-->
ತೀರ್ಪು ಪ್ರಕಟಿಸಿದ ಬಳಿಕ ಜಾಲತಾಣದಲ್ಲಿ ವಿಳಂಬ ಮಾಡಬೇಡಿ: ದೇಶದ ಹೈಕೋರ್ಟ್‌ಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶನ

ತೀರ್ಪು ಪ್ರಕಟಿಸಿದ ಬಳಿಕ ಜಾಲತಾಣದಲ್ಲಿ ವಿಳಂಬ ಮಾಡಬೇಡಿ: ದೇಶದ ಹೈಕೋರ್ಟ್‌ಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶನ

ತೀರ್ಪು ಪ್ರಕಟಿಸಿದ ಬಳಿಕ ಜಾಲತಾಣದಲ್ಲಿ ವಿಳಂಬ ಮಾಡಬೇಡಿ: ದೇಶದ ಹೈಕೋರ್ಟ್‌ಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶನ





ದೇಶದ ವಿವಿಧ ರಾಜ್ಯಗಳ ಹೈಕೋರ್ಟ್‌ಗಳು ತೀರ್ಪು ನೀಡಿದ ಬಳಿಕ ಅದರ ಪ್ರತಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲು ವಿಳಂಬ ಮಾಡುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ.


ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಶ್ರೀ ಜೆ.ಬಿ. ಪರ್ದೀವಾಲಾ ಮತ್ತು ಸಂದೀಪ್ ಮೆಹ್ತಾ ಅವರಿದ್ದ ನ್ಯಾಯಪೀಠ ಈ ಆತಂಕ ವ್ಯಕ್ತಪಡಿಸಿದೆ.


ತೀರ್ಪಿನ ಆಪರೇಟಿವ್ ಭಾಗಗಳನ್ನು ಬಹಿರಂಗ ನ್ಯಾಯಾಲಯದಲ್ಲಿ ಉದ್ದರಣೆ ಮಾಡಿದ ಬಳಿಕ ತಿಂಗಳು, ವರ್ಷ ಕಳೆದರೂ ತೀರ್ಪಿನ ಪೂರ್ಣ ಭಾಗವನ್ನು ಜಾಲತಾಣದಲ್ಲಿ ಪ್ರಕಟಿಸುವುದಿಲ್ಲ. ಹೈಕೋರ್ಟ್‌ನ ಈ ವಿಳಂಬ ಧೋರಣೆ ಇತ್ತೀಚೆಗೆ ಹೆಚ್ಚಾಗಿ ಕಂಡುಬರುತ್ತಿದೆ ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿತು.


ಈ ವಿಳಂಬ ಧೋರಣೆಯಿಂದ ದಾವೆದಾರರು ಸಕಾಲಿಕ ನ್ಯಾಯಾಂಗ ಪರಿಹಾರ ಪಡೆಯುವ ಹಕ್ಕಿನಿಂದ ವಂಚಿತರಾಗುತ್ತಾರೆ. ಇನ್ನು ಮುಂದೆ, ಯಾವುದೇ ಪ್ರಕರಣದಲ್ಲಿ ತೀರ್ಪಿನ ಆಪರೇಟಿವ್ ಭಾಗವನ್ನು ಘೋಷಿಸಿದ ಬಳಿಕ ಹೈಕೋರ್ಟ್‌ಗಳು ತಮ್ಮ ಆದೇಶದ ಪ್ರತಿಯನ್ನು ಜಾಲತಾಣಗಳಲ್ಲಿ ಪ್ರಕಟಿಸುವುದರಲ್ಲಿ ವಿಳಂಬ ಮಾಡಬಾರದು ಎಂದು ನ್ಯಾಯಪೀಠ ನಿರ್ದೇಶನ ನೀಡಿದೆ.


"ಅನಿಲ್ ರಾಯ್ ವಿರುದ್ಧ ಬಿಹಾರ ಸರ್ಕಾರ" ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಈ ಹಿಂದೆ ನೀಡಿದ ನಿರ್ದೇಶನಗಳನ್ನು ಪುನರುಚ್ಚರಿಸಿದ ನ್ಯಾಯಪೀಠ, ನ್ಯಾಯದಾನದಲ್ಲಿ ಕ್ಷಿಪ್ರತೆಯನ್ನು ಕಾಯ್ದುಕೊಳ್ಳಲು ವಿಳಂಬವಿಲ್ಲದೆ ತೀರ್ಪು ಅಪ್‌ಲೋಡ್ ಮಾಡುವತ್ತ ಗಮನ ಹರಿಸಬೇಕು ಎಂದು ಹೈಕೋರ್ಟ್‌ಗಳಿಗೆ ಕಿವಿಮಾತು ಹೇಳಿತು.


ಪ್ರಕರಣ: ರಾಜನ್ ವಿರುದ್ಧ ಹರಿಯಾಣ ರಾಜ್ಯ

ಸುಪ್ರೀಂ ಕೋರ್ಟ್‌

Ads on article

Advertise in articles 1

advertising articles 2

Advertise under the article