-->
ವಿಕ್ರಯ ಮೊತ್ತವಿಲ್ಲದ ಸ್ಥಿರಾಸ್ತಿಯ 'ಕ್ರಯ ಪತ್ರ' ಅನೂರ್ಜಿತ- ಇದಕ್ಕೆ ಕಾಲಮಿತಿ ಕಾಯ್ದೆಯ ಸೆಕ್ಷನ್ 59 ಅನ್ವಯಿಸದು- ಸುಪ್ರೀಂ ಕೋರ್ಟ್ ತೀರ್ಪು

ವಿಕ್ರಯ ಮೊತ್ತದ ಪ್ರಸ್ತಾಪ ಇಲ್ಲದ ಸ್ಥಿರಾಸ್ತಿಯ 'ಕ್ರಯಪತ್ರ' ಅನೂರ್ಜಿತವಾಗಿದೆ. ಇದಕ್ಕೆ ಕಾಲಮಿತಿ ಕಾಯ್ದೆಯ ಸೆಕ್ಷನ್ 59 ಅನ್ವಯವಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದೀವಾಲ ಮತ್ತು ಆರ್. ಮಹಾದೇವನ್ ಅವರಿದ್ದ ನ್ಯಾಯಪೀಠ ಈ ತೀರ್ಪು ನೀಡಿದೆ.

ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಅರ್ಜಿದಾರರು ಸಲ್ಲಿಸಿದ್ದ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

ಸದ್ರಿ ಪ್ರಕರಣದಲ್ಲಿ 'ಕ್ರಯಪತ್ರ'ದ ಜಾರಿಯ ಸಂದರ್ಭದಲ್ಲಿ ಮಾರಾಟಗಾರರು ಸ್ಥಿರಾಸ್ತಿಯ ಮಾರಾಟಕ್ಕೆ ಸಂಬಂಧಿಸಿದಂತೆ ಯಾವುದೇ ಮೊತ್ತವನ್ನು ಖರೀದಿದಾರರಿಂದ ಪಡೆದುಕೊಂಡಿಲ್ಲ. ಹಾಗಾಗಿ, ಈ ಕ್ರಯಪತ್ರ ಅನೂರ್ಜಿತವಾಗಿದೆ. ಹಾಗಾಗಿ, ಈ ಕ್ರಯಪತ್ರದ ರದ್ದು ಕೋರಬೇಕಾಗಿಲ್ಲ.

ಈ ಪ್ರಕರಣದಲ್ಲಿ ಕಾಲಮಿತಿಯ ಸೆಕ್ಷನ್ 65 ಅನ್ವಯವಾಗುವುದಿಲ್ಲ. ಬದಲಿಗೆ ಸೆಕ್ಷನ್ 59 ಅನ್ವಯವಾಗುತ್ತದೆ ಎಂಬ ಹೈಕೋರ್ಟ್ ತೀರ್ಪು ದೋಷಯುಕ್ತವಾಗಿದೆ ಎಂದು ತೀರ್ಪಿನಲ್ಲಿ ಹೇಳಿದೆ.

ಪ್ರಕರಣ: ಶಾಂತಿ ದೇವಿ(ಮೃತ) ವಾರಿಸು ಗೋರನ್ ವಿರುದ್ಧ ಜಗನ್ ದೇವಿ ಮತ್ತಿತರರು

ಸುಪ್ರೀಂ ಕೋರ್ಟ್ SLP(C) 24821/2018 Dated 12-09-2025

Ads on article

Advertise in articles 1

advertising articles 2

Advertise under the article