಾ ಮತ್ತು ವಿನೋದ್ ಚಂದ್ರನ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಟೀಕೆ ಮಾಡಿದೆ.
ಇನ್ನೊಂದು ಪ್ರತ್ಯೇಕ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಸೂರ್ಯಕಾಂತ್, ಉಜ್ಜಲ್ ಭುಯಾನ್ ಮತ್ತುಎನ್. ಕೋಟೀಶ್ವರ್ ಸಿಂಗ್ ಅವರಿದ್ದ ನ್ಯಾಯಪೀಠವೂ ಇ.ಡಿ. ವಿರುದ್ಧ ಟೀಕಾ ಪ್ರಹಾರ ಮಾಡಿದೆ.
ವಿಜಯ್ ಮದನ್ ಲಾಲ್ ಚೌಧರಿ ವಿರುದ್ಧ ಭಾರತ ಒಕ್ಕೂಟ ಪ್ರಕರಣದ ವಿರುದ್ಧ ಮರು ಪರಿಶೀಲನಾ ಅರ್ಜಿಯನ್ನು ಆಲಿಸಿದ ನ್ಯಾಯಪೀಠ, ಇಡಿಯ ವರ್ಚಸ್ಸಿಗೆ ಆತಂಕ ಎದುರಾಗಿದೆ ಎಂದು ಅಭಿಪ್ರಾಯಪಟ್ಟಿತು.
ಸುಮಾರು 5000 ಪ್ರಕರಣಗಳಲ್ಲಿ ಶೇಕಡಾ 10ಕ್ಕಿಂತ ಪ್ರಕರಣಗಳಲ್ಲಿ ಮಾತ್ರ ಶಿಕ್ಷೆ ಆಗುತ್ತಿದೆ. ಇಡಿ ವಂಚಕನಂತೆ ವರ್ತಿಸಬಾರದು. ಅದು ಕಾನೂನು ಚೌಕಟ್ಟಿನ ಒಳಗೆ ಕಾರ್ಯ ಮಾಡಬೇಕು. ಕಾನೂನು ಜಾರಿ ಅಧಿಕಾರಿಗಳು ಮತ್ತು ಕಾನೂನು ಉಲ್ಲಂಘಿಸುವವರ ನಡುವೆ ವ್ಯತ್ಯಾಸವಿದೆ ಎಂದು ಹೇಳಿತು.