-->
ಬಡಾವಣೆ ಅಭಿವೃದ್ಧಿಗೆ ನಿಯಮ ರೂಪಿಸಿದ ಗ್ರಾಮೀಣಾಭಿವೃದ್ಧಿ ಇಲಾಖೆ: ಗ್ರಾಮ ಪಂಚಾಯತ್‌ಗೆ ಅನುಮೋದನೆ ಅಧಿಕಾರ- ಸರ್ಕಾರ ಸುತ್ತೋಲೆ

ಬಡಾವಣೆ ಅಭಿವೃದ್ಧಿಗೆ ನಿಯಮ ರೂಪಿಸಿದ ಗ್ರಾಮೀಣಾಭಿವೃದ್ಧಿ ಇಲಾಖೆ: ಗ್ರಾಮ ಪಂಚಾಯತ್‌ಗೆ ಅನುಮೋದನೆ ಅಧಿಕಾರ- ಸರ್ಕಾರ ಸುತ್ತೋಲೆ

ಬಡಾವಣೆ ಅಭಿವೃದ್ಧಿಗೆ ನಿಯಮ ರೂಪಿಸಿದ ಗ್ರಾಮೀಣಾಭಿವೃದ್ಧಿ ಇಲಾಖೆ: ಗ್ರಾಮ ಪಂಚಾಯತ್‌ಗೆ ಅನುಮೋದನೆ ಅಧಿಕಾರ- ಸರ್ಕಾರ ಸುತ್ತೋಲೆ





ಕರ್ನಾಟಕ ರಾಜ್ಯದಲ್ಲಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಸ್ಥಳೀಯ ಯೋಜನಾ ಪ್ರದೇಶ ಹೊರತುಪಡಿಸಿದ ಜಾಗಗಳಲ್ಲಿ ಬಡಾವಣೆ ಅಭಿವೃದ್ಧಿಗೆ ಹೊಸ ನಿಯಮ ರೂಪಿಸಲಾಗಿದೆ. ಈ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸುತ್ತೋಲೆ ಹೊರಡಿಸಿದ್ದು, ಹೊಸ ನಿಯಮಗಳನ್ನು ಸುತ್ತೋಲೆ ಮೂಲಕ ರೂಪಿಸಲಾಗಿದೆ.


ಸ್ಥಳೀಯ ಯೋಜನಾ ಪ್ರದೇಶದ ಹೊರಗೆ ಇರುವ ಮತ್ತು ಭೂ ಪರಿವರ್ತನೆಗೆ ಒಳಗಾದ ಗ್ರಾಮ ಪಂಚಾಯತ್‌ನ ಜಮೀನುಗಳಿಗೆ ಮಾತ್ರ ಈ ನಿಯಮ ಅನ್ವಯವಾಗುತ್ತದೆ. ಪೂರ್ವಾನುಮೋದನೆ ಪಡೆದ ಈ ಬಡಾವಣೆಗಳಲ್ಲಿನ ನಿವೇಶನಗಳಿಗೆ ಗ್ರಾಮ ಪಂಚಾಯತ್ ಮಟ್ಟದಲ್ಲೇ ಖಾತೆ ಮಾಡಿಕೊಡಲಾಗುವುದು. ಆದರೆ, ಭೂಪರಿವರ್ತನೆ ಇಲ್ಲದೆ ಅಭಿವೃದ್ಧಿ ಪಡಿಸಲಾದ ಬಡಾವಣೆಗಳಿಗೆ ಇದು ಅನ್ವಯವಾಗುವುದಿಲ್ಲ.


ಬಡಾವಣೆಯನ್ನು ಅಭಿವೃದ್ಧಿಪಡಿಸುವುದಕ್ಕೂ ಮೊದಲು ಅದಕ್ಕೆ ಸಂಬಂಧಿತ, ಪರಿವರ್ತಿತ ಜಮೀನಿನ ಮಾಲೀಕ ಬಡಾವಣೆಯ ವಿನ್ಯಾಸವನ್ನು ರಚಿಸಬೇಕು ಎಂಬ ಷರತ್ತನ್ನು ಹಾಕಲಾಗಿದೆ. ಅದೇ ರೀತಿ, ಬಡಾವಣೆಯಲ್ಲಿ ಇರಲಿರುವ ಸಾರ್ವಜನಿಕ ರಸ್ತೆಗಳು, ಉದ್ಯಾನ, ಚರಂಡಿ, ಒಳಚರಂಡಿ, ನೀರಿನ ಕೊಳವೆ ಮಾರ್ಗ, ತ್ಯಾಜ್ಯ ನೀರು ಸಂಸ್ಕರಣ ಘಟಕ, ವಿದ್ಯುತ್ ಜಾಲಗಳಿಗೆ ಸಂಬಂಧಿತ ಇಲಾಖೆ ಅಥವಾ ಪ್ರಾಧಿಕಾರಗಳಿಂದ ನಿರಾಕ್ಷೇಪಣಾ ಪತ್ರ ಪಡೆಯಬೇಕು ಎಂದು ಸುತ್ತೋಲೆಯಲ್ಲಿ ಸೂಚಿಸಿದೆ.


ಈ ಎಲ್ಲ ದಾಖಲೆಗಳನ್ನು ಒಳಗೊಂಡ ಅರ್ಜಿಯನ್ನು ಗ್ರಾಮ ಪಂಚಾಯಿತಿಗೆ ಸಲ್ಲಿಸಿ, ಬಡಾವಣೆ ಅಭಿವೃದ್ಧಿ ಪಡಿಸಲು ಅನುಮತಿ ಪಡೆಯಬೇಕು. ಹೀಗೆ ಅಭಿವೃದ್ಧಿಪಡಿಸಲಾದ ಬಡಾವಣೆಯಲ್ಲಿನ ಸಾರ್ವಜನಿಕ ರಸ್ತೆಗಳು, ಉದ್ಯಾನ, ಚರಂಡಿ- ಒಳಚರಂಡಿ ವ್ಯವಸ್ಥೆ, ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳು, ಸಾರ್ವಜನಿಕ ಬಳಕೆಯ ಪ್ರದೇಶಗಳನ್ನು ಹಕ್ಕು ಪರಿತ್ಯಾಜನಾ ಪತ್ರದ ಮೂಲಕ ಗ್ರಾಮ ಪಂಚಾಯಿತಿಗೆ ಬಿಟ್ಟು ಕೊಡಬೇಕು.


ಹೀಗೆ ಬಿಟ್ಟು ಕೊಟ್ಟ ನಂತರ ಅವುಗಳ ನಿರ್ವಹಣೆಯ ಹೊಣೆಗಾರಿಕೆಯು ಸಂಬಂಧಿತ ಗ್ರಾಮ ಪಂಚಾಯತ್‌ನದ್ದಾಗಿರಲಿದೆ ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.


ಇನ್ನು ಬಡಾವಣೆಯ ಮೂಲೆ ನಿವೇಶನಗಳು, ನಾಗರಿಕ ಬಳಕೆ (ಸಿ.ಎ) ನಿವೇಶನಗಳು ಮತ್ತು ಮಧ್ಯಂತರ ನಿವೇಶನಗಳನ್ನು ಅಡಮಾನ ಒಪ್ಪಂದದ ಅಡಿಯಲ್ಲಿ ಗ್ರಾಮ ಪಂಚಾಯಿತಿಗೆ ಬಡಾವಣೆಯನ್ನು ಅಭಿವೃದ್ಧಿ `ಒಪ್ಪಿಸಬೇಕು. ನಿಗದಿತ ಅವಧಿಯಲ್ಲಿ ಪಡಿಸಿದರೆ, ಅಡಮಾನ ಒಪ್ಪಂದವನ್ನು ರದ್ದುಪಡಿಸಬೇಕು ಮತ್ತು ನಿವೇಶನ ಗಳನ್ನು ಬಡಾವಣೆ ಅಭಿವೃದ್ಧಿದಾರರಿಗೆ ಹಿಂತಿರುಗಿಸಬೇಕು ಎಂದು ಸೂಚಿಸಲಾಗಿದೆ.


ಅಭಿವೃದ್ಧಿಪಡಿಸಲಾದ ಬಡಾವಣೆಯಲ್ಲಿರುವ ಮೂಲಭೂತ ಸೌಕರ್ಯಗಳು ಯಾವುದೇ ದೋಷದಿಂದ ಕೂಡಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ, ಅಭಿವೃದ್ಧಿದಾರರು

ಗ್ರಾಮ ಪಂಚಾಯಿತಿಗೆ ಖಾತರಿ ಒದಗಿಸಬೇಕು. ಮೂಲ ಸೌಕರ್ಯ ಅಭಿವೃದ್ಧಿಗೆ ತಗುಲಿರುವ ಒಟ್ಟು ವೆಚ್ಚದ ಶೇಕಡಾ 10ರಷ್ಟನ್ನು ಬ್ಯಾಂಕ್ ಭದ್ರತೆ ರೂಪದಲ್ಲಿ, ಒಂದು ವರ್ಷಕ್ಕೆ ಗ್ರಾಮ ಪಂಚಾಯತ್‌ ಎಂಜಿನಿಯರಿಂಗ್ ಇಲಾಖೆಯಲ್ಲಿ ಇರಿಸಬೇಕು. ಒಂದು ವರ್ಷದ ನಂತರ ಅದನ್ನು ವಾಪಸ್ ಪಡೆಯಬಹುದಾಗಿದೆ ಎಂದು ತಿಳಿಸಿದೆ.



ಸುತ್ತೋಲೆಯ ಪ್ರಮುಖ ಅಂಶಗಳು ಹೀಗಿವೆ.


ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಸಂಬಂಧಿತ ಇಲಾಖೆ/ಪ್ರಾಧಿಕಾರಗಳಿಂದ ವಿನ್ಯಾಸ ಅನುಮೋದನೆ ಪಡೆದ ನಂತರವಷ್ಟೇ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಲು ಅವಕಾಶ


ಗ್ರಾಮೀಣಾಭಿವೃದ್ಧಿ ಇಲಾಖೆ, ಜಲ ಸಂಪನ್ಮೂಲ ಇಲಾಖೆ, ಎಸ್ಕಾಂಗಳಿಂದ ನಿರಾಕ್ಷೇಪಣಾ ಪತ್ರ ಪಡೆಯುವುದು ಕಡ್ಡಾಯ


ಮೂಲಭೂತ ಸೌಕರ್ಯಗಳ ಅಭಿವೃದ್ಧಿ ವೇಳೆ ಸಂಬಂಧಿತ ಇಲಾಖೆ/ಪ್ರಾಧಿಕಾರ/ವಿಭಾಗಗಳಿಗೆ ಒಟ್ಟು ವೆಚ್ಚದ ಶೇಕಡಾ 5 ರಿಂದ ಶೇಕಡಾ 10 ರವರೆಗೆ ಮೇಲ್ವಿಚಾರಣಾ ಶುಲ್ಕ ಪಾವತಿಸಬೇಕು


ಬಡಾವಣೆಗಳಲ್ಲಿನ ರಸ್ತೆ, ಉದ್ಯಾನ, ಸಾರ್ವಜನಿಕ ಬಳಕೆ ಪ್ರದೇಶ, ನಾಗರಿಕ ಬಳಕೆ ನಿವೇಶನಗಳನ್ನು ಗ್ರಾಮ ಪಂಚಾಯಿತಿಗೆ ಬಿಟ್ಟುಕೊಡುವುದು ಕಡ್ಡಾಯ

Ads on article

Advertise in articles 1

advertising articles 2

Advertise under the article