
ಸರ್ಕಾರಿ ನೌಕರರ ಪದೋನ್ನತಿಗೆ ಹೊಸ ನಿಯಮ: ಇನ್ನು ಪ್ರಮೋಷನ್ ಬೇಕಿದ್ದರೆ ತರಬೇತಿ ಕಡ್ಡಾಯ!
ಸರ್ಕಾರಿ ನೌಕರರ ಪದೋನ್ನತಿಗೆ ಹೊಸ ನಿಯಮ: ಇನ್ನು ಪ್ರಮೋಷನ್ ಬೇಕಿದ್ದರೆ ತರಬೇತಿ ಕಡ್ಡಾಯ!
ರಾಜ್ಯ ಸರ್ಕಾರಿ ನೌಕರರ ಪದೋನ್ನತಿಗೆ ಸರ್ಕಾರ ಹೊಸ ನಿಯಮಗಳನ್ನು ರೂಪಿಸಿದ್ದು, ಪದೋನ್ನತಿ ಬಯಸುವ ನೌಕರರು ತರಬೇತಿಗೊಳಪಡುವುದನ್ನು ಕಡ್ಡಾಯ ಮಾಡಲಾಗಿದೆ.
ರಾಜ್ಯ ಸರ್ಕಾರದ ಗ್ರೂಪ್ ಎ, ಬಿ ಮತ್ತು ಸಿ ವೃಂದ ನೌಕರರ ಪದನ್ನೋತಿಗೆ ತರಬೇತಿ ಕಡ್ಡಾಯಗೊಳಿಸುವ ನಿಯಮಾವಳಿಗಳ ಕರಡು ಪ್ರಕಟಿಸಲಾಗಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಈ ಕುರಿತು ಅಧಿಕೃತವಾಗಿ ಅಧಿಸೂಚನೆ ಹೊರಡಿಸಿದೆ.
ಈ ಅಧಿಸೂಚನೆ ಬಗ್ಗೆ ರಾಜ್ಯ ಸರ್ಕಾರಿ ನೌಕರರು ತಮ್ಮ ಆಕ್ಷೇಪಣೆ ಯಾ ಸಲಹೆ ಹಾಗೂ ಅಭಿಪ್ರಾಯಗಳನ್ನು ಸಲ್ಲಿಸಬಹುದಾಗಿದೆ. ಸಲಹೆ-ಸೂಚನೆ ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ನೌಕರರಿಗೆ 15 ದಿನಗಳ ಕಾಲಾವಕಾಶ ನೀಡಲಾಗಿದೆ.
ಕರ್ನಾಟಕ ರಾಜ್ಯ ನಾಗರಿಕ ಸೇವೆಗಳ ನಿಯಮಗಳು, 2025 ಪ್ರಕಾರ ಗ್ರೂಪ್ ಎ, ಬಿ ಮತ್ತು ಸಿ ವೃಂದದ ನೌಕರರ ಬಡ್ತಿಯ ಹಿಂದಿನ ವರ್ಷದಲ್ಲಿ ಕನಿಷ್ಠ 10 ದಿನಗಳ ಖುದ್ದು ತರಬೇತಿ ಕಡ್ಡಾಯವಾಗಿದೆ.
ಗ್ರೂಪ್ ಸಿಯಲ್ಲಿ ಬರುವ ಚಾಲಕರು ಹಾಗೂ ಗ್ರೂಪ್ ಡಿ ನೌಕರರಿಗೆ ಈ ನಿಯಮ ಅನ್ವಯಿಸುವುದಿಲ್ಲ. ಆನ್‌ಲೈನ್ ಕಲಿಕಾ ವೇದಿಕೆಯನ್ನು ಪ್ರತಿ ವರ್ಷ ಕನಿಷ್ಠ ಸಂಖ್ಯೆಯ ಅಂಕಗಳನ್ನು ಗಳಿಸಬೇಕು.
ಆಫ್‌ಲೈನ್ ತರಬೇತಿಗೆ ಅರ್ಜಿ ಸಲ್ಲಿಸಿದ್ದರೆ ಅವರನ್ನು ಅವರ ವೃಂದ ಜೇಷ್ಠತೆ ಕ್ರಮದಲ್ಲಿ ತರಬೇತಿಗೆ ಕಳುಹಿಸಬೇಕೆಂದು ಆಯಾ ಇಲಾಖೆಗಳಿಗೆ ಸೂಚನೆ ನೀಡಲಾಗಿದೆ.