
ವರ್ಷ ಕಳೆದರೂ 'ಫುಡ್' ಬಿಲ್ ನೀಡದ ಪ್ರತಿಷ್ಠಿತ ಹೊಟೇಲ್ ಉದ್ಯಮಿ: ರೂ. 5000/- ಬಾಕಿ ಕೇಳಿ ಲೀಗಲ್ ನೋಟಿಸ್ ನೀಡಿದ ಸಂಸ್ಥೆ
ವರ್ಷ ಕಳೆದರೂ 'ಫುಡ್' ಬಿಲ್ ನೀಡದ ಪ್ರತಿಷ್ಠಿತ ಹೊಟೇಲ್ ಉದ್ಯಮಿ: ರೂ. 5000/- ಬಾಕಿ ಕೇಳಿ ಲೀಗಲ್ ನೋಟಿಸ್ ನೀಡಿದ ಸಂಸ್ಥೆ
ಇದು ಕೇವಲ ರೂ. 5000/- ಮೊತ್ತದ ಬಿಲ್ ಬಾಕಿ ಇಟ್ಟ ಪ್ರಕರಣ. ಒಂದು ವರ್ಷದ ಹಿಂದಿನ ಬಿಲ್ ಮೊತ್ತ ನೀಡದ ಹೊಟೇಲ್ ಉದ್ಯಮಿಗೆ ಇದೀಗ ಸಂಕಷ್ಟ ಎದುರಾಗಿದೆ. ಮೂಡಬಿದಿರೆಯ ಹೊಟೇಲ್ ಮಾಲೀಕ ಸುರೇಶ್ ಎಂಬವರು ಇದೀಗ ಸಂಕಷ್ಟಕ್ಕೊಳಗಾಗಿದ್ದು, ಬಿಲ್ ಮೊತ್ತ ಪಾವತಿಸುವಂತೆ ಅವರಿಗೆ ನೋಟೀಸ್ ಜಾರಿಗೊಳಿಸಲಾಗಿದೆ.
ಮೂಡಬಿದಿರೆಯ ಸಮಾಜ ಮಂದಿರ ಬಳಿಯ ಪ್ರತಿಷ್ಠಿತ ಜಯಶ್ರೀ ಹೊಟೇಲ್ ಮಾಲೀಕ ಸುರೇಶ್ ಎಂಬವರು ಬಾಕಿ ಇಟ್ಟ ಹೊಟೇಲ್ ಉದ್ಯಮಿಯಾಗಿದ್ದಾರೆ. ಮಂಗಳೂರಿನ ಫುಡ್ ಪ್ರಾಡಕ್ಟ್ ಸಂಸ್ಥೆಯಿಂದ ಮೂಡಬಿದಿರೆಯ ಹೊಟೇಲ್ ಉದ್ಯಮಿ ಸುರೇಶ್ 'ಆಹಾರ ಪದಾರ್ಥ' ಆರ್ಡರ್ ಮಾಡಿ ತರಿಸಿಕೊಂಡಿದ್ದರು. ಆದರೆ, ಇದರ ಬಿಲ್ ಪಾವತಿಸಿರಲಿಲ್ಲ.
ಈ ಬಾಕಿ ಮೊತ್ತ ನೀಡದೇ ಇದ್ದ ಹಿನ್ನೆಲೆಯಲ್ಲಿ ಪಾವತಿಸುವಂತೆ ಕೋರಿ ಲೀಗಲ್ ನೋಟೀಸ್ ಜಾರಿಗೊಳಿಸಲಾಗಿದೆ. 2024ರಲ್ಲಿ ಅವರು ಮಂಗಳೂರಿನ ಸಂಸ್ಥೆಯೊಂದರಿಂದ ಒಟ್ಟು 15 ಕಿಲೋ ಹಲ್ವಾ ತರಿಸಿಕೊಂಡಿದ್ದರು. ಆದರೆ, ಆ ಫುಡ್ ಬಿಲ್ ಹಣವನ್ನು ಬಾಕಿ ಇಟ್ಟಿದ್ದರು.
ಮಂಗಳೂರಿನ ಸಂಸ್ಥೆಯ ಸಿಬ್ಬಂದಿ ಪದೇ ಪದೇ ಈ ಬಿಲ್ ಮೊತ್ತವನ್ನು ಪಾವತಿಸುವಂತೆ ಕೇಳಿಕೊಂಡಾಗ ಹಣ ನೀಡದೆ ಸತಾಯಿಸಿದ್ದರು. ಅಂತಿಮವಾಗಿ ಕಾನೂನು ಹೋರಾಟಕ್ಕೆ ಮುಂದಾಗಿರುವ ಮಂಗಳೂರಿನ ಸಂಸ್ಥೆ ವಕೀಲರ ಮೂಲಕ ಲೀಗಲ್ ನೋಟಿಸ್ ಜಾರಿಗೊಳಿಸಿದೆ.
ಕ್ಯಾಟರಿಂಗ್ ಕೂಡ ನಡೆಸುತ್ತಿರುವ ಜಯಶ್ರೀ ಹೊಟೇಲ್ ಮಾಲೀಕರಾದ ಸುರೇಶ್ ಅವರಿಗೆ ಲೀಗಲ್ ನೋಟೀಸ್ ಜಾರಿಯಾಗಿದ್ದು, ಈ ಕಾನೂನು ಹೋರಾಟ 'ಉಳ್ಳವರ' 'ಸಣ್ಣತನ'ಕ್ಕೆ ಸಾಕ್ಷಿಯಾಗಿದೆ.