
ಕೇಂದ್ರ ಸರ್ಕಾರದಿಂದ ಹಬ್ಬದ ಕೊಡುಗೆ: ನೌಕರರು, ಪಿಂಚಣಿದಾರರಿಗೆ ತುಟ್ಟಿಭತ್ಯೆ ಶೇ 3ರಷ್ಟು ಹೆಚ್ಚಳ
ಕೇಂದ್ರ ಸರ್ಕಾರದಿಂದ ಹಬ್ಬದ ಕೊಡುಗೆ: ನೌಕರರು, ಪಿಂಚಣಿದಾರರಿಗೆ ತುಟ್ಟಿಭತ್ಯೆ ಶೇ 3ರಷ್ಟು ಹೆಚ್ಚಳ
ಕೇಂದ್ರ ಸರ್ಕಾರವು ತನ್ನ ನೌಕರರು, ಪಿಂಚಣಿದಾರರಿಗೆ ಹಬ್ಬದ ಕೊಡುಗೆ ನೀಡಿದೆ. ನೌಕರರು, ಪಿಂಚಣಿದಾರರಿಗೆ ತುಟ್ಟಿ ಭತ್ಯೆ (ಡಿಎ) ಹಾಗೂ ತುಟ್ಟಿ ಪರಿಹಾರವನ್ನು (ಡಿಆರ್) ಶೇಕಡಾ 3ರಷ್ಟು ಏರಿಕೆ ಮಾಡಿದೆ.
ಇದರಿಂದ ಹೆಚ್ಚುವರಿಯಾಗಿ ಸರ್ಕಾರಕ್ಕೆ ವಾರ್ಷಿಕ 10,083 ಕೋಟಿ ರೂಪಾಯಿ ಹೊರೆ ಬೀಳಲಿದೆ. ಜಿಎಸ್‌ಟಿ ದರ ಪರಿಷ್ಕರಣೆ ಬೆನ್ನಲ್ಲೇ, ಬೆಲೆ ಏರಿಕೆಯನ್ನು ಸರಿದೂಗಿಸುವ ನಿಟ್ಟಿನಲ್ಲಿ ಈ ಹೆಚ್ಚಳ ಮಾಡಲಾಗಿದೆ.
ಪ್ರಸ್ತುತ ಡಿಎ/ಡಿಆರ್ ಮೊತ್ತವು ಈಗಿರುವ ಮೂಲ ವೇತನ ಅಥವಾ ಪಿಂಚಣಿಯ ಶೇಕಡಾ 55ರಷ್ಟಿದ್ದು, ಮತ್ತೆ ಶೇಕಡಾ 3ರಷ್ಟು ಏರಿಕೆಯಾಗಲಿದೆ. 2025ರ ಜುಲೈ 1ರಿಂದಲೇ ಪೂರ್ವಾ ನ್ವಯವಾಗುವಂತೆ ಜಾರಿಗೆ ಬರಲಿದೆ.
ಸರ್ಕಾರದ ಈ ನಿರ್ಧಾರದಿಂದ 49.19 ಲಕ್ಷ ಕೇಂದ್ರ ಸರ್ಕಾರಿ ನೌಕರರು ಹಾಗೂ 68.72 ಲಕ್ಷ ಪಿಂಚಣಿದಾರರಿಗೆ ಪ್ರಯೋಜನವಾಗಲಿದೆ. 7ನೇ ವೇತನ ಆಯೋಗದ ಶಿಫಾರಸನ್ನು ಆಧರಿಸಿದ ಸೂತ್ರಕ್ಕೆ ಅನುಗುಣವಾಗಿದೆ ಎಂದು ಸರ್ಕಾರ ಹೇಳಿದೆ.