-->
ಮಹಿಳೆ ಜೊತೆಗೆ ರಾಸಲೀಲೆ: ಹೈಕೋರ್ಟ್ ವರ್ಚುವಲ್‌ ವಿಚಾರಣೆಯಲ್ಲಿ ವಕೀಲನ ಭಾರೀ ಎಡವಟ್ಟು

ಮಹಿಳೆ ಜೊತೆಗೆ ರಾಸಲೀಲೆ: ಹೈಕೋರ್ಟ್ ವರ್ಚುವಲ್‌ ವಿಚಾರಣೆಯಲ್ಲಿ ವಕೀಲನ ಭಾರೀ ಎಡವಟ್ಟು

ಮಹಿಳೆ ಜೊತೆಗೆ ರಾಸಲೀಲೆ: ಹೈಕೋರ್ಟ್ ವರ್ಚುವಲ್‌ ವಿಚಾರಣೆಯಲ್ಲಿ ವಕೀಲನ ಭಾರೀ ಎಡವಟ್ಟು




 

ವಕೀಲರೊಬ್ಬರು ವರ್ಚುವಲ್‌ ವಿಚಾರಣೆಯಲ್ಲಿ ಭಾರೀ ಎಡವಟ್ಟು ಮಾಡಿಕೊಂಡು ಸುದ್ದಿಗೆ ಗ್ರಾಸವಾಗಿದ್ದಾರೆ. ಮಹಿಳೆ ಜೊತೆಗೆ ರಾಸಲೀಲೆ ತೊಡಗಿದ್ದ ವಕೀಲನ ಕಿಸ್ಸಿಂಗ್ ಸೀನ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.


ದೆಹಲಿ ಹೈಕೋರ್ಟ್‌ನ ವರ್ಚುವಲ್ ವಿಚಾರಣೆ ಆರಂಭಕ್ಕೂ ಮುನ್ನ ವಕೀಲ ಮಹಿಳೆಯೊಬ್ಬರಿಗೆ ಕಿಸ್ ಮಾಡಿ ದೊಡ್ಡ ಸುದ್ದಿ ಮಾಡಿದ್ದಾರೆ.


ವಕೀಲರೊಬ್ಬರು ತಮ್ಮ ಕೊಠಡಿಯಲ್ಲಿ ಮಹಿಳೆಗೆ ಮುತ್ತಿಟ್ಟು ರಾಸಲೀಲೆಯಲ್ಲಿ ಮುಳುಗಿರುವುದು ವರ್ಚುವಲ್ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ. ವಕೀಲರ ಕಿಸ್ಸಿಂಗ್ ದೃಶ್ಯವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ಆನ್‌ಲೈನ್‌ ಸೆಷನ್‌ನಲ್ಲಿ ವಿಚಾರಣೆ ನಿಗದಿಯಾಗಿದ್ದ ವೇಳೆ ಲ್ಯಾಪ್‌ಟಾಪ್‌ನ ಕ್ಯಾಮೆರಾ ಆಫ್ ಮಾಡದೆಯೇ ವಕೀಲರು ರಾಸಲೀಲೆ ನಡೆಸಿದ್ದಾರೆ. ಇದನ್ನು ರೆಕಾರ್ಡ್ ಮಾಡಿಕೊಂಡ ಕೆಲವರು ಈ ವಕೀಲರ ದುಷ್ಕರ್ಮವನ್ನು ಬಯಲುಗೊಳಿಸಿದ್ದಾರೆ.


ವಕೀಲರು ಸಮವಸ್ತ್ರ ಧರಿಸಿಯೇ ಮಹಿಳೆಯನ್ನು ಬಲವಂತದಿಂದ ಆಕೆಯ ಕೈಹಿಡಿದು ಹತ್ತಿರಕ್ಕೆ ಸೆಳೆದಿದ್ದಾರೆ. ಆಕೆ ನಿರಾಕರಿಸಿದರೂ ವಕೀಲರು ಸುಮ್ಮನಾಗದೆಯೇ ಇರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ಷೇಪ ವ್ಯಕ್ತವಾಗಿದೆ.


ಶೋನೀ ಕಪೂರ್ ಎಂಬ 'ಎಕ್ಸ್' ಖಾತೆಯಲ್ಲಿ ಈ ಅಶ್ಲೀಲ ದೃಶ್ಯದ ವಿಡಿಯೊ ಪೋಸ್ಟ್ ಮಾಡಲಾಗಿದೆ.


Ads on article

Advertise in articles 1

advertising articles 2

Advertise under the article