ಇಬ್ಬರು ಯುವತಿಯರ ಜೊತೆಗೆ ಏಕಕಾಲಕ್ಕೆ ಪ್ರೇಮ: ಒಂದೇ ಮಂಟಪದಲ್ಲಿ ಇಬ್ಬರನ್ನು ವಿವಾಹವಾದ ಚಿತ್ರದುರ್ಗದ ಯುವಕ!
Sunday, October 19, 2025
ಇಬ್ಬರು ಯುವತಿಯರ ಜೊತೆಗೆ ಏಕಕಾಲಕ್ಕೆ ಪ್ರೇಮ: ಒಂದೇ ಮಂಟಪದಲ್ಲಿ ಇಬ್ಬರನ್ನು ವಿವಾಹವಾದ ಚಿತ್ರದುರ್ಗದ ಯುವಕ!
ಚಿತ್ರದುರ್ಗ ನಗರದ ಯುವಕನೊಬ್ಬ 13 ವರ್ಷಗಳ ಗೆಳತಿ ಹಾಗೂ 7 ವರ್ಷಗಳಿಂದ ಪ್ರೀತಿಸುತ್ತಿದ್ದ ಇಬ್ಬರನ್ನು ಒಂದೇ ಮಂಟಪದಲ್ಲಿ ಮದುವೆಯಾಗಿ ಕುತೂಹಲಕ್ಕೆ ಕಾರಣವಾಗಿದ್ದಾನೆ.
ಚಿತ್ರದುರ್ಗದ ಜೆ.ಜೆ.ಹಟ್ಟಿ ಬಡಾವಣೆ ನಿವಾಸಿ ವಸೀಂ ಎಂಬಾತನೇ ಗೋವಾ ಮೂಲದ ಇಬ್ಬರು ಯುವತಿಯರನ್ನು ವಿವಾಹವಾಗಿ ಸುದ್ದಿಗೆ ಗ್ರಾಸವಾಗಿದ್ದಾನೆ.
ಒಬ್ಬಳು ಎಂಜಿನಿಯರಿಂಗ್ ಮುಗಿಸಿ ಉದ್ಯೋಗದಲ್ಲಿದ್ದರೆ, ಮತ್ತೊಬ್ಬಳು ಕೆಎಫ್‌ಸಿ ಸಂಸ್ಥೆಯ ಉದ್ಯೋಗಿ.
ಫ್ಯಾಬ್ರಿಕೇಶನ್ ಕೆಲಸ ಮಾಡುತ್ತಿರುವ ವಸೀಂಗೆ ಶಿಫಾ ಎಂಬ ಯುವತಿ ಜತೆಗೆ 13 ವರ್ಷಗಳಿಂದ ಸ್ನೇಹ ಇತ್ತು.
ಮತ್ತೊಂದೆಡೆ ಜನ್ನತ್ ಎಂಬ ಯುವತಿ ಜತೆಗೆ ಏಳು ವರ್ಷಗಳಿಂದ ಪ್ರೀತಿ ಬೆಳೆದಿದೆ. ಇವರಿಬ್ಬರ ಮನವೊಲಿಸಿ ಮದುವೆಯಾಗುವಲ್ಲಿ ವಸೀಂ ಸಫಲನಾಗಿದ್ದು, ಮೂರೂ ಕುಟುಂಬಗಳು ಪರಸ್ಪರ ಮಾತುಕತೆ ನಡೆಸಿ ಮದುವೆಗೆ ಒಪ್ಪಿಗೆ ಸೂಚಿಸಿವೆ.