-->
ಡಿಕ್ರಿ ಅಮಲ್ಜಾರಿ ಪ್ರಕರಣಗಳ ನ್ಯಾಯತೀರ್ಮಾನದಲ್ಲಿ ವಿಳಂಬ: ನ್ಯಾಯಾಲಯಗಳ ಕಾರ್ಯಕ್ಷಮತೆಗೆ ಸುಪ್ರೀಂ ಕೋರ್ಟ್ ಬೇಸರ, ಮತ್ತೆ ಆರು ತಿಂಗಳ ಗಡುವು

ಡಿಕ್ರಿ ಅಮಲ್ಜಾರಿ ಪ್ರಕರಣಗಳ ನ್ಯಾಯತೀರ್ಮಾನದಲ್ಲಿ ವಿಳಂಬ: ನ್ಯಾಯಾಲಯಗಳ ಕಾರ್ಯಕ್ಷಮತೆಗೆ ಸುಪ್ರೀಂ ಕೋರ್ಟ್ ಬೇಸರ, ಮತ್ತೆ ಆರು ತಿಂಗಳ ಗಡುವು

ಡಿಕ್ರಿ ಅಮಲ್ಜಾರಿ ಪ್ರಕರಣಗಳ ನ್ಯಾಯತೀರ್ಮಾನದಲ್ಲಿ ವಿಳಂಬ: ನ್ಯಾಯಾಲಯಗಳ ಕಾರ್ಯಕ್ಷಮತೆಗೆ ಸುಪ್ರೀಂ ಕೋರ್ಟ್ ಬೇಸರ, ಮತ್ತೆ ಆರು ತಿಂಗಳ ಗಡುವು





ದೇಶದ ವಿವಿಧ ನ್ಯಾಯಾಲಯಗಳಲ್ಲಿ 8.82 ಲಕ್ಷಕ್ಕೂ ಹೆಚ್ಚು ಡಿಕ್ರಿ ಅಮಲ್ಜಾರಿ ಪ್ರಕರಣಗಳ ಅರ್ಜಿಗಳು ಇತ್ಯರ್ಥಕ್ಕೆ ಬಾಕಿ ಇರುವುದು ಅತ್ಯಂತ ನಿರಾಶಾದಾಯಕ ಎಂದು ಸುಪ್ರೀಂ ಕೋರ್ಟ್ ಬೇಸರ ವ್ಯಕ್ತಪಡಿಸಿದೆ.


ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದೀವಾಲಾ ಮತ್ತು ಪಂಕಜ್ ಮಿತ್ತಲ್ ಅವರಿದ್ದ ವಿಭಾಗೀಯ ನ್ಯಾಯಪೀಠ ನ್ಯಾಯಾಲಯದ ವ್ಯವಹರಣೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.


ಡಿಕ್ರಿ ಅಮಲ್ಜಾರಿ ಪ್ರಕರಣಗಳನ್ನು (ಎಕ್ಸಿಕ್ಯೂಷನ್ ಕೇಸ್‌) ಆರು ತಿಂಗಳ ಒಳಗೆ ಇತ್ಯರ್ಥ ಮಾಡುವಂತೆ ಸಿವಿಲ್ ನ್ಯಾಯಾಲಯಗಳಿಗೆ ಸೂಚಿಸಬೇಕು ಎಂದು ದೇಶದ ಎಲ್ಲ ಹೈಕೋರ್ಟ್‌ಗಳಿಗೆ ಕರೆ ನೀಡಿತ್ತು. ಈ ಬಗ್ಗೆ ಮಾರ್ಚ್ 6ರಂದು ವಿಸ್ತೃತ ನಿರ್ದೇಶನವನ್ನೂ ನೀಡಲಾಗಿತ್ತು.



ಸಿವಿಲ್ ವಿವಾದಗಳಲ್ಲಿ ನ್ಯಾಯಾಲಯಗಳು ಹೊರಡಿಸಿದ ಆದೇಶಗಳನ್ನು ಜಾರಿಗೊಳಿಸುವಂತೆ ಕೋರಿ ಡಿಕ್ರಿ ಹೊಂದಿರುವವರು (ಡಿಕ್ರಿ ಹೋಲ್ಡರ್) ಆ ಡಿಕ್ರಿಯ ಜಾರಿಗೊಳಿಸಲು ನ್ಯಾಯ ವ್ಯಾಪ್ತಿಯ ಕೋರ್ಟ್‌ಗಳಲ್ಲಿ ಅಮಲ್ಜಾರಿ ಅರ್ಜಿಗಳನ್ನು ಸಲ್ಲಿಸುತ್ತಾರೆ. ಇಂತಹ ವಿಷಯದಲ್ಲಿ ಯಾವುದೇ ವಿಳಂಬ ಆಗಬಾರದು. ಒಂದು ವೇಳೆ ವಿಳಂಬ ಆದರೆ ಸಂಬಂಧಿಸಿದ ಪೀಠಾಸೀನ ಅಧಿಕಾರಿಗಳೇ ಹೊಣೆ ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ.


3.85 ಲಕ್ಷ ಅರ್ಜಿಗಳ ವಿಲೇವಾರಿ

ಮಾರ್ಚ್ 6ರಿಂದ ಆರು ತಿಂಗಳಲ್ಲಿ ಈ ರೀತಿಯ ಒಟ್ಟು 3,38,685 ಅರ್ಜಿಗಳನ್ನು ತೀರ್ಮಾನಿಸಿ ವಿಲೇವಾರಿ ಮಾಡಲಾಗಿದೆ. ಇನ್ನೂ 8,82,578 ಅರ್ಜಿಗಳು ಬಾಕಿಯಿವೆ' ಎಂದು ಸುಪ್ರೀಂ ಕೋರ್ಟ್‌ ನ್ಯಾಯಪೀಠ ಹೇಳಿದೆ.


'ಆದೇಶ ನೀಡಿದ ನಂತರ, ಆ ಆದೇಶವನ್ನು ಜಾರಿ ಮಾಡಲು ವರ್ಷಾನುಗಟ್ಟಲೆ ಬೇಕು ಎಂಬುದು ಅರ್ಥಹೀನ ಮತ್ತು ಇದೊಂದು ನ್ಯಾಯದಾನ ವ್ಯವಸ್ಥೆಯ ಆಣಕ' ಎಂದು ಪೀಠ ಉಲ್ಲೇಖಿಸಿದೆ.


ಬಾಕಿ ಇರುವ ಡಿಕ್ರಿ ಅಮಲ್ಟಾರಿ ಅರ್ಜಿಗಳ ಪರಿಣಾಮಕಾರಿ ಮತ್ತು ತ್ವರಿತ ವಿಲೇವಾರಿಗೆ ಹೈಕೋರ್ಟ್‌ಗಳು ಜಿಲ್ಲಾ ನ್ಯಾಯಾಲಯಗಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಪೀಠ ಮತ್ತೊಮ್ಮೆ ಸೂಚನೆ ನೀಡಿತು.


ಕರ್ನಾಟಕ ಹೈಕೋರ್ಟ್ ಬಗ್ಗೆ ಸುಪ್ರೀಂ ಕೋರ್ಟ್ ಬೇಸರ


ಆರು ತಿಂಗಳಲ್ಲಿ ವಿಲೇವಾರಿ ಮಾಡಿರುವ ಮತ್ತು ಬಾಕಿ ಇರುವ ಡಿಕ್ರಿ ಅಮಲ್ಜಾರಿ ಅರ್ಜಿಗಳ ಬಗ್ಗೆ ಮಾಹಿತಿ ಒದಗಿಸುವಂತೆ ಸುಪ್ರೀಂ ಕೋರ್ಟ್‌ ಕರ್ನಾಟಕ ಹೈಕೋರ್ಟ್‌ಗೂ ಸೂಚಿಸಿತ್ತು. ಆದರೆ, ಅಗತ್ಯ ದತ್ತಾಂಶಗಳನ್ನು ನೀಡುವಲ್ಲಿ ಹೈಕೋರ್ಟ್ ವಿಫಲವಾಗಿತ್ತು.


ಈ ಬಗ್ಗೆ ಮತ್ತೊಮ್ಮೆ ಜ್ಞಾಪನೆ ಪತ್ರ ಕಳುಹಿಸುವಂತೆ ನ್ಯಾಯಪೀಠ ಸೂಚನೆ ನೀಡಿತು. ಈಗಾಗಲೇ ಸೂಚಿಸಿದ ನಿಗದಿತ ಅವಧಿಯಲ್ಲಿ ಏಕೆ ಮಾಹಿತಿ ನೀಡಿಲ್ಲ ಎಂಬುದರ ಕುರಿತು ಕರ್ನಾಟಕ ಹೈಕೋರ್ಟ್ ರಿಜಿಸ್ಟ್ರಾ‌ರ್ ಜನರಲ್‌ ಅವರು ಎರಡು ವಾರಗಳಲ್ಲಿ ವಿವರಣೆ ನೀಡಬೇಕು ಎಂದೂ ಪೀಠ ನಿರ್ದೇಶನ ನೀಡಿತು.


ಪ್ರಕರಣದ ವಿಚಾರಣೆಯನ್ನು 2026ರ ಏಪ್ರಿಲ್ 10ಕ್ಕೆ ಮುಂದೂಡಿದ ನ್ಯಾಯಪೀಠ, 'ಮುಂದಿನ ವಿಚಾರಣೆ ವೇಳೆಗೆ ಎಲ್ಲ ಹೈಕೋರ್ಟ್‌ಗಳು ಈ ಕುರಿತ ಅರ್ಜಿಗಳ ಸ್ಥಿತಿಗತಿಗೆ ಸಂಬಂಧಿಸಿದ ಪೂರ್ಣ ದತ್ತಾಂಶ ಒದಗಿಸಬೇಕು' ಎಂದು ನಿರ್ದೇಶಿಸಿತು.




Ads on article

Advertise in articles 1

advertising articles 2

Advertise under the article