-->
ಡಿಕ್ರಿಗೆ ತೀರ್ಪುಋಣಿಯ ಪತ್ನಿ 'ಅಪರಿಚಿತ'ರಲ್ಲ: ಅವರಿಗೆ ಆದೇಶ XXI ನಿಯಮ 99 CPC ಅನ್ನು ಜಾರಿಗೊಳಿಸಲು ಸಾಧ್ಯವಿಲ್ಲ- ದೆಹಲಿ ಹೈಕೋರ್ಟ್ ತೀರ್ಪು

ತೀರ್ಪುಋಣಿಯ ಪತ್ನಿ ಯಾ ಪತಿಗೆ ಡಿಕ್ರಿಗೆ 'ಅಪರಿಚಿತ'ರಲ್ಲ. ಡಿಕ್ರಿಧಾರಕರು ಅವರಿಗೆ ಆದೇಶ XXI ನಿಯಮ 99 (CPC) ಅನ್ನು ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ದೆಹಲಿ ಹೈಕೋರ್ಟ್ ತೀರ್ಪು ನೀಡಿದೆ.

ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿ ಮನೋಜ್ ಜೈನ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ.

ತೀರ್ಪುಋಣಿ ಅಥವಾ ತೀರ್ಪುಋಣಿಯ ಸಂಗಾತಿ (ಪತಿ ಅಥವಾ ಪತ್ನಿ) ಸೇರಿದಂತೆ ಅವರ ಪರವಾಗಿ ಕಾರ್ಯನಿರ್ವಹಿಸುವ ಯಾರಾದರೂ ಆದೇಶ XXI ನಿಯಮ 99 ಅನ್ನು ಅನ್ವಯಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಸ್ಪಷ್ಟವಾಗಿ ಹೇಳಿದೆ.

ಈ ನಿಬಂಧನೆಯು ಕಟ್ಟುನಿಟ್ಟಾಗಿ ಮೂರನೇ ವ್ಯಕ್ತಿಗಳು/ಅಪರಿಚಿತರಿಗೆ ಮಾತ್ರ ಉದ್ದೇಶಿಸಲಾಗಿದೆಯೇ ಹೊರತು ತೀರ್ಪುಋಣಿ ಜೊತೆಗೆ ಆಂತರಿಕವಾಗಿ ಸಂಪರ್ಕ ಹೊಂದಿರುವ ವ್ಯಕ್ತಿಗಳಿಗೆ ಅಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಡಿಕ್ರಿಧಾರಕರು ವಿವಾದಿತ ಆಸ್ತಿಯ ಸಂಪೂರ್ಣ ಮತ್ತು ವಿಶೇಷ ಮಾಲೀಕತ್ವವನ್ನು ಪ್ರತಿಪಾದಿಸಿದ ವಿವಾದದಿಂದ ಸದ್ರಿ ಪ್ರಕರಣವು ಹುಟ್ಟಿಕೊಂಡಿತು. ಪ್ರತಿವಾದಿಯು (ತೀರ್ಪುಋಣಿ) ವಿಚಾರಣೆಗೆ ಸ್ಪರ್ಧಿಸಲು ವಿಫಲವಾದ ನಂತರ, ಸಾಕಷ್ಟು ಅವಕಾಶಗಳ ನೀಡಿದ್ದರೂ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ವಿಚಾರಣಾ ನ್ಯಾಯಾಲಯವು ಡಿಕ್ರಿಧಾರಕರ ಪರವಾಗಿ ಡಿಕ್ರಿ ಹೊರಡಿಸಿ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಈ ಮೇಲ್ಮನವಿ ಸಲ್ಲಿಸಲಾಗಿತ್ತು.

ಪ್ರಕರಣ: ಲೀಲಾವತಿ ವಿರುದ್ಧ ರಾಜೀವ್ ಕುಮಾರ್

ದೆಹಲಿ ಹೈಕೋರ್ಟ್, ಸಿಎಂ(ಎಂ) 1274/2025 Dated 29-08-2025

2025:DHC:7530

Ads on article

Advertise in articles 1

advertising articles 2

Advertise under the article