ಏನಿದು ಮ್ಯೂಲ್ ಅಕೌಂಟ್?: ಅಕ್ರಮ ವರ್ಗಾವಣೆಯ ಜಾಲದ ಕೊಂಡಿ ಇದು: ಸೈಬಲ್ ಪೊಲೀಸರಿಂದ ಬಯಲಾದ ರಹಸ್ಯ!
ಏನಿದು ಮ್ಯೂಲ್ ಅಕೌಂಟ್?: ಅಕ್ರಮ ವರ್ಗಾವಣೆಯ ಜಾಲದ ಕೊಂಡಿ ಇದು: ಸೈಬಲ್ ಪೊಲೀಸರಿಂದ ಬಯಲಾದ ರಹಸ್ಯ!
ಕೇರಳದ ವಯನಾಡು ಜಿಲ್ಲೆಯಲ್ಲಿ 500ಕ್ಕೂ ಹೆಚ್ಚು ಜನರು 'ಮ್ಯೂಲ್ ಅಕೌಂಟ್' ದಂಧೆಗೆ ಬಲಿಯಾಗಿ ಗಂಭೀರ ಕಾನೂನು ಸಂಕಷ್ಟ ಎದುರಿಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ವಂಚಕರಿಂದ ಹೀಗೆ ಮೋಸ ಹೋದವರಲ್ಲಿ ಮಹಿಳೆಯರು ಹಾಗೂ ಯುವಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ಸೈಬರ್ ಪೊಲೀಸರು.
ಮ್ಯೂಲ್ ಅಕೌಂಟ್ ಎಂದರೇನು...?
ಒಂದು ಬಗೆಯಲ್ಲಿ ಬಾಡಿಗೆ ರೂಪದಲ್ಲಿ ಬ್ಯಾಂಕ್ ಖಾತೆ ಪಡೆದು, ಅದನ್ನು ಹಣ ಅಕ್ರಮ ವರ್ಗಾವಣೆ ಚಟುವಟಿಕೆಗಳಿಗೆ ಬಳಸುವುದು.
ವಯನಾಡು ಜಿಲ್ಲೆಯ ಹೊರಗಿನಿಂದ ಬಂದ ವಂಚಕರು ಸ್ಥಳೀಯರಿಗೆ ತಮ್ಮ ಬ್ಯಾಂಕ್ ಖಾತೆಗಳನ್ನು ಬಾಡಿಗೆ ನೀಡುವಂತೆ ಆಮಿಷ ಒಡ್ಡಿ, ಬಳಿಕ ಅವರು ಆ ಖಾತೆಗಳನ್ನು ಅಕ್ರಮ ಹಣಕಾಸು ವಹಿವಾಟುಗಳಿಗೆ ಬಳಸಿದ್ದಾರೆ. ಇದರಿಂದಾಗಿ ಈಗ ಖಾತೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಹೀಗೆ ಖಾತೆ ನೀಡಿದ ಸ್ಥಳೀಯರು ಈಗ ಉತ್ತರ ಭಾರತ ಮತ್ತು ಈಶಾನ್ಯ ರಾಜ್ಯಗಳ ವಿವಿಧ ಜಿಲ್ಲೆಗಳಲ್ಲಿ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.
'ಮ್ಯೂಲ್ ಅಕೌಂಟ್' ದಂಧೆ ಪ್ರಕರಣ ಸಂಬಂದ ಕಂಬಲಕ್ಕಾಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆರು ವ್ಯಕ್ತಿಗಳ ವಿರುದ್ಧ ತನಿಖೆ ನಡೆಯುತ್ತಿದೆ. ಅವರಲ್ಲಿ ಒಬ್ಬ 27 ವರ್ಷದ ಇಸ್ಮಾಯಿಲ್‌ನನ್ನು ನಾಗಾಲ್ಯಾಂಡ್ ಪೊಲೀಸರು ಬಂಧಿಸಿ ಕೊಹಿಮಾಗೆ ಕರೆದೊಯ್ದಿದ್ದಾರೆ.
ಮತ್ತೊಬ್ಬ ಯುವಕ ಮುಹಮ್ಮದ್ ಫನಿಶ್ ಅವರ ಖಾತೆಯ ಮೂಲಕ ವಂಚಕರು 58 ಸಾವಿರ ರೂ.ಗಳ ವಹಿವಾಟು ನಡೆಸಿದ್ದು, ಫನಿಶ್‌ಗೆ ಡೆಹ್ರಾಡೂನ್ ಪೊಲೀಸರು ನೋಟಿಸ್ ನೀಡಿದ್ದಾರೆ.