
ಸಿಓಪಿ ಅರ್ಜಿ ಸಲ್ಲಿಸಿದವರ ಪಟ್ಟಿ ಬಿಡುಗಡೆ: ಪರಿಶೀಲನೆಗೆ ವಕೀಲರಲ್ಲಿ ಕೆಎಸ್‌ಬಿಸಿ ಮನವಿ
ಸಿಓಪಿ ಅರ್ಜಿ ಸಲ್ಲಿಸಿದವರ ಪಟ್ಟಿ ಬಿಡುಗಡೆ: ಪರಿಶೀಲನೆಗೆ ವಕೀಲರಲ್ಲಿ ಕೆಎಸ್‌ಬಿಸಿ ಮನವಿ
ಸರ್ಟಿಫಿಕೇಟ್ ಆಫ್ ಪ್ರ್ಯಾಕ್ಟೀಸಿಂಗ್(ಸಿಓಪಿ) ಅರ್ಜಿ ಸಲ್ಲಿಸಿದವರ ಪಟ್ಟಿಯನ್ನು ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಬಿಡುಗಡೆ ಮಾಡಿದೆ. ಈ ಬಗ್ಗೆ ಪರಿಶೀಲನೆ ನಡೆಸುವಂತೆ ರಾಜ್ಯದ ವಕೀಲರ ಸಮುದಾಯದಲ್ಲಿ ಕೆಎಸ್‌ಬಿಸಿ ಮನವಿ ಮಾಡಿದೆ.
ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಅಧಿಕೃತ ಜಾಲತಾಣವಾದ ksbc.org.in ನಲ್ಲಿ ಪಟ್ಟಿ ಪ್ರಕಟಿಸಲಾಗಿದೆ. ಈ ಪಟ್ಟಿಯಲ್ಲಿ ಸಿಓಪಿ ಅರ್ಜಿಯನ್ನು ಸಲ್ಲಿಸಿದವರ ಒಟ್ಟು 69082 ವಕೀಲರ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ವಕೀಲರು ಈ ಪಟ್ಟಿಯದನ್ನು ಪರಿಶೀಲಿಸಿ ಏನಾದರೂ ಬದಲಾವಣೆಗಳಿದ್ದಲ್ಲಿ ದೂರವಾಣಿ ಸಂಖ್ಯೆ 9483583767 ಹಾಗೂ kar_barcouncil@yahoo.com ಲಿಖಿತವಾಗಿ ದಿನಾಂಕ 30/10/2025 ರ ಒಳಗಾಗಿ ಕಳುಹಿಸಬೇಕು ಎಂದು ವಕೀಲರ ಪರಿಷತ್ತು ಸೂಚನೆ ನೀಡಿದೆ.
ಕರ್ನಾಟಕ ರಾಜ್ಯಾದ್ಯಂತಹ ವಕೀಲರು ತಮ್ಮ ಸಲಹೆ ಸೂಚನೆಗಳನ್ನು ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ದೂರವಾಣಿ ಸಂಖ್ಯೆಗೆ (9483583767 ) ಸಂಪರ್ಕಿಸಬೇಕು ಎಂದು ಸೂಚಿಸಲಾಗಿದೆ.
ದಿನಾಂಕ 1-5-2025 ರಿಂದ 20-9-2025 ರವರೆಗೆ ಸ್ವೀಕರಿಸಿದ ಸಿಓಪಿ ಅರ್ಜಿಯ ಪಟ್ಟಿಯನ್ನು ಪ್ರತ್ಯೇಕವಾಗಿ ವಕೀಲರ ಪರಿಷತ್ತಿನ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ ಎಂದು ಕರ್ನಾಟಕ ರಾಜ್ಯ ವಕೀಲರ ಪರಿಷತ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.