
ಸೈಬರ್ ಅಪರಾಧ ಕೃತ್ಯಕ್ಕೆ 136 ಸಿಮ್ ಬಳಸಿದ ಭೂಪ: ರಾಜಸ್ಥಾನದಲ್ಲಿ ಸೆರೆಯಾದ ಕುಖ್ಯಾತ ಆರೋಪಿ!
ಸೈಬರ್ ಅಪರಾಧ ಕೃತ್ಯಕ್ಕೆ 136 ಸಿಮ್ ಬಳಸಿದ ಭೂಪ: ರಾಜಸ್ಥಾನದಲ್ಲಿ ಸೆರೆಯಾದ ಕುಖ್ಯಾತ ಆರೋಪಿ!
ದೇಶದಾದ್ಯಂತ ಸೈಬರ್ ಅಪರಾಧ ಕೃತ್ಯಗಳಿಗೆ ಸಹಕಾರ ನೀಡುತ್ತಿದ್ದ ಆರೋಪದ ಮೇಲೆ 33 ವರ್ಷದ ವ್ಯಕ್ತಿಯನ್ನು ಆರೋಪಿಯನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಯನ್ನು ರಾಜಸ್ಥಾನದ ಝಲಾವರ್ ನಿವಾಸಿ ಮೋಹಿತ್ ಗೋಚರ್ ಎಂದು ಗುರುತಿಸಲಾಗಿದೆ. ಚೆನ್ನೈನ ಸೈಬರ್ ಅಪರಾಧ ತನಿಖಾ ತಂಡ ಹಾಗೂ ರಾಜಸ್ಥಾನದ ಝಲಾವರ್ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.
ಬಂಧಿತ ಝಲಾವರ್ 1.82 ಕೋಟಿ ರೂ. ಹೂಡಿಕೆ ವಂಚನೆ ಹಗರಣಕ್ಕೆ ಸಂಬಂಧಿಸಿದಂತೆ ಚೆನ್ನೈನಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಬೇಕಾಗಿದ್ದ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಕುಮಾರ್ ಮಾಹಿತಿ ನೀಡಿದ್ದಾರೆ.
ಗುಪ್ತಚರ ಮತ್ತು ಸ್ಥಳೀಯ ಮೂಲಗಳಿಂದ ದೊರೆತ ಮಾಹಿತಿ ಆಧಾರದ ಮೇಲೆ ಆತನನ್ನು ಪತ್ತೆಹಚ್ಚಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪೊಲೀಸರ ಪ್ರಕಾರ, ಗೋಚರ್ ಸಂಘಟಿತ ಸೈಬರ್ ಅಪರಾಧ ಸಮೂಹದ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ. ಈತ ನಕಲಿ ಆಧಾರ್, ಪ್ಯಾನ್ ಕಾರ್ಡ್‌ಗಳನ್ನು ಬಳಸಿ ಹಲವು ಬ್ಯಾಂಕ್‌ಗಳಲ್ಲಿ ಖಾತೆ ತೆರೆದಿದ್ದ. ಸಾಕಷ್ಟು ನಕಲಿ ಸಿಮ್ ಕಾರ್ಡ್‌ಗಳನ್ನೂ ಹೊಂದಿದ್ದ.
ಈ ಎಲ್ಲವನ್ನೂ ಆರೋಪಿ ಆನ್ ಲೈನ್ ವಂಚನೆ ಹಾಗೂ ಹಣದ ಅಕ್ರಮ ವರ್ಗಾವಣೆ ಸಲುವಾಗಿ ಸೈಬರ್ ಅಪರಾಧ ಕೃತ್ಯವೆಸಗುವವರಿಗೆ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.