
ಪಿಎಸ್‌ಐ, ಪೊಲೀಸ್ ಕಾನ್‌ಸ್ಟೆಬಲ್ ಹುದ್ದೆಗಳ ಭರ್ತಿಗೆ ವಯೋಮಿತಿ ಹೆಚ್ಚಳ: ರಾಜ್ಯ ಸರ್ಕಾರ ಅನುಮತಿ
Saturday, September 27, 2025
ಪಿಎಸ್‌ಐ, ಪೊಲೀಸ್ ಕಾನ್‌ಸ್ಟೆಬಲ್ ಹುದ್ದೆಗಳ ಭರ್ತಿಗೆ ವಯೋಮಿತಿ ಹೆಚ್ಚಳ: ರಾಜ್ಯ ಸರ್ಕಾರ ಅನುಮತಿ
ಪೊಲೀಸ್ ಕಾನ್‌ಸ್ಟೆಬಲ್ ಮತ್ತು ಪಿಎಸ್‌ಐ ಹುದ್ದೆಗಳ ಭರ್ತಿಗೆ ಗರಿಷ್ಠ ವಯೋಮಿತಿ ಹೆಚ್ಚಿಸಲು ಗೃಹ ಇಲಾಖೆ ಅನುಮತಿ ನೀಡಿದೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗದವರಿಗೆ ಪಿಎಸ್‌ಐ ಹುದ್ದೆಗೆ 32 ವರ್ಷ, ಕಾನ್‌ಸ್ಟೆಬಲ್‌ಗೆ 30 ವರ್ಷ, ಇತರೆ ಅಭ್ಯರ್ಥಿಗಳಿಗೆ ಪಿಎಸ್‌ಐಗೆ 30 ವರ್ಷ ಹಾಗೂ ಕಾನ್‌ಸ್ಟೆಬಲ್‌ಗೆ 27 ವರ್ಷ ವಯೋಮಿತಯನ್ನು ನಿಗದಿಪಡಿಸಲಾಗಿದೆ.
2020ರಲ್ಲಿ ಕಾನ್‌ಸ್ಟೆಬಲ್ ನೇಮಕಾತಿಗೆ ಗರಿಷ್ಠ ವಯೋಮಿತಿ ಎಸ್‌ಸಿ, ಎಸ್‌ಟಿ ಮತ್ತು ಹಿಂದುಳಿದ ವರ್ಗದವರಿಗೆ 27, ಇತರೆ ಅಭ್ಯರ್ಥಿಗಳಿಗೆ 25 ವರ್ಷನಿಗದಿಪಡಿಸಲಾಗಿತ್ತು